ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಕಲಿ ಗುರುತಿನ ಮತದಾರರ ಚೀಟಿಗಳು ಪತ್ತೆಯಾಗಿರುವುದು ಈಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ಹೌದು ಇನ್ನೂ ಕೇವಲ ಬೆರಳೆಣಿಕೆಯಷ್ಟು ತಿಂಗಳುಗಳು ಮಾತ್ರ ಚುನಾವಣೆಗೆ ಬಾಕಿ ಇರುವಾಗಲೇ ಇಂತಹ ನಕಲಿ ಗುರುತಿನ ಚೀಟಿ ಮಾರಾಟ ಜಾಲ ಪತ್ತೆಯಾಗಿರುವುದು ಶೋಚನೀಯ.
ಅದು ಎಸ್‌ಟಿ ಮೀಸಲು ಕ್ಷೇತ್ರವಾದ ಚಳ್ಳಕೆರೆ ಕ್ಷೇತ್ರದಲ್ಲಿ ನಕಲಿ ಗುರುತಿನ ಚೀಟಿ ಸಿಕ್ಕಿರುವುದು ಭಾರೀ ಚರ್ಚೆಗೆ ಗ್ರಸವಾಗಿದೆ,
ಈಡೀ ರಾಜ್ಯದಲ್ಲಿ ಚುನಾವಣೆಗೂ ಮುನ್ನವೇ ಅಕ್ರಮ ಮತದಾರರ ಗುರುತಿನ ಚೀಟಿ ನಕಲಿ ಮಾಡುವ ಪ್ರಕರಣ ಎರಡನೇಯದಾಗಿದೆ.
ಚಳ್ಳಕೆರೆ ನಗರದಲ್ಲಿ ಅಕ್ರಮವಾಗಿ ಮತದಾರರ ಗುರುತಿನ ಚೀಟಿಯನ್ನು ನಕಲಿಯಾಗಿ ಮಾಡಿಕೊಡುವ ದಂಧೆಕೋರರನ್ನು ಇಂದು ತಹಶೀಲ್ದಾರ್ ಎನ್.ರಘುಮೂರ್ತಿ ಹಿಡಿದು ಅಂಗಡಿಯನ್ನು ಸೀಜ್ ಮಾಡಿರುವ ಘಟನೆ ನಡೆದಿದೆ.
ಹೌದು ಚುನಾವಣೆಗೆ ಸಜ್ಜುಗೊಳಿಸುವ ಮತದಾರರ ಪಟ್ಟಿ ಪರಿಷ್ಕರಣೆ ಹಂತದಲ್ಲಿ ಇರುವಾಗಲೇ ಇಂತಹ ಕೃತ್ಯಗಳು ಬಯಲಿಗೆ ಬಂದಿರುವುದು ವಿಷಾಧನೀಯ
ಇನ್ನೂ ಕೆಲವೆ ತಿಂಗಳುಗಳು ಚುನಾವಣೆಗೆ ಬಾಕಿ ಇರುವುವಾಗಲೇ ನಕಲಿ ಮತದಾರರ ಗುರುತಿನ ಚೀಟಿ ಮಾಡುವವರ ಹಾವಳಿ ಕಂಡು ಬಂದಿರುವುದು ಮತದಾರರಲ್ಲಿ ಆತಂಕ ಮೂಡಿದೆ.
ಈ ಪ್ರಕರಣ ನಕಲಿ ಮತದಾರರ ಸೃಷ್ಠಿಸುವ ಹುನ್ನಾರ ಈ ಘಟನೆಯಲ್ಲಿ ನಡೆದಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇನ್ನೂ ಚಳ್ಳಕೆರೆ ನಗರದಲ್ಲಿ ಕಳೆದ ಹಲವು ದಿನಗಳಿಂದ ಯಾರ ಕಣ್ಣಿಗೆ ಕಾಣದೆ ರೀತಿಯಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಮಾಡಿಕೊಡುವವರ ಜಾಲವನ್ನು ಸೂಕ್ಷö್ಮವಾಗಿ ಪತ್ತೆಹಚ್ಚಿದ ತಹಶೀಲ್ದಾರ್ ಎನ್.ರಘುಮೂರ್ತಿ ಪ್ರತ್ಯಕ್ಷವಾಗಿ ನಕಲಿ ಗುರುತಿನ ಚೀಟಿ ಮಾಡಿಕೊಡುವವರನ್ನು ಹಿಡಿದು ಅಂಗಡಿಯನ್ನು ಸೀಜ್ ಮಾಡಿದ್ದಾರೆ.
ನಗರದ ಶಾಂತಿ ನಗರದ ಮಂಜುನಾಥ ಟೆಕ್ನಲಾಜೀಸ್‌ನಲ್ಲಿ ಚುನಾವಣಾ ಗುರುತಿನ ಚೀಟಿಗಳನ್ನು 200 ರಿಂದ 300ರೂಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಡಿ.10 ರಂದು ಸ್ಥಳೀಯ ರಾಜಸ್ವ ನಿರೀಕ್ಷರು ಮತ್ತು ಮತ್ತು ಗ್ರಾಮಲೆಕ್ಕಾಧಿಕಾರಿ ರವರೊಂದಿಗೆ ಶ್ರಿಮಂಜುನಾಥ ಟೆಕ್ನಲಾಜೀಸ್ ಅಂಗಡಿಗೆ ಬೇಟಿ ನೀಡಿ ಪರಿಶೀಲಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ತಂಡಕ್ಕೆ, ಅಂಗಡಿಯಲ್ಲಿ ಸುಮಾರು 13 ಚುನಾವಣಾ ಗುರುತಿನ ಕಾರ್ಡ್ಗಳು ಪತ್ತೆಯಾಗಿವೆ, ಹಾಗೂ ಖಾಲಿಕಾರ್ಡ್ ಅಂದಾಜು 60 ಕಾರ್ಡ್ಗಳು ಪತ್ತೆಯಾಗಿವೆ, ಆದ್ದರಿಂದ ಅಂಗಡಿಯನ್ನು ವಶಪಡಿಸಿಕೊಂಡು ಈ ಕೃತ್ಯದಲ್ಲಿ ಭಾಗಿಯಾದ ರಾಜು ಎಂಬುವವರನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಬಾಕ್ಸ್ ಮಾಡಿ :
ಸಾರ್ವಜನಿಕರಿಂದ ಬಂದ ದೂರಿನ್ವಯ ನಗರದಲ್ಲಿ ನಕಲಿ ಗುರುತಿನ ಚೀಟಿ, ಮಾಡಿಕೊಡುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಚುನಾವಣೆ ಅಧಿಕಾರಿಗಳು ನಾವು ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗೆ ಬೇಟಿ ನೀಡಿ ಪರೀಶೀಲಿಸಿದ ನಂತರ ಅಂಗಡಿಯಲ್ಲಿ ಅಕ್ರಮ ಎಸಗಿರುವುದು ಕಂಡು ಬಂದಿದ್ದರಿAದ ಸಾಮಾಗ್ರಿಗಳನ್ನು ದಸ್ತಗಿರಿ ಮಾಡಿ ಅಂಗಡಿಯನ್ನು ಸೀಜ್ ಮಾಡಿಲಾಗಿದೆ ಇಂತಹ ಕೃತ್ಯಗಳಿದಿಂದ ಚುನಾವಣೆ ಆಯೋಗ ಪರಿಶುದ್ಧವಾಗಿ ಚುನಾವಣೆ ನಡೆಸಿದರೂ ಇಂತವರಿAದ ಆಯೋಗದ ಮೇಲೆ ಅನುಮಾನ ಮೂಡುತ್ತದೆ ಈ ಕೃತ್ಯದಲ್ಲಿ ಬಾಗಿಯಾದವರನ್ನು ವಶಕ್ಕೆ ಪಡೆದು ಅಲ್ಲಿನ ಡಿಜಿಟಲ್ ಕಾರ್ಡ ಬಳಕೆ ಹಾಗೂ ಸಂಬAದಿಸಿದ ಪರಿಕರಣಗಳನ್ನು ದಸ್ತಗಿರಿ ಮಾಡಿ ವಶಕ್ಕೆ ಪಡೆಯಲಾಗಿದೆ. ––ಎನ್.ರಘುಮೂರ್ತಿ, ತಹಶೀಲ್ದಾರ್ ಚಳ್ಳಕೆರೆ.

Namma Challakere Local News
error: Content is protected !!