ನಾಯಕನಹಟ್ಟಿ:: ಈ ಕ್ಷೇತ್ರದ ಶಾಸಕರು ಹಾಗೂ ಸಚಿವ ಬಿ ಶ್ರೀ ರಾಮುಲು ರವರ ಆದೇಶದಂತೆ ಸರ್ಕಾರದಿಂದ ಬರುವ ಪರಿಹಾರದ ಹಣವನ್ನು ಕುಟುಂಬಸ್ಥರಿಗೆ ನೀಡಲಾಗುವುದು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.
ಅವರು ಹೋಬಳಿಯ ಎನ್ ಗೌರಿಪುರ ಗ್ರಾಮದ ಉಮಪತಿ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ
ಇತ್ತೀಚಿಗೆ ನವೆಂಬರ್ 20ರಂದು ಬಳ್ಳಾರಿಯಲ್ಲಿ ಎಸ್‌ಟಿ ವಿರಾಟ್ ಸಮಾವೇಶಕ್ಕೆ ಎನ್ ಗೌರಿಪುರ ಉಮಾಪತಿ ಸಮಾವೇಶಕ್ಕೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿ ಹಿನ್ನೆಲೆಯಲ್ಲಿ ಸಚಿವ ಬಿ ಶ್ರೀರಾಮುಲು ರವರ ಆದೇಶದಂತೆ ಮತ್ತು ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಂದು ಎನ್ ಗೌರಿಪುರ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಗಿದ್ದು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಚೇತನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಪುಷ್ಪಲತಾ ಗ್ರಾಮ ಸಹಾಯಕ ಕುದಾಪುರ ಓಬಣ್ಣ ಸೇರಿದಂತೆ ಹಟ್ಟಿಯ ಯಜಮಾನರು ಹಟ್ಟಿಯ ಯುವಕರು ಸೇರಿದಂತೆ ಉಪಸ್ಥಿತರಿದ್ದರು