ಚಳ್ಳಕೆರೆ : ಕಾಯಕಯೋಗಿ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿಯವರ ಕಾರ್ತಿಕೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಸಣ್ಣ ರಥೋತ್ಸವ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಇನ್ನೂ ಹಟ್ಟಿ ತಿಪ್ಪೆಶನ ಭಕ್ತಗಣ ತಮ್ಮ ಭಕ್ತಿಯನ್ನು ಸರ್ಪಿಸುವ ಮೂಲಕ ಸಣ್ಣ ರಥೋತ್ಸವಕ್ಕೆ ಕೈ ಹಾಕುವ ಮೂಲಕ ಸ್ವಾಮಿಯ ಕೃಪೆಗೆ ನಮಿಸಿದರು.
ಇದೇ ಸಂಧರ್ಭದಲ್ಲಿ ಕಾಯಕಯೋಗಿಯ ದರ್ಶನ ಪಡೆದ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ರಥೋತ್ಸವಕ್ಕೆ ಕೈ ಹಾಕುವ ಮೂಲಕ ಸ್ವಾಮೀ ಕೃಪೆಗೆ ಪಾತ್ರರಾದರು.
ಇದೇ ಸಂಧರ್ಭದಲ್ಲಿ ನೂರಾರು ಭಕ್ತರು ನೆರೆದ್ದರು.