ರಾಜಕೀಯ ಸರಿಯಾದ ದಿಕ್ಕಿನಲ್ಲಿ ನಡೆದರೆ ಸಂವಿದಾನ ಆಶಯಕ್ಕೆ ನ್ಯಾಯ ಸಿಗುತ್ತದೆ : ಶಾಸಕ ಟಿ.ರಘುಮೂರ್ತಿ ಹೇಳಿಕೆ
ಚಳ್ಳಕೆರೆ : ಅನಕ್ಷರಸ್ಥರಿಗೂ ಕೂಡ ಸಂವಿಧಾನದಡಿಯಲ್ಲಿ ಜೀವಿಸುವ ಹಕ್ಕು ರೂಪಿಸಿದೆ, ಆದರೆ ರಾಜಾಕರಣ ಸರಿಯಾದ ದಿಕ್ಕಿನಲ್ಲಿ ನಡೆದರೆ ಸಂವಿದಾನ ಆಶಯಕ್ಕೆ ನ್ಯಾಯ ಸಿಗುತ್ತದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಹೂವು ಮಾಲೆ ಹಾಕಿನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಅಂಬೇಡ್ಕರ್‌ರನ್ನು ಕೇವಲ ಒಂದು ಜಾತಿಗೆ ಸಿಮಿತಗೊಳಿಸದೆ ಅವರನ್ನು ಸರ್ವ ಧರ್ಮಿಯದವರು ನೆನೆಯುವಂತಾಗಬೇಕು, ಆದರೆ ಇಂದಿನ ಪರಸ್ಥಿತಿಯಲ್ಲಿ ಸಂವಿಧಾನವನ್ನು ರಕ್ಷಣೆ ಮಾಡುವ ಅನಿವಾರ್ಯತೆ ಇದೆ. ಈಗಿನ ರಾಜಕೀಯ ವ್ಯವಸ್ಥೆ ಯಲ್ಲಿ ಸಾರ್ವಜನಿಕರು, ವಿದ್ಯಾವಂತರು ಹಾಗೂ ಯುವಕರು ಇದನ್ನು ಮನಗಾಣಬೇಕಿದೆ. ಇನ್ನೂ ಸೌಲಭ್ಯ ನೀಡುವ ವ್ಯವಸ್ಥೆ ಯಲ್ಲಿ ಕೂಡ ರಾಜಾಕಾರಣ ಎದ್ದು ಕಾಣುತ್ತದೆ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನ ಸಾಮನ್ಯರು ಮತದಾನ ವ್ಯವಸ್ಥೆಯಲ್ಲಿ ಸಾರ್ವಜನಿಕರು ಗಂಬೀರವಾಗಿ ತಿಳಿಯಬೇಕು, ಮುಂದಿನ ದಿನಗಳಲ್ಲಿ ಪ್ರಜ್ಞಾವಂತರಾಗಿ ಯಾವುದೇ ಪಕ್ಷ ಜಾತಿ ರಹಿತವಾಗಿರಬೇಕು ಎಂದರು.
ಇನ್ನೂ ತಹಶಿಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಸಂವಿಧಾನ ಸಮರ್ಪಣಾ ದಿನ ನಮ್ಮೆಲ್ಲಾ ಆಶಯಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಮಹತ್ವದ ಸಂವಿಧಾನವಾಗಿದೆ ಅಂತಹ ಸಂವಿಧಾನ ಅನುಷ್ಟಾನ ಮಾಡುವ ಕಾರ್ಯ ನಮ್ಮದಾಗಿದೆ. ಸಂವಿಧಾನ ಕರಡು ಪ್ರತಿಯಲ್ಲಿ ನಮ್ಮಕರ್ತವ್ಯಗಳು ಸಂಪೂರ್ಣವಾಗಿ ಹರಿಯಬೇಕು, ಇಂದು ನಾವೇಲ್ಲಾರೂ ಒಂದು ದೀಕ್ಷೆ ಪಡೆಯಬೇಕು, ಮುಂದಿನ ದಿನಗಳಲ್ಲಿ ಸಂವಿಧಾನದ ಆಶಯಗಳನ್ನು ನಾವು ಈಡೀ ಸಮಾಜದಲ್ಲಿ ಪರಿಚಯಿಸುವ ಮೂಲಕ ಸಂವಿಧಾನದ ಆಶಯ ಉಳಿಸುವ ಕಾರ್ಯ ವಾಗಬೇಕು ಎಂದರು.
ಇನ್ನೂ ನಗರಸಭಾ ಸದಸ್ಯ ಕೆ.ವೀರಭದ್ರಯ್ಯ ಮಾತನಾಡಿ, ಐನೂರು ಅರವತ್ತು ಸಂಸ್ಥಾನಗಳನ್ನು ಒಗ್ಗೂಡಿಸಿ ಸಂವಿಧಾನದ ರಚಿಸಿದ ಅಂಬೇಡ್ಕರ್ ಅವರ ಶ್ರಮ ಸಂಧರ್ಭದಲ್ಲಿ ಇಲ್ಲಿ ಸ್ಮರಿಸುವಂತಾಗಿದೆ. ನಮ್ಮ ರಾಷ್ಟ್ರದ ನಾಯಕರು ಹೊರ ದೇಶಕ್ಕೆ ಸಂವಿಧಾನ ರೂಪಿಸಿ ಎಂದು ಬೇಡಿಕೆ ಇಟ್ಟಾಗ ಭಾರತ ದೇಶದಲ್ಲಿ ಆರು ಸಾವಿರ ಜಾತಿಗಳು ಇವೆ, ಆದ್ದರಿಂದ ನಿಮ್ಮ ದೇಶದ ಮಹಾನ್ ವ್ಯಕ್ತಿ ಅಂಬೇಡ್ಕರ್ ಗೆ ಮಾತ್ರ ಸಾಧ್ಯ ಅವರನ್ನು ಬಿಟ್ಟರೆ ಬೇರೆ ಯಾರೀಗೂ ಸಂವಿಧಾನ ರೂಪಿಸಲು ಸಾಧ್ಯವಿಲ್ಲ ಎಂದರು.
ಸಾಮಾಜಿಕ ಕಾರ್ಯಕರ್ತ ಹೆಚ್.ಎಸ್.ಸೈಯದ್ ಮಾತನಾಡಿ, ದೇಶದ 149 ಕೋಟಿ ಜನಸಂಖ್ಯೆ ಇಂದು ಸಂವಿಧಾನ ಅಡಿಯಲ್ಲಿ ಇವೆ,ಇನ್ನೂ ಅನೇಕ ಹಲವು ಗ್ರಂಥ ಗಳು ಇದ್ದರೂ ಕೂಡ ಸಂವಿಧಾನದAತಹ ಗ್ರಂಥ ಬೇರೆ ಎಲ್ಲೂ ಸಿಗುವುದಿಲ್ಲ, ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ಸಿಗುವ ನಿಟ್ಟಿನಲ್ಲಿ ಸಂವಿಧಾನ ನೆರವಾಗಿದೆ. ಹಿಂದೂ ಕೋಡ್ ಬಿಲ್ ಬಗ್ಗೆ ಹೆಣ್ಣು ಮಕ್ಕಳು ಹರಿಯಬೇಕು, ಪ್ರೀಯಂಬಲ್ ಗ್ರಂಥವನ್ನು ಎಲ್ಲಾಜನರು ಅಧ್ಯಯನ ಮಾಡಬೇಕು ಎಂದು ಕರೆಕೊಟ್ಟರು.
ದಲಿತ ಮುಖಂಡ ಉಮೇಶ್ ಚಂದ್ರ ಬ್ಯಾನರ್ಜಿ ಮಾತನಾಡಿ, ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಿದೆ ಎಂದರು.
ಮುಖAಡ ದ್ಯಾಮಣ್ಣ ಮೈತ್ರಿಮಾತನಾಡಿ, ಬಹು ಸಂಖ್ಯಾAತ ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಸಂವಿಧಾನ ರೂಪಿಸಿರುವುದು ಅಂಬೇಡ್ಕರ್ ನೈಪುಣ್ಯತೆ ಎಷ್ಟಿತ್ತು ಎಂಬುದು ಅರಿಯಬೇಕು, ನಾವೇಲಾರೂ ಪ್ರಜ್ಣಾವಂತರು ಮನಗಾಣಬೇಕು ಎಂದರು.
ನಗರಸಭೆ ಸದಸ್ಯೆ ಕವಿತಾ ಬೋರಯ್ಯ ಮಾತನಾಡಿ, ಜಗತ್ತಿನ ಭದ್ರ ಬುನಾದಿ ಸಂವಿಧಾನ, ಅಂಬೇಡ್ಕರ್ ರಚನಾ ಸಮಿತಿ ಸದಸ್ಯರನ್ನು ಇಂದು ಸರ್ವರನ್ನು ನೆನೆಯುವ ಸುದೀನವಾಗಿದೆ. ಇಂದು ವಿಶೇಷವಾಗಿ ಪ್ರತಿಜ್ಞೆ ಮಾಡುವ ಮೂಲಕ ಆಚರಣೆ ಮಾಡಿರುವುದು ಸಂವಿಧಾನ ರೂಪಿಸಿದ ಆಶಯವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯೆ ಕವಿತಾ ಬೋರಯ್ಯ, ಜೈ ತುನ್ ಬಿ, ರಮೇಶ್ ಗೌಡ, ಮಲ್ಲಿಕಾರ್ಜುನ, ವೈ.ಪ್ರಕಾಶ್, ಮುಖಂಡ ಕೃಷ್ಣಾ ಮೂರ್ತಿ, ಟಿ.ವಿಜಯ್ ಕುಮಾರ್, ಆಂಜನೇಯ (ಬಾಲು),ನನ್ನಿವಾಳ ನಾಗರಾಜ್, ಹೊನ್ನೂರಸ್ವಾಮಿ, ಚನ್ನಗಿರಾಮಯ್ಯ, ಮಾಜಿ ತಾಪಂ.ಸದಸ್ಯ ಗಿರಿಯಪ್ಪ, ಇತರರು ಪಾಲ್ಗೊಂಡಿದ್ದರು.