ಚಳ್ಳಕೆರೆ : ಶಾಲಾ ಹಂತದಿAದ ಮಕ್ಕಳು ಭಗವತ್ ಗೀತಾ ಶ್ಲೋಕಗಳನ್ನು ಹೇಳುವುದರಿಂದ ದೇಶದ ಸಂಸ್ಕೃತಿಯ ಉಳಿವಿಗೆ ಕಾರಣವಾಗುತ್ತದೆ ಎಂದು ನರಹರಿ ಸದ್ಗುರು ಆಶ್ರಮದ ಶ್ರೀ ಡಾ..ವೈ.ರಾಜರಾಮ್ ಸ್ವಾಮಿಗಳು ಹೇಳಿದ್ದಾರೆ.
ಅವರು ನಗರದ ನರಹರಿ ನಗರದ ಶ್ರೀ ಸದ್ಗುರು ಸೇವಾ ಪ್ರತಿಷ್ಠಾನದಿಂದ ಆಯೋಜಿಸಿದ್ದ ಶ್ರೀ ಗೀತಾ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಭಗವದ್ಗಿತೆ ಕಂಠಾಪಾಠ ಸ್ಪರ್ಧೆ ಕಾರ್ಯಕ್ರದಮಲ್ಲಿ ಭಾಗವಹಿಸಿ ಮಾತನಾಡಿದರು, ಇಂದಿನ ಸಂಸ್ಕೃತಿ ಪಂರAಪೆ ಉಳಿವಿಗೆ ಭಗವತ್ ಗೀತೆ ಮೂಲಧಾರವಾಗಿದೆ ಆದ್ದರಿಂದ ಶಾಲಾ ಹಂತದಿAದ ಮಕ್ಕಳಿಗೆ ಭಗವತ್ ಗೀತೆ ಪಠಣದಿಂದ ಅವರ ಮನಸ್ಸು ಒಂದೆಡೆ ಸೆಳೆಯಲು ಹಾಗೂ ದೇಶದ ಸಂಸ್ಕೃತಿ ಉಳಿವೆಗೆ ಕಾರಣವಾಗುತ್ತದೆ ಎಂದರು,
ಇದೇ ಸಂಧರ್ಭದಲ್ಲಿ ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಎಸ್‌ಆರ್‌ಎಸ್‌ಶಾಲೆ, ಚಿನ್ಮಯಿ ಶಾಲೆ, ವಾರಿಯರ್ಸ ಶಾಲಾ ಮಕ್ಕಳು ಭಾಗವಹಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ 41 ಮಕ್ಕಳು, ಗುಂಪು ವಿಭಾಗದಲ್ಲಿ 45 ಮಕ್ಕಳು ನೊಂದಾಯಿಸಿಕೊAಡಿದ್ದರು.
ಇದೇ ಸಂಧರ್ಭದಲ್ಲಿ ಶಿಕ್ಷಕರಾದ ಮಲ್ಲಿಕಾರ್ಜುನ, ಎಸ್ ಬಿ.ಅಂಗಡಿ, ಬಾನುಪ್ರಿಯಾ, ಹೊಂಗಿರಣ ಶಾಲೆಯ ದಯಾನಂದ, ರಮ್ಯ, ಜ್ಯೋತಿ, ಪ್ರಿಯಾಂಕಾ, ಮಂಜುನಾಥ್, ಒಂಶ್ರೀ, ಪ್ರತಾಪ್, ಸಂದ್ಯಾ, ವಿಜಯ್‌ಶ್ರೀ ಇತರರು ಪಾಲ್ಗೊಂಡಿದ್ದರು.