ಚಳ್ಳಕೆರೆ : ಕ್ರೀಡಾ ಆಸಕ್ತಿಗೆ ಶಾಲೆಗೆ ಆರು ದಿನಗಳ ಕಾಲ ರಜೆ ಹಾಕಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗೆ ಖಾಸಗಿ ಶಾಲೆಯ ಕಾರ್ಯದರ್ಶಿಯೊಬ್ಬರು ಥಳಿಸಿದ್ದರಿಂದ ಪೊಲೀಸ್ ಠಾಣಾ ಮೆಟ್ಟಿಲೆರಿದ ಪ್ರಸಂಗವೊAದು ಜರುಗಿದೆ.
ಹೌದು ನಿಜಕ್ಕೂ ಅವಮಾನಿಯಕರ ಘಟನೆ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ತೊಡಗಿ ದೈಹಿಕವಾಗಿ ಮಾನಸೀಕವಾಗಿ, ಸದೃಡರಾಗಿ ನಮ್ಮ ದೇಶದಲ್ಲಿ ಕ್ರೀಡೆಯನ್ನು ಪ್ರಜ್ವಲಿಸಬೇಕು ಎಂಬ ಕನಸಿಗೆ ಎಳ್ಳು ನೀರು ಬಿಡುವ ಖಾಸಗಿ ಶಾಲೆಗಳು ಕೇವಲ ಪಠ್ಯ ವಿಷಯಕ್ಕೆ ಸೀಮಿತವಾಗಿವೆ ಎಂಬತಿವೆ.
ತಾಲೂಕಿನ ದೊಡ್ಡಉಳ್ಳಾರ್ತಿ ಖಾಸಗಿ ಕಾನ್ವೆಂಟ್‌ನಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಸುಮಾರು ಆರು ದಿನಗಳಿಂದ ಶಾಲೆಗೆ ಹೋಗಿರಲಿಲ್ಲ ಎಂಬ ವಿಷಯಕ್ಕೆ ವಿದ್ಯಾರ್ಥಿಯನ್ನು ಒಡೆದು ಥಳಿಸಿದ್ದರು, ಆದರೆ ವಿದ್ಯಾರ್ಥಿಯು ಯಾರಿಗೂ ಹೇಳದೆ ನೋವುನುಂಡು ಸುಮ್ಮನಿದ್ದ ಆದರೆ ಶುಕ್ರವಾರ ವಿದ್ಯಾರ್ಥಿಗೆ ಚಳಿ, ಜ್ವರ ಹಾಗೂ ನಡುಕ ಉಂಟಾಗಿ ಭಯವದಿಂದ ನಡಗುತ್ತಿರುವುದನ್ನು ಕಂಡ ಪೋಷಕರು ತಕ್ಷಣ ಚಳ್ಳಕೆರೆ ನಗರದ ಸಾರ್ವಜನಿಕರ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದಾರೆ ಆಗ ವಿದ್ಯಾರ್ಥಿಯು ತಂದೆ, ತಾಯಿ ಬಳಿ ಶಾಲೆಯ ಎಂಡಿ ಗುರುವಾರ ಒಡೆದಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ ಇನ್ನೂ ಈ ಪ್ರಕರಣ ಪೊಲೀಸ್ ಮೆಟ್ಟಿಲೆರಿದೆ ಎನ್ನಲಾಗಿದೆ.

ಬಾಕ್ಸ್ ಮಾಡಿ :
ಯಾವುದೇ ಖಾಸಗಿ ಒಡೆತನದ ಶಾಲೆಗಳು ಇಂತಹ ಘಟನೆಗಳಿಗೆ ಅಸ್ಪಾದ ನೀಡಬಾರದು, ಇಂತಹ ಘಟನೆಗಳಿಂದ ಮಕ್ಕಳ ಮನಸ್ಥಿತಿ ಕುಂದು ಹೊಗುತ್ತದೆ, ಮಕ್ಕಳನ್ನು ಶಾಲೆಗೆ ಕರೆತರವು ಪ್ರೇರೆಪಣೆ ಮಾಡಬೇಕು, ಈ ಶಾಲೆಯಲ್ಲಿ ನಡೆದ ಘಟನೆ ಮತ್ತೆ ಮರುಕಳಿಸಬಾರದು ವಿದ್ಯಾರ್ಥಿಗಳಿಗೆ ಪ್ರೇರೆಪಣೆ ನೀಡಬೇಕು, ಶಾಲಾ ಬಿಟ್ಟ ಮಕ್ಕಳಿಗೆ ವಿಶೇಷ ಅಭಿಯಾನದ ಮೂಲಕ ನಾವು ಕರೆತರುವ ಕಾರ್ಯಮಾಡುತ್ತೆವೆ ಆದರೆ ಇಂತಹ ಘಟನೆಗಳಿಂದ ಮಕ್ಕಳ ಸ್ಥರ್ಯ ಕುಗ್ಗಿಸಬಾರದು.
—ತಹಶೀಲ್ದಾರ್ ಎನ್.ರಘುಮೂರ್ತಿ

Namma Challakere Local News
error: Content is protected !!