ದಲಿತರ ಪರ ಧ್ವನಿಎತ್ತಲು, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಕುರಿತು ಶಾಸಕ ಟಿ.ರಘುಮೂರ್ತಿಗೆ ಮನವಿ
ಚಳ್ಳಕೆರೆ : ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿ ಹಾಗೂ ರಾಜ್ಯಸರ್ಕಾರದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫರಾಸ್ಸು ಮಾಡಲು ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾವನೆ ಮಾಡಲು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ. ರಘುಮೂರ್ತಿರವರಿಗೆ ಸಾಮಾಜಿಕ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳು ಮನವಿ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ಸಾಮಾಜಿಕ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಉಮೇಶ್‌ಚಂದ್ರ ಬ್ಯಾನರ್ಜಿ, ದ.ಸಂ.ಸ ತಾಲ್ಲೂಕು ಅಧ್ಯಕ್ಷ ಟಿ. ವಿಜಯಕುಮಾರ್, ಅಂಬೇಡ್ಕರ್ ಸ್ವಾಭಿಮಾನಿ ತಾಲ್ಲೂಕು ಅಧ್ಯಕ್ಷ ವಿನೋದ್ ಕುಮಾರ್, ದಲಿತ ಮುಖಂಡ ಭೀಮಣ್ಣ, ಹಳೇ ಟೌನ್‌ವೀರಭದ್ರ, ಮಂಜುನಾಥ್ ಇನ್ನು ಮುಂತಾದವರು.