ಸಾರಿಗೆ ಸಚಿವರ ಮತಕ್ಷೇತ್ರಕ್ಕಿಲ್ಲ ರಸ್ತೆಗಳ ಭಾಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಗಂಭೀರ ಆರೋಪ ಮಾಡಿದ ನೀರಾವರಿ ಹೋರಾಟ ಸಮಿತಿ ಸದಸ್ಯರಾದ ಕೆ.ಜಿ.ಪ್ರಕಾಶ್
ನಾಯಕನಹಟ್ಟಿ : ಪಟ್ಟಣದ ಒಳಗಡೆ ದಾವಣಗೆರೆ ಕಡೆ ಮತ್ತು ಚಳ್ಳಕೆರೆ ಕಡೆ ಹಾದು ಹೋಗುವ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆ
5 ವರ್ಷ ಕಳೆದರೂ ದುರಸ್ತಿಯಾಗಿಲ್ಲದಿರುವುದು ದೌರ್ಭಾಗ್ಯವೇ ಸರಿ. ಈ ರಸ್ತೆಯನ್ನು ದುರಸ್ತಿ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಕುದಾಪುರದ ನೀರಾವರಿ ಹೋರಾಟ ಸಮಿತಿ ಸದಸ್ಯರಾದ ಕೆ.ಜಿ. ಪ್ರಕಾಶ್ ಅಧಿಕಾರಿಗಳ ಮತ್ತು ಕ್ಷೇತ್ರದ ಶಾಸಕರ ವಿರುದ್ದ ಕಿಡಿಕಾರಿದರು.
ಅವರು ಮಂಗಳವಾರ ಪಟ್ಟಣದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ನಿಂತು ರಸ್ತೆ ಪಕ್ಕ ಸುರಿದ ಮಣ್ಣಿನ ತ್ಯಾಜ್ಯಗಳ ರಾಶಿಗಳನ್ನು ತೋರಿಸುತ್ತಾ ಪತ್ರಿಕೆಯೊಂದಿಗೆ ಮಾತನಾಡಿದರು.
ಮಧ್ಯ ಕರ್ನಾಟಕದ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರಕ್ಕೆ ಪ್ರತಿದಿನವೂ ನೂರಾರು ಭಕ್ತರು ಬರುತ್ತಾರೆ. ಮೊಳಕಾಲ್ಮೂರು ಕ್ಷೇತ್ರದ ಶಾಸಕರು ಹಾಗೂ ಸಚಿವರಾಗಿರುವ ಬಿ. ಶ್ರೀರಾಮುಲು ರವರು ಈ ಭಾಗದಲ್ಲಿ ಪ್ರತಿ ಕಾರ್ಯಕ್ರಮಕ್ಕೆ ಬಂದು ಹೋಗುವ ಹೃದಯ ಭಾಗದಲ್ಲಿರುವ ರಸ್ತೆ ಕಳೆದ 5 ವರ್ಷ ಪೂರ್ಣಗೊಂಡರು ದುರಸ್ಥಿ ಮಾಡಿಸಲು ಮುಂದಾಗಿಲ್ಲ. ಸಚಿವ ಬಿ.ಶ್ರೀರಾಮುಲು ಹಿತ್ತ ಕಡೆ ಗಮನ ಹರಿಸುತ್ತಿಲ್ಲ .ಇವರಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಸ್ತೆ ದುರಸ್ತಿ ಪಡಿಸುವಂತ ಮತಿಯನ್ನ ಕೊಡಲಿ. ಈಗಾಗಲೇ ಡಿಸೆಂಬರ್ 1 ರಂದು ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ತೆಪೋತ್ಸವ ಜರಗಲಿದೆ.2023 ರ ಮಾರ್ಚ್ 10ರಂದು ಮಧ್ಯ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಜಾತ್ರಾ ಮಹೋತ್ಸವ ಜರುಗಲಿದ್ದು ,ಈ ರಸ್ತೆಯಲ್ಲಿ ಬರುವಂತ ಭಕ್ತಾಧಿಗಳಿಗೆ ಅನುಕೂಲವಾಗಲಿ. ಸಚಿವರು ಈ ರಸ್ತೆಯನ್ನ ಬೇಗ ದುರಸ್ಥಿ ಮಾಡಿಸಲಿ ಎಂದು ಕುದಾಪುರದ ನೀರಾವರಿ ಹೋರಾಟ ಸಮಿತಿ ಸದಸ್ಯರಾದ ಕೆ.ಜಿ.ಪ್ರಕಾಶ್ ಸಚಿವ ಶ್ರೀರಾಮುಲು ಅವರನ್ನು ಆಗ್ರಹಿಸಿದರು.