ಉದ್ಯಮ ಶೀಲತಾಭಿವೃದ್ಧಿಯಲ್ಲಿ- ಕುರಿ ಸಾಕಾಣಿಕೆ ತರಬೇತಿ
ಚಿತ್ರದುರ್ಗ ರುಡ್‌ಸೆಟ್ ಸಂಸ್ಥೆ, ಹಾಗೂ ಜಿಲ್ಲಾ ಪಂಚಾಯತ ಪಾಯೋಜಕತ್ವದಲ್ಲಿ ಜೀವನೋಪಾಯಕ್ಕಾಗಿ ಸಂಪೂರ್ಣ ಉದ್ಯೋಗ (ಉನ್ನತಿ) ಯೋಜನೆಯಡಿಯಲ್ಲಿ ಉದ್ಯಮ ಶೀಲತಾಭಿವೃದ್ಧಿಯಲ್ಲಿ- ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು 10 ದಿನಗಳ ಕಾಲಾವಧಿಯಲ್ಲಿ ತರಬೇತಿ ಆಯೋಜಿಸಲಾಗಿತ್ತು,
ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಹಂತೇಶ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ ಚಿತ್ರದುರ್ಗ ಇವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು
ಕಾರ್ಯಕ್ರಮದಲ್ಲಿ ಡಾ|| ಸಿ.ತಿಪ್ಪೇಸ್ವಾಮಿ, ಸಹಾಯಕ ನಿರ್ದೇಶಕರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ಇಲಾಖೆ, ಕುಧಾಪೂರ ಮತ್ತು ಜಿಲ್ಲಾ ಸಂಯೋಜಕರು, ಎನ್.ಆರ್.ಎಲ್.ಎಂ. ಯೋಜನೆ ಅಧಿಕಾರಿ ರಮೇಶ್, ಡಾ|| ಕಲ್ಲಪ್ಪ, ಉಪ ನಿರ್ದೇಶಕರು, ಪಶುಸಂಗೋಪನಾ ಇಲಾಖೆ, ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಹೆಚ್.ಆರ್.ರಾಧಮ್ಮ, ತೋಟಪ್ಪ ಎಸ್. ಗಾಣಿಗೇರ, ಉದಯಕುಮಾರ ಎಮ್. ಇತರರು ಇದ್ದರು.