ಚಳ್ಳಕೆರೆ : ಅಂಗವಿಕಲತೆ ಹೋಗಲಾಡಿಸಲು ರಕ್ತ ಸಂಬAಧದಲ್ಲಿ ಮಧುವೆಯಾಗಬಾರದು ಇದು ವೈಜ್ಞಾನಿಕ ಸತ್ಯ ಎಂದು ಅಧ್ಯಕ್ಷತೆ ವಹಿಸಿದ್ದ ಮಂಜಣ್ಣ ಕರೆ ನೀಡಿದರು.
ಅವರು ನಗರದ ಎಸ್‌ಜೆಎಂ ಹಿರಿಯ ಪ್ರಾಥಮಿಕ ಶಾಲೆ ಹಳೇ ನಗರದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರು ಹಾಗೂ ಅಂಗವಿಕಲ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಚನ್ನಕೇಶವ ಮಾತನಾಡಿ, ಸ್ವತಃ ತಾನು ಅನುಭವಿಸಿದ ಅಂಗವಿಕಲತೆ ನೋವನ್ನು ಪೋಷಕರಲ್ಲಿ ತಿಳಿಸಿ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡಬೇಕೆಂದು ಕ್ರೀಡಾಕೂಟದಲ್ಲಿ ವಿಜೇತರಾದ ಎಲ್ಲಾ ಮಕ್ಕಳಿಗೆ ಬಹುಮಾನದ ಕೊಡುಗೆ ನೀಡಿ ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಬಸವನಗೌಡ, ದೈಹಿಕ ಶಿಕ್ಷಕ ಗುರುಮೂರ್ತಿ, ಪ್ರಕಾಶ್‌ಎನ್.ಎಲ್, ಹನುಮಪ್ಪ ಸಂಜೀವಮ್ಮ, ಶಿಕ್ಷಕಿ ಪದ್ಮಜಾಸಿ, ಮೂಡ್ಲಪ್ಪ, ಪೋಷಕರು ಹಾಜರಿದ್ದರು.

About The Author

Namma Challakere Local News
error: Content is protected !!