ಚಳ್ಳಕೆರೆ : ನಗರದ ಸರ್ವತೋಮುಖ ಅಭಿವೃದ್ದಿಗೆ ಸಾರ್ವಜನಿಕರ ಅಭಿಪ್ರಾಯ ಮುಖ್ಯವಾಗಿದೆ ನೀವು ನೀಡುವ ಸೂಚನೆಗಳು ನಮ್ಮ ನಗರದ ಶ್ರೇಯಸ್ಸುಗೆ ಕಾರಣವಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಸುಮಕ್ಕ ಹೇಳಿದ್ದಾರೆ.
ಅವರು ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಆಯವ್ಯಯ ಬಜೆಟ್ ಪೂರ್ವಭಾವಿಯ ಸಾರ್ವಜನಿಕರೊಂದಿಗೆ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
ಇನ್ನೂ ಮಾಜಿ ಪುರಸಭೆ ಸದಸ್ಯ ಆರ್.ಪ್ರಸನ್ನಕುಮಾರ್ ಸಭೆಯ ಗಮನಹರಿಸಿ ನಗರದಲ್ಲಿ ಎಲ್ಲಿಯೂ ಕೂಡ ಒಂದು ಸುಸಜ್ಜಿತವಾದ ಉದ್ಯಾನವನ ಇಲ್ಲ ಆದ್ದರಿಂದ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನದಾಗಿ ಅನುದಾನವನ್ನು ಮೀಸಲಿಡಬೇಕು, ಹಾಗೇಯೆ ಜಿ ಪ್ಲಸ್‌ಟು ಎಂಬ ಕನಸಿನ ಮನೆ ಯಾವ ಪುರಷರ್ಥಕ್ಕೆ ನಿರ್ಮಾಣ ಮಾಡುತ್ತಿರೋ ಗೊತ್ತಿಲ್ಲ ಅದರ ಬದಲಾಗಿ ನಗರದ ಒಂದು ಸಾವಿರ ಸಾರ್ವಜನಿಕರಿಗೆ ನಿವೇಶನ ಜೊತೆಗೆ ವಸತಿ ಕೊಟ್ಟರೆ ಇತಿಹಾಸದಲ್ಲೆ ಉಳಿಯುತ್ತದೆ, ಆದ್ದರಿಂದ ಜಿಪ್ಲಸ್‌ಟು ಕೈ ಬಿಟ್ಟು ನಿವೇಶನ ನೀಡುವ ಕಾರ್ಯಕ್ಕೆ ಮುಂದಾಗಿ ನಗರದಲ್ಲಿ ಸುಮಾರು 28 ವರ್ಷಗಳ ಹಿಂದೆ ನಿವೇಶನ ಕೊಟ್ಟಿದ್ದು ಬಿಟ್ಟರೆ ಇಲ್ಲಿಯವರೆಗೆ ಕೊಟ್ಟಿಲ್ಲ ಎಂದರು.
ಇನ್ನೂ ಸಾಮಾಜ ಸೇವಕ ಹೆಚ್.ಎಸ್.ಸೈಯದ್ ಮಾತನಾಡಿ, ನಗರಸಭೆ ಬೊಕ್ಕಸೆಗೆ ನಷ್ಠ ಉಂಟಾಗುವುದು ಅಧಿಕಾರಿಗಳಿಂದ ಸರಕಾರ ನಿಮಗೆ ಕಾನೂನು ರೂಪಿಸಿದೆ ಅದರಂತೆ ಕೆಲಸ ಮಾಡಿ ನಗರದ ಪ್ರಮುಖ ರಸ್ತೆಗಳಲ್ಲಿ ಹುಟ್ಟು ಹಬ್ಬ, ವಿವಿಧ ಸಮಾವೇಶಗಳಿಗೆ ಪ್ಲೆಕ್ಸ್ ಜಾಹಿರಾತು ಹಾಕುತ್ತಾರೆ ಅವರಿಂದ ರಸೀದಿ ನೀಡಿ ಹಣ ಪಡೆಯದೆ, ಅಧಿಕಾರಿಗಳು ಮಾತ್ರ ಮೌನವಾಗಿ ನಗರಸಭೆಯಲ್ಲಿ ಹಣವಿಲ್ಲ ಎಂದು ಸಬೂಬು ಹೇಳುತ್ತಾರೆ ಎಂದರು.
ಇನ್ನೂ ನಾಮ ನಿದೇರ್ಶನ ಸದಸ್ಯ ಎಂ.ಇAದ್ರೇಶ ಮಾತನಾಡಿ, ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿದೆ ಇದರಿಂದ ಅಪಘಾತಗಳು ಕೂಡ ಸಂಭವಿಸುತ್ತವೆ, ಇನ್ನೂ ಜಾನುವಾರುಗಳ ಮಹಾಮಾರಿ ಖಾಯಿಲೆ ಚರ್ಮಗಂಟು ರೋಗದಿಂದ ರಸ್ತೆಯಲಿ ದನಗಳು ನರಳುತ್ತಿವೆ ಆದ್ದರಿಂದ ಕೂಡಲೇ ರಕ್ಷಣೆ ಮಾಡುವ ಕಾರ್ಯವಾಗಬೇಕು ಎಂದರು.
ಇನ್ನೂ ವಿವಿಧ ವಾರ್ಡಗಳ ಮಹಿಳೆಯರು ಮಾತನಾಡಿ, ನಮ್ಮ ನಗರದಲ್ಲಿ ಸ್ವಚ್ಚತೆ ಇಲ್ಲ, ಕುಡಿಯುವ ನೀರು ಇಲ್ಲ, ಚರಂಡಿ ಇಲ್ಲ, ಬೀದಿ ದೀಪಬೆಳಕು ಇಲ್ಲ, ಕತ್ತಲ ಕವಿದ ನಗರದಲ್ಲಿ ಜೀವನ ಮಾಡುತ್ತೆವೆ ನಗರಸಭೆಗೆ ಒಳಪಟ್ಟಿದ್ದರೂ ಕೂಡ ನಾವು ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದೆವೆ, ಎಂದು ಪೌರಾಯುಕ್ತರ ಗಮನ ಸೇಳೆದರು.
ಇನ್ನೂ ನಾಮನಿದೇರ್ಶನ ಸದಸ್ಯ ಮನೋಜ್ ಮಾತನಾಡಿ, ಬಳ್ಳಾರಿ ರಸ್ತೆ ಅಗಲೀಕರಣ ಯಾವಾಗ ಎಂದು ಪ್ರಶ್ನಿಸಿದ ತಕ್ಷಣ ಪೌರಾಯುಕ್ತರು ಈಗಾಗಲೇ ಟೆಂಡರ್ ಪ್ರಕ್ರಿಯೆ ಹಾಗಿದೆ ಅತೀ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವುದು ಪಾವಗಡ ರಸ್ತೆ ಪಕ್ಕದ ಮಳಿಗೆಗಳು ಮಾತ್ರ ಕೆಲವು ಕೋರ್ಟ್ ಮೋರೆ ಹೊಗಿದ್ದರಿಂದ ಸ್ಥಗಿತವಾಗಿವೆ ಎಂದರು.
ಸಾರ್ವಜನಿಕರಾದ ಶಿವಕುಮಾರ್ ಸಭೆಯ ಗಮನಹರಿಸಿ ನಗರದಲ್ಲಿ ಈಗಾಗಲೇ ನಿರ್ಮಿಸಿರುವ ಕಿತ್ತೂರು ರಾಣಿ ಚೆನ್ನಮ್ಮ ನಾಮಫಲಕ ಶಿಥಿಲವಾಗಿದೆ ಆದ್ದರಿಂದ ನಿಮ್ಮ ವಿಶೇಷ ಅನುದಾನದಲ್ಲಿ ದುರಸ್ಥಿ ಮಾಡಿಸಿ ನಂತರ ಪ್ರತಿ ಮನೆಗಳಿಗೆ ನೀರಿನ ಮೀಟರ್ ಅಳವಡಿಕೆಗೆ ಗಮನಹರಿಸಿ ಎಂದು ಸೂಚಿಸಿದರು.
ಇನ್ನೂ ನಗರ ಬೆಳೆದಂತೆಲ್ಲ ಜನಸಂಖ್ಯೆ ಹೆಚ್ಚಳವಾಗುತ್ತದೆ ಅದರಂತೆ ಸ್ಮಶಾನಗಳ ಅವಶ್ಯಕತೆ ಇದೆ ಆದ್ದರಿಂದ ಸ್ಮಶಾನ ಬದಲಿಗೆ ಮೃತ ದೇಹವನ್ನು ಬಸ್ಮ ಮಾಡುವ ವಿದ್ಯುತ್ ಶವಗಾರ ಮಾಡಲು ಸಲಹೆ ನೀಡಿದರು.
ಸಾರ್ವಜನಿಕರೊಬ್ಬರು ಸಭೆಯಲ್ಲಿ ನಗರದ ಕಂದಾಯ ನೌಕರ ಬಡವಣೆಯಲ್ಲಿ ಖಾಲಿ ನಿವೇಶನದಲ್ಲಿ ಸ್ವಚ್ಚತೆ ಇಲ್ಲದೆ ಅಕ್ಕಪಕ್ಕದ ಜನರು ವಾಸಮಾಡದಂತೆ ಹಾಗಿದೆ, ಇನ್ನೂ ಚರಂಡಿ ವ್ಯವಸ್ಥೆ ಕೂಡ ಇಲ್ಲವಾಗಿದೆ ಎಂದು ಮನವಿ ಮಾಡಿದರು.
ಇದೇ ಸಂಧರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ಸದಸ್ಯ ಶ್ರಿನಿವಾಸ್, ಸುಮಾ ಭರಮಣ್ಣ, ಪೌರಾಯುಕ್ತ ಸಿ.ಚಂದ್ರಪ್ಪ, ಮ್ಯಾನೇಜರ್ ಲಿಂಗರಾಜು, ತಿಪ್ಪೆಸ್ವಾಮಿ, ಇತರರು ಇದ್ದರು.

Namma Challakere Local News
error: Content is protected !!