ಹಾಲಗೊಂಡನಹಳ್ಳಿಯಲ್ಲಿ ತುಪ್ಪದ ಮಾರಮ್ಮ ದೇವಿಯ ಅದ್ದೂರಿ ಜಾತ್ರೆ

ಚಳ್ಳಕೆರೆ : ಕಳೆದ ಎರಡು ದಿನಗಳಿಂದ ಸಂಭ್ರಮ ಸಡಗರದಿಂದ ಪುರಾತನ ಕಾಲದಿಂದ ಶ್ರಧ್ಧಾ ಭಕ್ತಿಯಿಂದ ಆರಾಧಿಸುವ ಶ್ರೀ ತುಪ್ಪದ ಮಾರಮ್ಮನ ಜಾತ್ರೆಗೆ ಈ ಬಾರಿ ವಿಶೇಷವಾಗಿ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.
ಹೌದು ಬಯಲು ಸೀಮೆಯ ಚಳ್ಳಕೆರೆ ತಾಲೂಕು ಬುಡಕಟ್ಟು ಸಂಸ್ಕೃತಿ ಒಳಗೊಂಡ ಈ ಭಾಗದ ಜನರು ದೇವರ ಆರಾಧಕರು, ಅದರಂತೆ ಇಲ್ಲಿ ಪುರಾತನ ಕಾಲದಿಂದಲೂ ದೇವರಿಗೆ ವಿಶೇಷವಾದ ಸ್ಥಾನವಿದೆ ಅದರಂತೆ ಇಲ್ಲಿ ನೆಲೆಸಿರುವ ಹಲವಾರು ಬುಡಕಟ್ಟು ಸಮುದಾಯಗಳು ತಮ್ಮದೇ ಆದ ವಿಶಿಷ್ಠಿ ಶೈಲಿಯಲ್ಲಿ ತಮ್ಮ ತಮ್ಮ ದೇವರುಗಳನ್ನು ಪೂಜಿಸುವುದು ವಾಡಿಕೆಯಾಗಿದೆ, ಅದರಂತೆ ತಾಲೂಕಿನ ಹಾಲಗೊಂಡನಲ್ಲಿ ಗ್ರಾಮದಲ್ಲಿ ಮಾತ್ರ ಈಡೀ ಗ್ರಾಮದ ಜನರೆಲ್ಲರೂ ಒಟ್ಟೂಗೂಡಿ ವಿಶೇಷವಾಗಿ ತುಪ್ಪದ ಮಾರಮ್ಮ ದೇವಿಗೆ ತಮ್ಮ ಭಕ್ತಿಯನು ಸಮರ್ಪಣೆ ಮಾಡುವುದರ ಮೂಲಕ ವರ್ಷಕೊಮ್ಮೆ ದೇವಿ ಜಾತ್ರೆ ಆಚರಿಸುವುದು ವಿಶೇಷವಾಗಿ ಕಾಣಬಹುದು.
ಇದೇ ಸಂಧರ್ಭದಲ್ಲಿ ಮನುಡಿಜಿಟಲ್ ಕೇಬಲ್‌ನೆಟ್‌ವರ್ಕ್ ಸಿಟಿಚಾನಲ್, ಹಾಲಗೊಂಡನಹಳ್ಳಿ ಸಂತೋಷ್‌ಕುಮಾರ್, ಪವನ್, ರವಿ, ತಿಪ್ಪೆಶ್, ಮೇಘ, ರಾಕಿ, ಮನೋಜ್, ಲೋಕೇಶ್, ಅಭಿಷೇಕ್, ಮನೋಜ್, ಶಂಕರ್, ಲಿಂಗರಾಜು, ಮಹೇಶ್, ಹಾಗೂ ವಿನಾಯಕ ಗೆಳೆಯರ ಬಳಗ, ಹಾಗೂ ಹಾಲಗೊಂಡನಹಳ್ಳಿ ಗ್ರಾಮಸ್ಥರರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

Namma Challakere Local News
error: Content is protected !!