ಚಳ್ಳಕೆರೆ : ಕೂದಲೇಳೆ ಅಂತರದಲ್ಲಿ ತಪ್ಪಿದ ಬಾರೀ ಅನಾವುತ
ಹೌದು ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರೀ ಶ್ರೀ ಪಾತಲಿಂಗೇಶ್ವರ ಕಾರ್ತಿಕೋತ್ಸವ ಅದ್ದೂರಿಯಾಗಿ ಜರುಗಿದೆ.
ಆದರೆ ಮಧ್ಯರಾತ್ರಿ ಎಳೆಯುವ ರಥಕ್ಕೆ ಸುತ್ತಲಿನ ನೂರಾರು ಭಕ್ತರು ಸಾಕ್ಷಿಕರಿಸುತ್ತಾರೆ .
ಮಧ್ಯರಾತ್ರಿ ಸಾಗುವ ರಥೋತ್ಸವದ ದಾರಿಯುದ್ದಕ್ಕೂ ವಿದ್ಯುತ್ ತಂತಿಗಳು ಅಡ್ಡಲಾಗಿ ಇರುವುದರಿಂದ ರಥೋತ್ಸವದ ಸುತ್ತಲೂ ನೆರೆದಿದ್ದ ಜನಸ್ತೋಮ ಆತಂಕದಲ್ಲಿ ರಥವನ್ನು (ತೇರು) ಎಳೆದರು.
ಆದರೆ ಪ್ರತಿವರ್ಷ ಈದೇ ರಾಜಮಾರ್ಗದಲ್ಲಿ ಸಾಗುವ ರಥೋತ್ಸವಕ್ಕೆ ವಿದ್ಯುತ್ ಸರಬರಾಜು ಮಾಡುವ ಬೆಸ್ಕಂ ಇಲಾಖೆಗೆ ಗ್ರಾಮದ ಮುಖಂಡರು ಹಲವು ಬಾರಿ ಮೌಖಿಕವಾಗಿ ಮನವಿ ಮಾಡಿದರು.
ಕ್ಯಾರೆ ಎನ್ನದ ತಳಕು ಬೆಸ್ಕಂ ಇಲಾಖೆಯ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯ ಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಇನ್ನೂ ಸಿಬ್ಬಂದಿ ಎಚ್ಚೆತ್ತುಕೊಳ್ಳದಿದ್ದರೆ ನಿರಂತರವಾಗಿ ಬೆಸ್ಕಂ ಇಲಾಖೆಯ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಮುಂದೆ ಈ ದುರಂತ ನಡೆದರೆ ಬೆಸ್ಕಂ ಇಲಾಖೆಯೇ ನೇರಹೊಣೆ ಎಂದು ಗ್ರಾಮದ ಮುಖಂಡರು ಆರೋಪ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸೇವ್ಯಾನಾಯ್ಕ್ , ಸದಸ್ಯ ಮಂಜುಳಾ ತಿಪ್ಪೇಸ್ವಾಮಿ, ಅಶ್ವಿನಿ ರುದ್ರಮುನಿ, ಗ್ರಾಮದ ಹಿರಿಯರಾದ ಮಾಜಿ ಗ್ರಾಪಂ ಅಧ್ಯಕ್ಷ ತಿಪ್ಪೆಸ್ವಾಮಿ, ಗಂಗಾಧರ್, ಚೆನ್ನಪ್ಪ, ತಿಮ್ಮರೆಡ್ಡಿ, ತಿಪ್ಪೆಶ್, ಕು.ಮಲ್ಲೆಶ್,
ಧನಂಜಯ್, ರಾಘವೇಂದ್ರ, ಕು.ನಿಂಗಣ್ಣ, ಸಣ್ಣಪ್ಪ, ವಸಂತ, ಟಿಪ್ಪು ಸುಲ್ತಾನ್, ತಿಮ್ಮಣ್ಣ, ಮಾರಣ್ಣ, ಇತರರು ಆರೋಪ ಮಾಡಿದ್ದಾರೆ.
ಇನ್ನಾದರೂ ಬೆಸ್ಕಂ ಇಲಾಖೆ ಎಚ್ಚೆತ್ತುಕೊಂಡು ರಥ ಸಾಗುವ ಮಾರ್ಗದಲ್ಲಿ ವಿದ್ಯುತ್ ತಂತಿಗಳ ಮಾರ್ಗ ಬದಲಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವವರೆ ಕಾದುನೋಡಬೇಕಿದೆ.