ಚಳ್ಳಕೆರೆ : ಕಳೆದ ಹಲವು ವರ್ಷಗಳ ಶಿಕ್ಷಕರ ಬೇಡಿಕೆಗೆ ಇಂದು ಸೃಳೀಯ ಶಾಸಕ ಟಿ.ರಘುಮೂರ್ತಿ ನಗರದಲ್ಲಿ ಸುಸಜ್ಜಿತವಾದ ಶಿಕ್ಷಕರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೆರಿಸಿದ್ದಾರೆ.
ಹೌದು ನಿಜಕ್ಕೂ ಶ್ಲಾಘನೀಯ ಕಳೆದ ಹತ್ತಾರು ವರ್ಷಗಳಿಂದ ಶಿಕ್ಷಕರ ಬೇಡಿಕೆಗಳು ಕೇವಲ ಬೇಡಿಕೆಗಳಾಗಿ ಉಳಿದಿದ್ದವು, ಹಲವು ಸರಕಾರಗಳು ಬದಲಾದರೂ ಶಿಕ್ಷಕರ ಬೇಡಿಕೆಗಳು ಮಾತ್ರ ಈಡೇರಲಿಲ್ಲ ಆದರೆ ಶಾಸಕ ಟಿ.ರಘುಮೂರ್ತಿ ಇತಾಸಕ್ತಿಯಿಂದ ಸುಮಾರು 25ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೆರಿಸಿದುವುದು ತಾಲೂಕಿನ ಶಿಕ್ಷಕರಲ್ಲಿ ಚಿಗುರೊಡೆದಿದೆ
ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಶಿಕ್ಷಕರ ಸಮುದಾಯ ಭವನ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ತಾಲೂಕಿನ ಶಿಕ್ಷಕರುಗಳಿಗೆ ಅನುಕೂಲವಾಘು ರೀತಿಯಲ್ಲಿ ಈ ಸಮುದಾಯ ಭನವ ನಿರ್ಮಾಣ ಮಾಂಡಲಾಗುತ್ತದೆ, ಇನ್ನೂ ಶಿಕ್ಷಕರು ತಮ್ಮ ಕುಟುಂಬ ಕಾರ್ಯಕ್ರಮಗಳಿಗೆ ದುಬಾರಿ ಹಣ ಕೊಟ್ಟು ಕಾರ್ಯಕ್ರಮ ಮಾಡಿಕೊಳ್ಳಲು ಹಾಗುತ್ತಿರಲಿಲ್ಲ, ಶಿಕ್ಷಕರು ಎಲ್ಲಾರೂ ಒಟ್ಟಾಗಿ ಸೇರಿ ಕಳೆದ ವರ್ಷ ಮನವಿ ನೀಡಿದ್ದರು ಇದರಿಂದ ಅತೀ ತುರ್ತಾಗಿ ಸ್ಥಳೀಯ ಶಾಸಕರ ಪ್ರದೇಶ ಅಭಿವೃದ್ಧಿ ಯೋಚನೆಯಡಿ ಮೀಸಲಿಟ್ಟಿರುವ ಸು.25 ಲಕ್ಷ ರೂ.ಗಳ ಅನುದಾನದಲ್ಲಿ ಶಿಕ್ಷಕರ ಸಮುದಾಯ ಭವನ ನಿರ್ಮಾಣದ ಭೂಮಿ ಪೂಜಾ ಮಾಡಿದ್ದೆವೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್, ನಗರಸಭೆ ಅಧ್ಯಕ್ಷ ಸುಮಕ್ಕ ಅಂಜನಪ್ಪ, ನಗರಸಭೆ ಸದಸ್ಯೆ ಕವಿತಾ ಬೋರಯ್ಯ, ಸುಜಾತ ಪ್ರಹ್ಲಾದ್, ರಮೇಶ್ ಗೌಡ, ರಾಘವೇಂದ್ರ, ಮುಖಂಡರುಗಳಾದ ಪ್ರಹ್ಲಾದ್, ಪ್ರಕಾಶ್ ಚೌಳೂರು, ವೀರಭದ್ರಪ್ಪ, ಮುಖಂಡರು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!