ಚಳ್ಳಕೆರೆ : ವಕೀಲ ವೃತ್ತಿ ಪವಿತ್ರವಾದ ವೃತ್ತಿ, ಇಂತಹ ವೃತ್ತಿಯಲ್ಲಿ ಸಮಾಜದ ಒಂದು ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಾಸುವುದು ಪುಣ್ಯದ ಕಾರ್ಯ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ಸೊಮಗುದ್ದು ರಸ್ತೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ವಕೀಲರು ಸೇವೆ ಸಲ್ಲಿಸುತ್ತಿರುವುದು ಶಾಘ್ಲನೀಯ, ಇಂತಹ ಮಹತ್ವದ ಕಾರ್ಯದಲ್ಲಿ ತಾಲೂಕಿನ ಎಲ್ಲಾ ವಕೀಲರು ಒಂದೆಡೆ ಸೇರಿ ತಮ್ಮ ದಿನಾಚರಣೆ ಆಚರಣೆ ಮಾಡಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ಇನ್ನೂ ಇದೇ ಸಂಧರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ರುದ್ರೇಶ್ ಜಗದೀಶ್ ಗೌಡ ಮಾತನಾಡಿ, ಇಂದು ಸಮಾಜದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ದಿನ ನಿತ್ಯ ಪ್ರಕರಣಗಳು ನ್ಯಾಯಾಲದ ಮೆಟ್ಟಿಲು ಹೇರುತ್ತಿವೆ, ಇಂತಹ ಪ್ರಕರಣಗಳಲ್ಲಿ ತಮ್ಮ ಕಕ್ಷಿದಾರರ ಪರ ವಾದ ಮಂಡಿಸುವ ವಕೀಲರ ವೃತ್ತಿ, ತಮ್ಮ ಪಾವಿತ್ರö್ಯತೆ ಕಾಪಾಡಿಕೊಳ್ಳಬೇಕು ಎಂದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಸಮಾಜದ ಪರಿವರ್ತನೆಗೆ ಪ್ರತಿಯೊಬ್ಬರು ಇಂದು ದೀಕ್ಷೆ ಪಡೆಯಬೇಕು ಇಂದು ದೇಶಾದ್ಯಾಂತ ವಕೀಲರ ದಿನಾಚರಣೆ ಆಚರಣೆ ಮಾಡಿಕೊಳ್ಳುತ್ತಿರುವ ಸಂತಸ ತಂದಿದೆ, ಯಾವುದೇ ಪ್ರಕರಣವೂ ಕೂಡ ಸಂವಿಧಾನದ ಅಡಿಯಲ್ಲಿ ಜನಗಳ ಆಶಯಕ್ಕೆ ದಕ್ಕೆ ಬಾರದ ರೀತಿಯಲ್ಲಿ ಇಂದು ತಮ್ಮ ನ್ಯಾಯ ನೀಡುವ ಕಾನೂನು ಪರಿಪಾಲನೆ ಮಾಡುವ ವೃತ್ತಿ ಪವಿತ್ರವಾದದ್ದು ಎಂದರು.
ಇದೇ ಸಂಧರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಗಾಯತ್ರಿ ಎಸ್.ಕಾಟೆ, ವಕೀಲ ಸಂಘದ ಅಧ್ಯಕ್ಷ ಆನಂದಪ್ಪ, ಉಪಾಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಉಪೇಂದ್ರಕುಮಾರ್, ಸಹಕಾರದರ್ಶಿ ಎಜಿ.ಕಾಂತರಾಜ್, ವಕೀಲರಾದ ಜೆ.ಕುಮಾರ್, ಮಮತ, ಪಾಪಣ್ಣ, ಸದಾನಂದ, ತಿಪ್ಪೆಸ್ವಾಮಿ, ನಗರಸಭೆ ಸದಸ್ಯ ರಮೇಶ್ ಗೌಡ, ಮುಖಂಡ ಬೋರಯ್ಯ, ದೊಡ್ಡರಂಗಪ್ಪ ಮುಂತಾದವರು ಉಪಸ್ಥಿತರಿದ್ದರು