ಕಾಡುಗೊಲ್ಲ ಸಮುದಾಯದ ಮುಖಂಡ ಕೆ.ಟಿ ನಿಜಲಿಂಗಪ್ಪರವರಿಗೆ ಪಿತೃವಿಯೋಗ
ಚಳ್ಳಕೆರೆ : ಟಿಎಪಿಎಂಸಿಯ ಮಾಜಿ ಅಧ್ಯಕ್ಷ ಪಿಎಲ್ಡಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಹಾಗೂ ನಿರ್ದೇಶಕ ಹಾಗೂ ಬೆಳಗೆರೆ ಗ್ರಾಮಪಂಚಾಯಿತಿ ಮಾಜಿ ಉಪಾಧ್ಯಕ್ಷ ಮತ್ತು ಕಾಡುಗೊಲ್ಲ ಸಮುದಾಯದ ಮುಖಂಡ ಕೆ.ಟಿ ನಿಜಲಿಂಗಪ್ಪ ಇವರ ತಂದೆಯವರಾದ ಕರಂಗಮ್ಮರ್ ತಿಪ್ಪೇಸ್ವಾಮಿ ಯವರು ದೈವದಿನರಾಗಿದ್ದಾರೆ.
ಇವರಗೆ 79 ವರ್ಷ ವಯಸ್ಸಾಗಿದ್ದು ಇಂದು ಮನೆಯಲ್ಲಿ ದೈವದಿನರಾಗಿದ್ದಾರೆ. ಇವರಿಗೆ ಮೂರು ಜನ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು ಅಪಾರ ಬಂದು ಬಳಗವನ್ನ ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ಬೆಳಗೆರೆ ಸ್ವಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯ ನೆರವೇರಿತು, ತಿಪ್ಪೇಸ್ವಾಮಿಯವರ ಸುಪುತ್ರರಾದ ಕೆಟಿ.ನಿಜಲಿಂಗಪ್ಪ ಇವರು ಮಾಹಿತಿ ನೀಡಿದ್ದಾರೆ.
ಇನ್ನೂ ಕ್ಷೇತ್ರದ ಶಾಸಕರಾದ ಟಿ. ರಘುಮೂರ್ತಿ, ತಹಶೀಲ್ದಾರ್ ಎನ್.ರಘುಮೂರ್ತಿ, ಕೆಎಂಎಫ್ನ ನಿರ್ದೇಶಕ ವೀರಭದ್ರಬಾಬು ಇತರ ಮುಖಂಡರು ಇಂದು ಪಾರ್ಥಿವ ಶರೀರಕ್ಕೆ ಪುಷ್ಪ ಮಾಲಿಕೆ ಅರ್ಪಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.