ಚಳ್ಳಕೆರೆ : ಬುಡಕಟ್ಟು ಸಂಸ್ಕೃತಿಯ ತವರೂರಾದ ಚಳ್ಳಕೆರೆ ತಾಲೂಕು, ತನ್ನ ಎಲ್ಲೆಯನ್ನು ಮೀರಿದೆ ಇಂದಿನ ಆಧುನಿಕ ಬರಾಟೆಯಲ್ಲಿ ಕೂಡ ನಮ್ಮ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಉಳಿಸುವುದರ ಜೊತೆಗೆ ನಮ್ಮ ತಾಯ್ನಿಡಿನ ಆರಾಧ್ಯ ದೈವಗಳನ್ನು ಪೂಜಿಸುವುದು ನಮ್ಮ ವಾಡಿಕೆ,
ಆದರಂತೆ ಬಯಲು ಸೀಮೆಯಲ್ಲಿ ಪ್ರತಿ ವರ್ಷದಂತೆ ಆಚರಿಸುವ ಹಬ್ಬ ಆಚರಣೆಗಳು ಕಳೆಗಟ್ಟಿವೆ, ಅದರಂತೆ ಈ ಬಾರಿ ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಅದ್ದೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಇನ್ನೂ ಕಳೆದ ಎರಡು ದಿನಗಳಿಂದ ದೇವರ ಪೂಜಾ ಕಾರ್ಯಕ್ರಮಗಳ ಜೊತೆಗೆ ಪ್ರಾರಂಭವಾದ ಹಬ್ಬದ ಸಂಭ್ರಮ ತಾಲೂಕಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಸಮರ್ಪಿಸುವ ಮೂಲಕ ತೆರೆಕಂಡಿತು.
ತಾಲೂಕಿನ ಜನತೆಯೊಂದಿಗೆ ಮುಂಬರುವ ವಿಧಾನ ಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟ ಸುಮಾರು ಎರಡು ಲಕ್ಷ ರೂಪಾಯಿಗಳಿಗೆ ಹರಾಜು ಪ್ರಡೆಯುವುದರ ಮೂಲಕ ಈ ಬಾರಿ ಮತದಾರರ ಮನಸ್ಸಲ್ಲಿ ಉಳಿದಿದ್ದಾರೆ.
ಇನ್ನೂ ಈಗಾಗಲೇ ರಾಜಕೀಯ ಕಣದಲ್ಲ ಬಿಡು ಬಿಟ್ಟಿರುವ ಕುಮಾರಸ್ವಾಮಿ ಪ್ರತಿಯೊಂದು ಭೂತ್‌ಗಳಿಗೆ ತೆರಳಿ ಅಲ್ಲಿ ಮುಖಂಡರ ಸಭೆ ನಡೆಸುವ ಮೂಲಕ ಜಾಗೃತಿ ಗೋಳಿಸಿದ್ದಾರೆ.
ಇನ್ನೂ ಕ್ಷೇತ್ರದಲ್ಲಿ ಎಲ್ಲೆ ಜಾತ್ರೆ ನಡೆದರು ಅಲ್ಲಿ ಕುಮಾರಸ್ವಾಮಿ ಬೇಟಿ ಇರುತ್ತದೆ ಎನ್ನಲಾಗಿದೆ.