ಚಳ್ಳಕೆರೆ : ಇಂದು ಚಳ್ಳಕೆರೆ ನಗರದ ಅಶೋಕ್ ಸ್ಪೋಟ್ಸ್ ಕ್ಲಬ್ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜನ್ಮದಿನಾಚರಣೆ ಅಂಗವಾಗಿ ಸುಮಾರು 150 ಜನರು ಸ್ವಯಂ ಪ್ರೇರಿತದಾಗಿ ರಕ್ತದಾನ ಮಾಡಿದರು.
ಇನ್ನು ಜೆಡಿಎಸ್ ಪಕ್ಷದ 2023ರ ವಿಧಾನ ಸಭಾ ಚುನಾವÀಣೆಯ ಅಭ್ಯರ್ಥಿ ಎಂ.ರವೀಶ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ಈ ರಕ್ತದಾನ ಶಿಬಿರವನ್ನು ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಉದ್ಘಾಟಿಸಿದರು.
ತದ ನಂತರ ಕ್ಷೇತ್ರದ ನೂರಾರು ಜನರು ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಋಣ ತೀರಿಸಲು ಅವರ ಜನ್ಮದಿನ ನಮಗೆ ಅವಕಾಶವಾಗಿದೆ ಕ್ಷೇತ್ರಕ್ಕೆ ಸುಮಾರು 150 ಕೋಟಿ, ರೂ ರೈತರ ಸಾಲ ಮನ್ನಾ ಮಾಡಿದ ಅವರ ಹೆಗ್ಗಳಿಕೆಗೆ ಇಂದು ಕ್ಷೇತ್ರದಲ್ಲಿ 150ಕ್ಕೂ ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತಿರುವುದು ನಮ್ಮ ಪುಣ್ಯ, ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ರಕ್ತದಾನದಲ್ಲಿ ಭಾಗಹಿಸಿದ ಜನರ ಮಾತಾಗಿದೆ.

ಜೆಡಿಎಸ್ ಮುಖಂಡ ಎಂ.ರವೀಶ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಭದ್ರಾಮೇಲ್ದಂಡೆ ಯೋಜನೆಯಿಂದ ನಮ್ಮ ಬಯಲು ಸೀಮೆ ಇಂದು ಹಸಿರುಕರಣವಾಗಿದೆ ಇಂತಹ ಮಹತ್ವದ ಯೋಜನೆ ಕುಮಾರಣ್ಣನವರ ಕನಸಿನಂತೆ ನೀರು ಹರಿದುಬರುತ್ತಿದೆ, ಅದರಂತೆ ಇಂದು ಚಳ್ಳಕೆರೆ ಕ್ಷೇತ್ರಕ್ಕೆ ಸುಮಾರು 150 ಕೋಟಿ ರೈತರ ಸಾಲ ಮನ್ನಾ ಮಾಡಿದ ಅವರ ಕೀರ್ತಿಗೆ ಇಂದು ಕ್ಷೇತ್ರದಲ್ಲಿ ಅವರ ಜನ್ಮ ದಿನಾಚರಣೆಗೆ 150ಕ್ಕೂ ಹೆಚ್ಚಿನ ಜನರು ರಕ್ತದಾನ ಮಾಡಿರುವುದು ಸಂತಸ ತಂದಿದೆ, ಕ್ಷೇತ್ರದ ಜನರು ಜೆಡಿಎಸ್ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸ ಮುಂದಿನ ಚುನಾವಣೆಯಲ್ಲಿ ತೋರಬೇಕು ಎಂದರು.
ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ಶ್ರೀನಿವಾಸ್, ತಾಪಂ.ಸದಸ್ಯ ಹೆಚ್.ಸಮರ್ಥರಾಯ್, ಮಾಜಿ ನಗರಸಭೆ ಉಪಾಧ್ಯಕ್ಷ ಟಿ.ವಿಜಯ್‌ಕುಮಾರ್, ಸದಸ್ಯ ಎಸ್‌ಟಿ.ವಿಜಯ್, ಮುಖಂಡ ಭಿಮಣ್ಣ, ಗಾಡಿತಿಪ್ಪೆಸ್ವಾಮಿ, ಬಾಲೆನಹಳ್ಳಿ ಸಿದ್ದೇಶ್, ಸತೀಶ್, ಹನುಮಂತಚಾರ್, ಇಮಾಮ್, ಯೂನೀಸ್, ಸ್ವಾಲ್ವೆ, ರಾಜು, ಶ್ರೀಧರ್‌ಚಾರ್, ವೆಂಟಕೇಶ್‌ಬಿ.ಎಸ್.ಜಿ., ತಿಮ್ಮಪ್ಪ, ಗ್ರಾಪಂ.ಅಧ್ಯಕ್ಷ ಸೊಮಶೇಜರ್, ಆರ್.ಲೋಕೇಶ್ ಚನ್ನಪ್ಪ, ಶಿವಪ್ಪ, ದೊಡ್ಡೆರಿ ಶಿವಣ್ಣ, ವೆಂಟಕೇಶ್, ಬಾರ್‌ತಿಪ್ಪೆಶ್, ಗ್ರಾಪಂ. ಅಧ್ಯಕ್ಷ ಮೌರ್ಯ, ಸಂತೋಶ್, ರಾಮಣ್ಣ, ಪರುಶುರಾಂಪುರ ಲೋಕೇಶ್, ಚೌಳೂರ ವೀರಶ್, ಶ್ರೀನಿವಾಸ್, ಪೂರ್ಣಮುತ್ತಯ್ಯ, ತಿಪ್ಪೆಸ್ವಾಮಿ, ಪರುಶುರಾಂಪುರ ಶ್ರೀನಿವಾಸ್, ವಿನೋದ, ಪಾರ್ವತಮ್ಮ, ನಾಗಮಣಿ, ಮಂಜಮ್ಮ, ನೇತ್ರಾ, ಸುಜಾತಾ, ಶಕುಂತಲಾ, ಸುಧಾರಾಣಿ, ಇತರರು ಇದ್ದರು.

About The Author

Namma Challakere Local News
error: Content is protected !!