ಚಳ್ಳಕೆರೆ : ಕೂಗಳತೆ ದೂರದಲ್ಲಿರುವ ಪೊಲೀಸ್ ಠಾಣೆ ಮುಂಭಾಗದಲ್ಲಿ ವÀಯೋವೃದ್ದೆಯನ್ನು ಅಡ್ಡಗಟ್ಟಿ ಕೈಯಲ್ಲಿರುವ ಬಳೆ, ಸರ ಕದಿಯಲು ಯತ್ನಿಸಿ ಕಳ್ಳರ ಪ್ರಯತ್ನ ಫಲಿಸದೆ, ವಾಪಸ್ ಆದ ಘಟನೆ ನಗರದಲ್ಲಿ ಜರುಗಿದೆ.
ಹೌದು ನಗರದಲ್ಲಿ ಕಳ್ಳರ ಕೈಚಳಕ ಇತ್ತಿಚೀಗೆ ಜಾಸ್ತಿಯಾಗಿದೆ ಪೋಲಿಸರು ಎಷ್ಟೇ ಕಳ್ಳರ ಮೇಲೆ ನಿಗಾವಹಿಸಿದರು ಕಳ್ಳರ ಆವಳಿ ಮಾತ್ರ ತಪ್ಪಿಲ್ಲ, ನಿತ್ಯವೂ ಒಂದಿಲ್ಲೊAದು ಪ್ರಕರಣಗಳು ನಡೆಯುತ್ತಲೆ ಇವೆ ಆದರೆ ಎಷ್ಟೋ ಪ್ರಕರಣಗಳು ಠಾಣೆಯಲ್ಲಿ ದಾಖಲಾಗದೆ ಉಳಿದಿವೆ,
ಇನ್ನೂ ನಗರಸಭೆ ಮುಂಬಾಗ ಹಾಡ ಹಗಲೆ ಬೈಕ್ ಕದ್ದ ಕಳ್ಳರು ಯಾವುದೇ ಸುಳಿವು ಇಲ್ಲದೆ ಪರಾರಿಯಾಗಿದ್ದಾರೆ. ತಾಲೂಕಿನ ಉಪ್ಪಾರಹಟ್ಟಿ ಕೀರ್ತಿ ಎಂಬುವವರು ನಗರಸಭೆ ಒಳಗಡೆ ತಮ್ಮ ಕೆಲಸ ಮುಗಿಸಿ ಬಂದು ನೋಡಿದರೆ ಬೈಕ್ ಕಳುವಾಗಿದೆ,
ಇಗೇ ಆಂದ್ರದ ಗಡಿಯನ್ನು ಹಂಚಿಕೊAಡ ಚಳ್ಳಕೆರೆಗೆ ಎರಡು ರಾಜ್ಯದ ಸಾರ್ವಜನಿಕರು ನಿತ್ಯದ ಕೆಲಸಗಳಿಗೆ ಬರುವುದು ಮಾಮೂಲಾಗಿದೆ ಆದರೆ ಇದರ ಜೊತೆಗೆ ಕಳ್ಳರು ಕೂಡ ತಮ್ಮ ಕೈಚಳಕ ತೋರುತ್ತಿದ್ದಾರೆ.

ರಸ್ತೆ ಪಕ್ಕದಲ್ಲಿ ವಯೋವೃದ್ದಿ ಹೋಗುವಾಗ ಕಳ್ಳರು ಮಾಗಲ್ಯ ಸರ ಹಾಗು ಬಳೆ ಕದಿಯಲು ಯತ್ನಿಸಿದ್ದಾರೆ ಆದರೆ ವೃದ್ದೆ ವಿರೋಧ ವ್ಯಕ್ತ ಪಡಿಸಿದ ನಂತರ ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ
ವೃದ್ದೆ ಜಿ.ಪುಟ್ಟಮ್ಮ ಸುಮಾರು 72 ವರುಷ ಪರಶುರಾಂಪುರ ಹೊಬಳಿಯ ಬೊಮ್ಮನಕುಂಟೆ ಗ್ರಾಮದ ಇವರು ಬ್ಯಾಂಕ್ ಕೆಲಸದ ನಿಮಿತ್ತ ಚಳ್ಳಕೆರೆ ಪೊಲೀಸ್ ಠಾಣೆ ಮುಂಭಾಗ ನಡೆದು ಕೊಂಡು ಹೋಗುವಾಗ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದು ನೀವು ಒಡವೆ ಸರ ಮತ್ತು ಬಳೆ ಹಾಕಿದ್ದೀರಿ ತೆಗೆದು ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಬಳೆ ತೆಗೆದು ಬ್ಯಾಗ್‌ನಲ್ಲಿ ಇಟ್ಟಿದ್ದಾರೆ ನಂತರ ಸರ ತೆಗೆಯಲು ಹೇಳಿದ್ದಾರೆ ಎಚ್ಚೆತ್ತು ಕೊಂಡ ಪುಟ್ಟಮ್ಮ ಮಗನಿಗೆ ಫೋನ್ ಮಾಡಲು ಮುಂದಾಗಿದ್ದಾರೆ ಆಗ ಎಚ್ಚರ ಗೊಂಡ ಕಳ್ಳರು ಬೈಕ್ ನಲ್ಲಿ ಪರಾರಿಯಾದ ಘಟನೆ ನಡೆದಿದೆ

Namma Challakere Local News
error: Content is protected !!