ಚಳ್ಳಕೆರೆ : ಕೆಲವು ಹಳ್ಳಿಗಳಲ್ಲಿ ಸ್ಮಶಾನ ಇಲ್ಲದೆ ರಸ್ತೆ ಬದಿಯಲ್ಲಿ, ನದಿ ಪಕ್ಕದಲ್ಲಿ ಹುಳುವುದು ವಿಷಾಧನೀಯಕರ ಘಟನೆ ಇಂತಹ ಘಟನೆಗಳು ಮರುಕಳಿಸಬಾರದು ಎಂದರು ಅಧಿಕಾರಿಗಳು ಪಣ ತೊಟ್ಟು ಸ್ಮಶಾನ ಜಾಗ ನಿಗಧಿ ಮಾಡಬೇಕು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರೀಶಿಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಮನುಷ್ಯ ಸಮಾಜದಲ್ಲಿ ಇರುವಷ್ಟು ದಿವಸ ಎಲ್ಲವನ್ನು ನನ್ನದು ಎಂಬ ಮನೋಭಾವ ತಾಳುತ್ತಾನೆ ಆದರೆ ಅವನು ಸತ್ತ ನಂತರ ಮಣ್ಣು ಮಾಡಲು ಜಾಗಕ್ಕೆ ಹುಡುಕಾಟ ನಡೆಸುತ್ತಾರೆ, ಇದೇ ವಿಚಿತ್ರವಾದ ಜೀವನ ಆದ್ದರಿಂದ ಶ್ರೀಮಂತರು ತಮ್ಮ ಸ್ವಂತ ಭೂಮಿಯಲ್ಲಿ ಹುಳುತ್ತಾರೆ ಆದರೆ ಬಡವರು ಜಾಗಕ್ಕೆ ಹೋರಾಟ ನಡೆಸುತ್ತಾರೆ ಆದ್ದರಿಂದ ಮತ್ತೆ ಇಂತಹ ಘಟನೆಗಳು ಮರುಕಳಿಸುವ ಮುನ್ನ ಸ್ಮಶಾನ ಜಾಗ ನಿಗಧಿ ಮಾಡಿ, ತಾಲ್ಲೂಕಿನಲ್ಲಿ ತೊರೆಬೀರನಹಳ್ಳಿ ಗ್ರಾಮದ ಸ್ಮಶಾನ ಅತೀ ಗಂಭೀರವಾದ ಸಮಸ್ಯೆ ಇದೆ ಆದ್ದರಿಂದ ಪರಿಶಿಷ್ಟ ಜಾತಿಯ ಜನರು ತಮ್ಮ ಜಮಿನು ಇಲ್ಲದೆ ಸ್ಮಶಾನ ಅವಲಂಬಿತಾಗಿದ್ದಾರೆ, ಡಿ.20 ರಂದು ಸ್ಮಶಾನ ಮುಕ್ತ ಚಳ್ಳಕೆರೆ ಕ್ಷೇತ್ರವಾಗಬೇಕು ಎಲ್ಲಾ ಅಧಿಕಾರಿಗಳು ಪಣತೊಡಬೇಕು ಎಂದರು.

ಇನ್ನೂ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಅತೀ ಕಡು ಬಡತನದಿಂದ ಜೀವನ ನಡೆಸುವ ಬಹಳಷ್ಟು ಜನರಿದ್ದಾರೆ ಅವರಿಗೆ ಸ್ವಂತ ಭೂಮಿ ಇಲ್ಲದೆ ಇರುವವರು ಸರಕಾರಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲು ಅನುಕೂಲ ಮಾಡಲಾಗಿದೆ ಇನ್ನು ಅನೇಕ ಗ್ರಾಮಗಳಲ್ಲಿ ಈಗಾಗಲೇ ನಿಗಧಿತ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಲು ನಾಮಫಲಕ ಅಳವಡಿಸಿದೆ, ಅಭಿವೃದ್ದಿ ಮಾಡಬೇಕಾದ ಸ್ಮಶಾನಗಳನ್ನು ತುರ್ತಾಗಿ ಅಭಿವೃದ್ದಿ ಪಡಿಸಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ತಾಪಂ.ಇಓ ಹೊನ್ನಯ್ಯ, ಸಹಾಯಕ ನಿದೇರ್ಶಕ ಸಂತೋಷ್ ಕುಮಾರ್, ಇತರ ಅಧಿಕಾರಿಗಳು ಇದ್ದರು.

About The Author

Namma Challakere Local News
error: Content is protected !!