ಪ್ರತಿಯೊಬ್ಬ ಭಾರತೀಯರು ಸಂವಿಧಾನವನ್ನು ಗೌರವಿಸಬೇಕು : ಕೆ.ಎಸ್. ಮಂಜಣ್ಣ ಅಭಿಪ್ರಾಯ
ಚಳ್ಳಕೆರೆ : ದೇಶದ ಸರ್ವಭೌಮತೆ ಹಾಗೂ ಪ್ರತಿಗಳ ಹಕ್ಕುಗಳ ರಕ್ಷಣೆ ಸಂವಿಧಾನದಿAದ ಮಾತ್ರ ಸಾಧ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎಸ್ ಮಂಜಣ್ಣ ಹೇಳಿದ್ದಾರೆ.
ಅವರು ನಾಯಕನಹಟ್ಟಿ ಹೋಬಳಿಯ ಗಜ್ಜುಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸಂವಿಧಾನ ದಿನಾಚರಣೆ ಪ್ರತಿಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ ಸಂವಿಧಾನ ಜನರ ಜೀವನಾಡಿಯಾಗಿದ್ದು ಪ್ರತಿಯೊಬ್ಬ ಭಾರತೀಯರು ಸಂವಿಧಾನವನ್ನು ಗೌರವಿಸಬೇಕು.
ಭಾರತ ದೇಶದ ಸಂವಿಧಾನವು ಇಡೀ ವಿಶ್ವಕ್ಕೆ ದೊಡ್ಡ ಸಂವಿಧಾನವಾಗಿದೆ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಿಆರ್ ಅಂಬೇಡ್ಕರ್ ರವರು ಸಂವಿಧಾನದ ಮೂಲ ಕರುಡನ ಸಭಾಧ್ಯಕ್ಷರಾದ ಡಾ ರಾಜೇಂದ್ರ ಪ್ರಸಾದ್ ರವರ ಕೈಗೆ ಒಪ್ಪಿಸಿದರು.
ಭಾರತದ ಮೊದಲ ಸಂಸತ್ತು ಆಗಿದ್ದ ಸಭೆ ಎಲ್ಲಾ ಸದಸ್ಯರ ಇದಕ್ಕೆ ಸಹಿ ಹಾಕುವ ಮೂಲಕ ನವೆಂಬರ್ 26ರಂದು ಇದನ್ನು ಭಾರತದ ಸಂವಿಧಾನವೆAದು ಅಂಗೀಕರಿಸಲಾಯಿತು ಭಾರತದ ಸಂವಿಧಾನವನ್ನು 1949ರ ನವಂಬರ್ 26ರಂದು ಸ್ವೀಕರಿಸಲಾಯಿತು ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ಬಂದಿತ್ತು ಭಾರತದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರು. ಸಮರ್ಪಣಾ ದಿನವೆಂದು ಕರೆಯಲಾಗುತ್ತದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಎಸ್ ಮಂಜಣ್ಣ ತಿಳಿಸಿದರು.
ಈ ವೇಳೆಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಜಿಬಿ ತಿಪ್ಪೇಸ್ವಾಮಿ ಮಾತನಾಡಿ ಭಾರತೀಯ ಪ್ರತಿಯೊಬ್ಬ ಪ್ರಜೆಯು ಸಂವಿಧಾನವನ್ನು ಗೌರವಿಸಬೇಕು ಸಂವಿಧಾನವನ್ನು ರಕ್ಷಿಸುವ ಕೆಲಸ ಪ್ರತಿಯೊಬ್ಬ ಭಾರತೀಯ ಮಾಡಬೇಕು ಎಂದು ಡಿಎಸ್ಎಸ್ ಸಂಚಾಲಕ ಜಿ ಬಿ ತಿಪ್ಪೇಸ್ವಾಮಿ ತಿಳಿಸಿದರು.
ನಂತರ ಶಾಲೆಯ ಮುಖ್ಯ ಶಿಕ್ಷಕರಾದ ಸ್ವಾಮಿನಾಥ್ ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರತಿಜ್ಞಾವಿಧಿಯನ್ನ ಬೋಧಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಓ ದಾಸಯ್ಯ, ಶಾಲೆಯ ಶಿಕ್ಷಕರಾದ ಪೆನ್ನುಬಳಿ, ಜಿ ಒ ನಾಗರಾಜ್, ಲಿಂಗಸ್ವಾಮಿ ಸೇರಿದಂತೆ ಗ್ರಾಮಸ್ಥರಾದ ತಿಮ್ಮರೆಡ್ಡಿ, ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು