ಚಳ್ಳಕೆರೆ : ಸರ್ಕಾರದ ಆಶಯದಂತೆ ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ಗ್ರಾಮವಾಸ್ತವ್ಯ ಮಾಡಲಾಗುತ್ತಿದ್ದು ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುವತವಾಗಿ ಕೆಲಸ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದ್ದಾರೆ.
ಅವರು ತಾಲೂಕಿನ ಎನ್.ಮಹದೇವಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಗ್ರಾಮವಾಸ್ತವ್ಯದ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಗೊರಕಿಸುವುದು ಸರಕಾರದ ಆಶಯ ಆದ್ದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸಿ ಎಂದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಗ್ರಾಮದಲ್ಲಿ ಪೋಡಿ ಸಮಸ್ಯೆ, ಪಿಂಚಣಿ, ಖಾತೆಬದಲಾವಣೆ, ಸಂಧ್ಯಾಸುರಕ್ಷ, ವಿಧವಾವೇತನ, ವಿಕಲಚೇತನ ವೇತನ ಈಗೇ ಗ್ರಾಮದಲ್ಲಿ ಸ್ವಚ್ಛತೆ ಚರಂಡಿ ಹಾಗೂ ನಿವೇಶನ ಸೇರಿದಂತೆ ಮೂಲಸೌಕರ್ಯಗಳ ಜೊತೆಗೆ ಸರಕಾರದಲ್ಲಿ ಪ್ರತಿನಿಧಿಸಿರುವ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಆಶಯದಂತೆ ಈಗಾಗಲೆ ತಾಲ್ಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ವಾಸ್ತವ್ಯ ಮಾಡಿಲಾಗಿದ್ದು ಉಳಿದಂತೆ ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮಗಳಲ್ಲಿ ಸಮಸ್ಯೆ ತಲೆದೊರದಂತೆ ಮಾಡಲಾಗುವುದು ಎಂದರು.
ಬಾಕ್ಸ್ ಮಾಡಿ :
ಪ್ರತಿ ತಿಂಗಳ ಮೂರನೇ ಶನಿವಾರ ರಾಜಾದ್ಯಾಂತ ನಡೆಯುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮವಾಸ್ತವ್ಯಕ್ಕೆ ಗ್ರಾಮೀಣ ಸೊಗಡಿನ ಮೂಲಕ ಜಿಲ್ಲಾಧಿಕಾರಿಗಳನ್ನು ಆತ್ಮೀಯವಾಗಿ ಗ್ರಾಮದ ಸಾರ್ವಜನಿಕರು ಭರಮಾಡಿಕೊಡಿಕೊಂಡರು.
ತಾಲೂಕಿನ ಎನ್.ಮಹದೇವಪುರ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯಕ್ಕೆ ತಾಲೂಕಿನ ತಹಶೀಲ್ದಾರ್ ಎನ್.ರಘುಮೂರ್ತಿ, ಕಂದಾಯ ಇಲಾಖೆ ಆಯೋಜಿಸಿದ್ದ ಸಮಾರಂಭ ಈಡೀ ಗ್ರಾಮದಲ್ಲಿ ಹಬ್ಬದ ವಾತವರಣ ಮನೆ ಮಾಡಿತ್ತು,
ಇನ್ನೂ ಗ್ರಾಮದ ಹೊರ ವಲಯದಿಂದ ಸಮಾರಂಭದ ವೇದಿಕೆಗೆ ಜಿಲ್ಲಾಧಿಕಾರಿಗಳನ್ನು ಹೂವಿನ ಅಲಂಕೃತಗೊAಡ ಜೋಡೆತ್ತು ಬಂಡಿಯಲ್ಲಿ ಮೆರವಣೆಗೆ ಮೂಲಕ ಜಾನಪದ ನೃತ್ಯದ ಕಹಳೆ, ಕೊಂಬು, ಹಾಗೂ ಮ್ಯಾಸಬೇಡರ ಪಡೆ, ಹಾಗೂ ಬುಡಕಟ್ಟು ಸಮುದಾಯದ ಲಂಬಾಣಿ ಮಹಿಳೆಯರ ವೇಶ ತೊಟ್ಟ ಯುವ ನಾರಿಯರ ಪೂರ್ಣಕುಂಭ ಈಗೇ ವಿವಿಧ ಕಲಾ ತಂಡಗಳ ಗೆಜ್ಜೆ ನಾದಕ್ಕೆ ಜಿಲ್ಲಾಧಿಕಾರಿ ಮನಸೋತು ಬಂಡಿಯಲ್ಲಿ ಸಾರ್ವಜನಿಕರನ್ನು ವಿಕ್ಷಿಸುತ್ತ ಸಮಾರಂಭದ ವೇದಿಕೆಯತ್ತ ಸಾಗಿದರು, ದಾರಿಯುದ್ದಕ್ಕೂ ಗ್ರಾಮದ ಮಹಿಳೆರು ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಆತ್ಮಿಯವಾಗಿ ಸಂತಸ ವ್ಯಕ್ತಪಡಿಸಿ ತಾವುಗಳು ಕೂಡ ಸಮಾರಂಭದ ವೇದಿಕೆಯತ್ತಾ ಹೆಜ್ಜೆ ಹಾಕಿದರು.
ಒಟ್ಟಾರೆ ಗ್ರಾಮವಾಸ್ತವ್ಯ ಈಡೀ ಗ್ರಾಮದ ಸಂಪೂರ್ಣ ಚಿತ್ರಣ ಹಾಗೂ ಗ್ರಾಮ ಆಚಾರ ವಿಚಾರ, ಸಂಪ್ರಾದಯಗಳು ಹಾಗೂ ಜೀವನ ಶೈಲಿಯ ಪದ್ದತಿಗಳನ್ನು ಕೂಡ ಈ ಜಾನಪದ ಶೈಲಿಯ ಸ್ವಾಗತದಲ್ಲಿ ಒಳಗೊಂಡಿತ್ತು.
ಇದೇ ಸಂಧರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

Namma Challakere Local News
error: Content is protected !!