ಚಳ್ಳಕೆರೆ : ಸಾಂಪ್ರದಾಯಿಕ ಬೆಳೆಗಳ ಜೋತಗೆ ಆರ್ಥಿಕ ಲಾಭ ಗಳಿಸುವ ಬೆಳೆಗಳನ್ನು ಬೆಳೆದು ರೈತರು ಮುಂದೆ ಬನ್ನಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕಿನ ಭರಮಸಾಗರ ಗ್ರಾಮದ ಹೊಸಮನೆ ಎಸ್ಟೇಟ್‌ನಲ್ಲಿ ನಡೆದ ಸಾಂಬಾರ್ ಬೆಳೆಗಾರರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಏಲಕ್ಕಿ ಮತ್ತು ಕಾಳು ಮೆಣಸು, ಬೆಳೆ ಗುಣಮಟ್ಟ ಸುಧಾರಣೆ ತರಬೇತಿ ಕಾರ್ಯಕ್ರಮ ಪಡೆದು ರೈತರು ಬಯಲು ಸೀಮೆಯಲ್ಲಿ ಇಂತಹ ಬೆಲೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬಹುದು, ಇಂತಹ ತರಬೇತಿಗಳು ನಮ್ಮ ಆರ್ಥಿಕತೆಗೆ ಹಿಂಬು ನೀಡುತ್ತಾವೆ ಎಂದರು.
ಇನ್ನೂ ತೋಟಗಾರಿಕೆ ಸಹಯಾಕ ನಿದೇರ್ಶಕ ವಿರುಪಾಕ್ಷಪ್ಪ ಮಾತನಾಡಿ, ಸಾಂಬಾರ್ ಮಂಡಳಿ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯ ಭಾರತ ಸರ್ಕಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕೊಪ್ಪ, ಇವರ ಸಂಯುಕ್ತ ಆಶ್ರಯದಲ್ಲಿ ಮತ್ತು ತೋಟಗಾರಿಕಾ ಇಲಾಖೆ ಚಳ್ಳಕೆರೆ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಪಂಚಾಯತ್ ಯೋಜನೆಯ ಪ್ರಚಾರ ಮತ್ತು ಸಾಹಿತ್ಯ ಕಾರ್ಯಕ್ರಮದಡಿ ವಿಚಾರ ಸಂಕೀರ್ಣದಲ್ಲಿ ರೈತರು ತಮ್ಮನ್ನು ತಾವು ತೋಡಿಗಿಸಿಕೊಳ್ಳುವ ಮೂಲಕ ಉತ್ತಮ ಬೆಳೆಗಳನ್ನು ಬೆಳೆಯಬಹುದು ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳಾದ ವಿರೂಪಾಕ್ಷಪ್ಪ ಹಾಗೂ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರ ನಾಯಕ, ನಗರಸಭೆ ಸದಸ್ಯರುಗಳಾದ ರಮೇಶ್‌ಗೌಡ, ವಿರುಪಾಕ್ಷಪ್ಪ, ಚಳ್ಳಕೆರಪ್ಪ, ವೀರಭದ್ರಯ್ಯ, ರಾಘವೇಂದ್ರ ಮುಖಂಡರುಗಳಾದ ಕೃಷ್ಣಮೂರ್ತಿ, ಪ್ರಹಲಾದ್, ನಾಗೇಂದ್ರಪ್ಪ ನವೀನ್‌ಕುಮಾರ್, ಚಂದ್ರಣ್ಣ ಮುಖಂಡರು ಕಾರ್ಯಕರ್ತರ ಮತ್ತು ತರಬೇತುದಾರರು ಫಲಾನುಭವಿಗಳು ಉಪಸ್ಥಿತರಿದ್ದರು