ಚಳ್ಳಕೆರೆ : ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸತತ 7ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಚಳ್ಳಕೆರೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು…
ನಗರದ ನೆಹರು ವೃತ್ತದಲ್ಲಿ ಮಂಡಲದ ಹಲವು ಮುಖಂಡರು ಸೇರಿ ಪರಸ್ಪರ ಸಿಹಿತಿನಿಸುವುದರ ಮೂಲಕ ಸಂತಸ ಹಂಚಿಕೊAಡರು,
ಇನ್ನೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಯಪಾಲಯ್ಯ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 150 ಸ್ಥಾನಗಳು ಗಳಿಸುವುದು ಖಚಿತ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಲನ್ನು ಮಾಡುತ್ತಾ ಮುನ್ನಡೆಯುವ ಆಡಳಿತ ಪಕ್ಷ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಭರ್ಜರಿ ಸ್ಥಾನ ಪಡೆಯಲಿದೆ ಎಂದರು.
ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಅನಿಲ್ ಕುಮಾರ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಕಾರ್ಯವೈಖರಿಯ ಮೆಚ್ಚಿ ಮೋದಿಜಿ ತವರಲ್ಲಿ ಗುಜರಾತ್ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯವನ್ನು ಗಳಿಸಿದ್ದಾರೆ, ದಿನದ 24 ಗಂಟೆಗಳ ಕಾಲ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಕೆಲಸ ಮಾಡುತ್ತಾರೆ ಇದನ್ನ ಮನಗಂಡ ಗುಜರಾತ್ ಮತದಾರರು ನಮ್ಮ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ನೀಡಿ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಪಾಲಯ್ಯ, ಮಾಜಿ ಎಪಿಎಂಸಿ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ಶಿವಪುತ್ರಪ್ಪ, ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಅನಿಲ್ಕುಮಾರ್, ಹಿರಿಯ ಮುಖಂಡರಾದ ಆದಿಭಾಸ್ಕರ್ ಶೆಟ್ಟಿ, ದೇವರಾಜ್ರೆಡ್ಡಿ, ಮಂಡಲದ ಉಪಾಧ್ಯಕ್ಷ ದಿನೇಶ್ರೆಡ್ಡಿ, ಕಂಠಪ್ಪ, ಈಶ್ವರ್ ಚೌಲೂರ್ಗೌಡ, ನಾಮನಿರ್ದೇಶಿತ ನಗರಸಭಾ ಸದಸ್ಯ ಮನೋಜ್ಹೊಸಮನೆ, ವೀರೇಶ್, ಮಂಡಲದ ಕಾರ್ಯದರ್ಶಿ ಚಿದಾನಂದ, ಜೆಕೆ.ತಿಪ್ಪೇಶ್, ಭರತ, ಆದರ್ಶ್ ರಾಜು, ತಿಪ್ಪೇಸ್ವಾಮಿ, ಮುಂತಾದ ಬಿಜೆಪಿ ಹಿರಿಯ ಹಾಗು ಕಿರಿಯ ಕಾರ್ಯಕರ್ತರು, ಪದಾಧಿಕಾರಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು…