ಚಳ್ಳಕೆರೆ : ಗ್ರಾಮೀಣ ಭಾಗದ ಮಕ್ಕಳು ಇಂದು ಕ್ರೀಡೆಯಲ್ಲಿ ರಾಷ್ಟಿçÃಯ ಹಾಗೂ ರಾಜ್ಯ ಮಟ್ಟದಲ್ಲಿ ಮಿಂಚಬೇಕು ಗಡಿ ಭಾಗದ ಕೀರ್ತಿ ಪಾತಕೆಯನ್ನು ಎತ್ತಿ ಹಿಡಿಯಬೇಕು ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ಹೇಳಿದರು,
ಅವರು ತಾಲೂಕಿನ ತಳಕು ಗ್ರಾಮದ ಜಿ.ಎಸ್.ತರುಣ್ ಚಂದ್ರಗಿರಿ, ಗಿರಿಯಮ್ಮನಹಳ್ಳಿ ಗ್ರಾಮದ ಎನ್.ಅಜಯ್ ಪಾಲಗಿರಿ ಇವರು ಬೆಂಗಳೂರು ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ 2022 ಸಾಲಿನ ಕೆಂಪೇಗೌಡ ಕಪ್ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕ್ರಮವಾಗಿ ದ್ವೀತಿಯ ಹಾಗೂ ತೃತೀಯ ಸ್ಥಾನವನ್ನು ಪಡೆದಿರುವ ಪ್ರಯುಕ್ತ ಇನ್ನೂ ಮುಂದಿನ ದಿನಗಳಲ್ಲಿ ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಶಸ್ತಿಗಳನ್ನು ಗೆದ್ದು ಪೋಷಕರಿಗೂ ಗ್ರಾಮಕ್ಕೂ ಹೆಸರು ತರಲು ಸಲಹೆ ನೀಡಿದರು.
ಕರಾಟೆ ಚಾಂಪಿಯನ್ಶಿಪ್‌ನಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿರುವ ಚಳ್ಳಕೆರೆ ನಗರದ ಜ್ಞಾನ ಸುರಭಿ ವಿದ್ಯಾ ನಿಕೇತನದ ವಿದ್ಯಾರ್ಥಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜಿಎಸ್.ತರುಣ್ ಚಂದ್ರಗಿರಿ… 7ನೇ ತರಗತಿ ವಿದ್ಯಾರ್ಥಿಯಾದ ಎನ್.ಅಜಯ್ ಪಾಲಗಿರಿ ಇವರು 2022 ಸಾಲಿನ ಕೆಂಪೇಗೌಡ ಕಪ್ಪು ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ದ್ವಿತೀಯ ತೃತೀಯ ಸ್ಥಾನವನ್ನು ಪಡೆದಿದ್ದಾರೆ..
ಇದೇ ಸಂಧರ್ಭದಲ್ಲಿ ಗುರುಮೂರ್ತಿ ಎಸ್, ಗ್ರಾಪಂ.ಅಧ್ಯಕ್ಷ ನಾಗರಾಜ, ಎಲ್‌ಐಸಿ ಕ್ಯಾಸಯ್ಯ, ಸದಸ್ಯ ಕುಮಾರ.ವಿ, ಎಲ್ಲಪ್ಪ ಮಾಜಿ ಗ್ರಾಪಂ.ಸದಸ್ಯ ರಾಘವೇಂದ್ರ ಜಿಎಸ್, ಚಂದ್ರಣ್ಣ.ಡಿ, ಆಂಜನೇಯ, ಬಾಲ್‌ರಾಜ್, ಕುಂಬಾರ್‌ತಿಪ್ಪೇಸ್ವಾಮಿ ಇತರರು ಇದ್ದರು.