ರೈತರ ಆಕ್ಷೇಪಣೆ ಇದ್ದರೆ ಅರ್ಜಿ ಸಲ್ಲಿಸಿ : ಕೃಷಿ ನಿರ್ದೇಶಕ ಅಶೋಕ್ ಹೇಳಿಕೆ
ಚಳ್ಳಕೆರೆ : 2020-21ನೇ ಸಾಲಿನ ಮುಂಗಾರು ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಯಡಿಯಲ್ಲಿ ರೈತರ ಆಕ್ಷೇಪಣೆ ಇದ್ದರೆ ಕೃಷಿ ಇಲಾಕೆಗೆ ಸಂಪರ್ಕಿಸಿ ಎಂದು ಬೆಳೆವಿಮೆ ಆಕ್ಷೇಪಣೆ ಸಹಾಯಕ ಕೃಷಿ ನಿರ್ದೇಶಕ ಅಶೋಕ್ ಹೇಳಿದರು
ಕೃಷಿ ಇಲಾಕೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು ಅವರು ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶವನ್ನು ಬೆಳೆ ವಿಮೆಗೆ ನೊಂದಾಯಿಸಿದ ದಾಖಲೆಗಳಿಗೆ ಹೋಲಿಕೆ ಮಾಡಿದಾಗ ತಾಳೆ ಯಾಗದೆ ಇರುವ ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆಯಲ್ಲಿ ರೈತರ ಜಮೀನಿನಲ್ಲಿ ದಾಖಲಾದ ಚಾಯ ಚಿತ್ರದೊಂದಿಗೆ ಪರಿಶೀಲಿಸಿ ಅಂತಿಮವಾಗಿ ತಾಳೆ ಯಾಗದೇ ಇರುವ ಚಳ್ಳಕೆರೆ ತಾಲೂಕಿನ ಒಟ್ಟು 807 ಪ್ರಸ್ತಾವನೆಗಳು ತಿರಸ್ಕೃತಗೊಂಡಿದ್ದು ಸದರಿ ರೈತರ ಪಟ್ಟಿಯನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಕಟಿಸಲಾಗಿದೆ
ಈ ವಿಷಯದ ಬಗ್ಗೆ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಆಯಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ರೈತರಿಗೆ ನವಂಬರ್ 21ರಿಂದ ಡಿ.5ವರೆಗೆ ಅವಕಾಶ ನೀಡಿದೆ ರೈತರು ಅರ್ಜಿ ಸಲ್ಲಿಸದೇ ಇದ್ದಲ್ಲಿ ಎಲ್ಲಾ ಪ್ರಸ್ತಾವನೆಗಳು ತಿರಸ್ಕೃತ ಗೊಳ್ಳುತ್ತವೆ ವಿಮೆಗೆ ನೊಂದಾಯಿಸಿದ ಬೆಳೆಯ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಿದಲ್ಲಿ ಸದರಿ ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.