ಈಡೀ ವಿಶ್ವಕ್ಕೆ ಭಾರತದ ಸಂವಿಧಾನ ದೊಡ್ಡದು : ವಕೀಲರಾದ ಟಿ.ಶಶಿಕುಮಾರ್ ಹೇಳಿಕೆ
ಚಳ್ಳಕೆರೆ : ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಭಾರತ ಸಂವಿಧಾನ ದಿನಾಚರಣೆಯನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸಂವಿಧಾನದ ದಿನಾಚರಣೆಯನ್ನು ಆಚರಿಸಲಾಯಿತು
ಈದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹಾಗೂ ವಕೀಲರಾದ ಟಿ.ಶಶಿಕುಮಾರ್ ಮಾತನಾಡಿ, ಭಾರತ ದೇಶದ ಸಂವಿಧಾನವು ಇಡೀ ವಿಶ್ವಕ್ಕೆ ದೊಡ್ಡ ಸಂವಿಧಾನವಾಗಿದೆ, ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಡಾ.ಬಿಆರ್.ಅಂಬೇಡ್ಕರ್ ರವರು ಸಂವಿಧಾನದ ಮೂಲ ಕರುಡನ ಸಭಾಧ್ಯಕ್ಷರಾದ ಡಾ ರಾಜೇಂದ್ರ ಪ್ರಸಾದ್ ರವರ ಕೈಗೆ ಒಪ್ಪಿಸಿದ ಸುದೀನವಾಗಿದೆ ಎಂದು ನೆನೆದರು.
ಇನ್ನೂ ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಗೀತಮ್ಮ ರವಿಕುಮಾರ್ ಮತ್ತು ಕ್ಲರ್ಕ್.ಬಿ ರಾಜಣ್ಣ, ಕಾರ್ಯದರ್ಶಿ ನಾಗರಾಜ್, ಹೆಚ್ಚುವರಿ ಬಿಲ್ ಕಲೆಕ್ಟರ್ ಪ್ರಕಾಶ, ಗ್ರಾಮಸ್ಥರಾದ ಬಸಪ್ಪ ಮುಂತಾದವರಿದ್ದರು