ಚಳ್ಳಕೆರೆ : ಅಭಿವೃದ್ದಿಯ ಹರಿಕಾರರೆಂದೇ ರಾಜ್ಯದ ಮನೆಮಾತದ ಮಾಜಿ ಮುಖ್ಯ ಮಂತ್ರಿ ಹೆಚ್‌ಡಿ.ಕುಮಾರಸ್ವಾಮಿ ಜನ್ಮ ದಿನಾಚರಣೆ ಇದೇ ಡಿಸೆಂಬರ್ 16ರಂದು ಇರುವುದರಿಂದ ಚಳ್ಳಕೆರೆ ಕ್ಷೇತ್ರದಲ್ಲಿ ರಕ್ತದಾನ ಶಿಬಿರ ಮಾಡುವ ಮೂಲಕ ಅವರಿಗೆ ಶುಭಾಷಯ ಕೋರುತ್ತೆವೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಹೇಳಿದ್ದಾರೆ.
ಅವರು ನಗರ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಅವರು ಈಡೀ ನಾಡಿನಾದ್ಯಾಂತ ರೈತರ ಜೀವನಾಡಿಯಾಗಿ ಸಾವಿರಾರು ಕೋಟಿಗಳ ಸಾಲ ಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿಗೆ ಸಲ್ಲುತ್ತದೆ, ಆದ್ದರಿಂದ ಈ ರಕ್ತದಾನ ಶಿಬಿರದಲ್ಲಿ ಕ್ಷೇತ್ರದ ನೂರಾರು ರೈತ ಕುಟುಂಬಗಳು ಆಗಮಿಸಿಲಿದ್ದಾರೆ,.
ಇನ್ನೂ ರಾಜ್ಯದಲ್ಲೆ ಚಳ್ಳಕೆರೆ ಕ್ಷೇತ್ರಕ್ಕೆ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದ ಸಂಧರ್ಭದಲ್ಲಿ ಸುಮಾರು ಕೋಟಿ ಗಟ್ಟಲೆ ಅನುದಾನ ನೀಡಿದ್ದರು ಅಂದು ಮಾಡಿದ ಕಾರ್ಯಗಳು ಇಂದು ಅವರನ್ನು ಸ್ಮರಿಸುವಂತಾಗಿವೆ,
ಇನ್ನೂ ನಗರಸಭೆ ಸದಸ್ಯ ಶ್ರೀನಿವಾಸ್ ಮಾತನಾಡಿ, ರಾಜ್ಯಾದ್ಯಾಂತ ಸಂಚರಿಸುವ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯ ರಥ ಇದೇ ತಿಂಗಳಲ್ಲಿ ಆಗಮಿಸುವ ಸಂಧರ್ಭ ಇದೆ ಕ್ಷೇತ್ರದ ಮೊದೂರು ಗ್ರಾಮದಿಂದ ಚಾಲನೆ ಕೊಟ್ಟು ಜೆಡಿಎಸ್ ಅಭಿವೃದ್ದಿ ಕಾರ್ಯಗಳ ಬಗ್ಗೆ ಹಾಗೂ ಅಧಿಕಾರಕ್ಕೆ ಬಂದ ತಕ್ಷಣ ಮಾಡುವ ಅಭಿವೃದ್ದಿ ಕಾರ್ಯಗಳ ಮತದಾರರಿಗೆ ತಿಳಿಸಲಾಗುವುದು ಇದರಿಂದ ನಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಅದಿಕಾರದ ಗದ್ದುಗೆ ಹೇರಲಿದೆ ಎಂದರು.
ಈದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ವಿ.ವೈ.ಪ್ರಮೋದ್, ಶ್ರೀನಿವಾಸ್, ಕವಿತಾ ನಾಯಕಿ, ನಾಗವೇಣಮ್ಮ, ನಿರ್ಮಾಲಾ, ಮಾಜಿ ನಗರಸಭೆ ಅಧ್ಯಕ್ಷ ಎಸ್.ಟಿ.ವಿಜಯ್ ಕುಮಾರ್, ಮಾಜಿ ನಗರಸಭೆ ಉಪಾಧ್ಯಕ್ಷ ಟಿ.ವಿಜಯ್ ಕುಮಾರ್, ಡಿ.ಕೆ.ರವಿಕುಮಾರ್, ಎಲೆ ವೀರಭದ್ರಪ್ಪ, ಭಿಮಣ್ಣ, ತಿಪ್ಪಮ್ಮ, ಪಾರ್ವತಮ್ಮ, ವಿನೋಧಮ್ಮ, ರವಿಕುಮಾರ್, ಸೋಮಣ್ಣ, ಕುರುಡಿಹಳ್ಳಿ ಗಂಗಾಧರ್, ಮಾಜಿ ನಗರಸಭೆ ಪಾಲಯ್ಯ, ಗಾಡಿ ತಿಪ್ಪೆಸ್ವಾಮಿ, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!