ಚಳ್ಳಕೆರೆ : ಸರ್ಕಾರದ ಪೂರ್ಣ ಪ್ರಮಾಣದ ಪರಿಹಾರ ಧನ ರೈತರ ಖಾತೆಗೆ ಜಮಾ ಆಗಲಿದ್ದು ಯಾವುದೇ ರೈತರು ಆತಂಕ ಗೊಳ್ಳುವ ಅಗತ್ಯವಿಲ್ಲವೆಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.
ಅವರು ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ರೈತರನ್ನು ಉದ್ದೇಶಿ ಮಾತನಾಡಿದ ಅವರು ಪರಿಹಾರಧನ ನಿಮ್ಮ ಖಾತೆಗಳಿಗೆ ಬಿದ್ದಿಲ್ಲವೆಂದು ದಿನಪ್ರತಿ ರೈತರು ಸರಕಾರಿ ಕಚೇರಿಗೆ ಅಲಿಯುವುದನ್ನು ಬಿಡಬೇಕು, ತಾಲೂಕಿನಲ್ಲಿ ಒಟ್ಟು 48696 ರೈತರಿಗೆ 46324 ಹೆಕ್ಟರ್ ವಿಸ್ತೀರ್ಣದ ಪ್ರದೇಶಕ್ಕೆ ಬೆಳೆ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಬೆಳೆ ಪರಿಹಾರ ತಂತ್ರಾAಶದಲ್ಲಿ ದಾಖಲಿಸಲಾಗಿದೆ,
ಇದರಲ್ಲಿ ಅರ್ಧದಷ್ಟು ರೈತರಿಗೆ ಈಗಾಗಲೇ ಪರಿಹಾರದ ಹಣ ಜಮಾ ಆಗಿದೆ ಉಳಿದಂತ ರೈತರಿಗೂ ಕೂಡ ಈ ಹಣ ನಿಶ್ಚಿತವಾಗಿ ಜಮಾ ಆಗಲಿದೆ ಮೂರು ನಾಲ್ಕು ಕಂತುಗಳಲ್ಲಿ ಸರ್ಕಾರದಿಂದ ಹಣ ಜಮಾ ಆಗುತ್ತದೆ ರೈತರು ಯಾವುದೇ ಕಾರಣಕ್ಕೂ ಆತಂಕಗೊಳ್ಳಬಾರದು ಕಂದಾಯ ಇಲಾಖೆ ಇದರ ಕಣ್ಗಾವಲಿನಲ್ಲಿದೆ ಜಿಲ್ಲಾಧಿಕಾರಿಗಳು ಕೂಡ ಯಾವುದೇ ರೈತರಿಗೆ ಪರಿಹಾರದ ಹಣ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ ಹಾಗಾಗಿ ತಾಲೂಕಿನಲ್ಲಿರುವಂತಹ ರೈತರುಗಳು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ಪ್ರಬಂಧಕರಾದ ಶಾರದಮ್ಮ, ಸಹಾಯಕ ಪ್ರಬಂಧಕರಾದ ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ಶಿವಮೂರ್ತಿ, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು
ಬಾಕ್ಸ್ ಮಾಡಿ :
ರೈತರ ಖಾತೆಗೆ ಜಮಾ ಆಗುವಂತ ಸಾಮಾಜಿಕ ಭದ್ರತೆಯ ಪಿಂಚಣಿಗಳು ಮತ್ತು ರೈತರ ಪರಿಹಾರದ ಹಣ ಇವುಗಳನ್ನು ತಾಲೂಕಿನಲ್ಲಿರುವ ಬ್ಯಾಂಕಿನ ಪ್ರಬಂಧಕರುಗಳು ತಮ್ಮ ಸಾಲದ ಕಂತಿಗೆ ಯಾವುದೇ ಕಾರಣಕ್ಕೂ ಜಮಾ ಮಾಡಕೂಡದು ರೈತರ ಜೀವನ ನಿರ್ವಹಣೆಗೆ ಸರ್ಕಾರದ ನೀಡುವಂತಹ ಈ ಹಣ ಪೂರ್ಣ ಪ್ರಮಾಣದಲ್ಲಿ ರೈತರಿಗೆ ಬಳಕೆಯಾಗಬೇಕು ಈ ಬಗ್ಗೆ ಯಾವುದಾದರೂ ದೂರು ಬಂದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಬ್ಯಾಂಕ್ ಮುಖ್ಯಸ್ಥರಿಗೆ ಪತ್ರ ಬರೆಯಲಾಗುವುದೆಂದು .—ತಹಶೀಲ್ದಾರ್ ಎನ್.ರಘುಮೂರ್ತಿ