ಚಳ್ಳಕೆರೆ : ಸಮೃದ್ದಿ ಕರ್ನಾಟಕಕ್ಕೆ ಮುನ್ನುಡಿ ಬರೆಯಲಾಗಿದೆ, ನವ ಭಾರತ ಕಲ್ಪನೆ ಈಡೇರಿದೆ, ರಾಜ್ಯದ ಅತೀ ದೊಡ್ಡ ರಾಣಿಕೆರೆ ತುಂಬಿ ಕೋಡಿ ಬಿದ್ದಿರುವುದು ಸಮೃದ್ದಿಯ ಸಂಕೇತ ಎಂದು ಮುಖ್ಯಮಂತ್ರಿ ಬಸವರಾಜ್‌ಬೊಮ್ಮಾಯಿ ಹೇಳಿದ್ದಾರೆ.
ಅವರು ತಾಲೂಕಿನ ಮೀರಾಸಾಬಿಹಳ್ಳಿ ರಾಣಿಕೆರೆಗೆ ಬಾಗೀನ ಅರ್ಪಿಸಿ ನಂತರ ಮಾತನಾಡಿದ ಅವರು ಇಡೀ ರಾಜ್ಯದಲ್ಲಿ ಸಮೃದ್ದಿ ವಾತವರಣ ಹೊಂದಿದೆ, ನಮ್ಮ ಸುದೈವ ನಮ್ಮ ಬಿಜೆಪಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದಿದ್ದರಿAದ ಇಡೀ ರಾಜ್ಯ ಸಮೃದ್ದವಾಗಿದೆ, ರೈತರ ಮೊಗದಲ್ಲಿ ಮಂದಹಾಸ ನಗೆ ಇದೆ, ರಾಜ್ಯದ ಎರಡನೇ ಅತೀ ದೊಡ್ಡ ರಾಣಿಕೆರೆಗೆ ಬಾಗೀನ ಅರ್ಪಿಸಿರುವುದು ಸಂತಸ ತಂದಿದೆ ಎಂದರು.
ಇನ್ನೂ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಬಯಲು ಸೀಮೆಯಲ್ಲಿ ಹಸಿರುಕರಣ ಹೊಂದಿರುವ ಚಳ್ಳಕೆರೆ ಕ್ಷೇತ್ರದಲ್ಲಿ ಈಡೀ ತಾಲೂಕಿನಲ್ಲಿ ಸುಮಾರು ಕೆರೆಗಳು ಭರ್ತಿಯಾಗಿ ನೀರಾವರಿಗೆ ಹಸಿರು ನಿಶಾನೆ ತೋರಿದೆ, ರೈತರು ಕೂಡ ಸಂತಸದ ಕ್ಷಣಗಳಿಗೆ ಈ ಕೆರೆ ತುಂಬಿರುವುದು ಸಾಕ್ಷಿಕರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಚAದ್ರಪ್ಪ, ಶಾಸಕರಾದ ಟಿ.ರಘುಮೂರ್ತಿ, ಪೂರ್ಣಿಮಾ, ಜಿ.ಹೆಚ್.ತಿಪ್ಪಾರೆಡ್ಡಿ, ಶಿರಾ ಶಾಸಕ ರಾಜೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಕೆ.ಎಸ್.ನವೀನ್, ರವಿಕುಮಾರ್, ಜಿ.ಪಂ ಸಿಇಓ ಎಂ.ಎಸ್.ದಿವಾಕರ್, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ತಾಪಂ ಇಒ ಹೊನ್ನಯ್ಯ, ತಹಶೀಲ್ದಾರ್ ಎನ್.ರಘುಮೂರ್ತಿ,ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಉಪಸ್ಥಿತರಿದ್ದರು.
ಬಾಕ್ಸ್ ಮಾಡಿ :
ಬಾಗೀನ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿಗೆ ಮನವಿ ನೀಡಲು ಸ್ಥಳೀಯ ರೈತ ಸಂಘದ ಕೆ.ಪಿ.ಭೂತಯ್ಯ, ಚೇತನ್ ಕುಮಾರ್, ನೇತಾಜಿ ಪ್ರಸನ್ನ, ಪರೀದ್ ಖಾನ್, ತಿಪ್ಪೆಸ್ವಾಮಿ ಇನ್ನಿತರರು ನಗರದ ಪಾವಗಡ ರಸ್ತೆ ಮೇಲ್ಸುತುವೆ ನಿರ್ಮಾಣಕ್ಕೆ ಅನುದಾನ ಹೊದಗಿಸಬೇಕು ಶೀಘ್ರವೇ ಸಮಸ್ಯೆ ಪರಿಹಾರಿಸಬೇಕು ಹಾಗೂ ಬೆಳೆ ಪರಿಹಾರ, ಇನ್ ಪುಟ್ ಸಬ್ಸಿಡಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮನವಿ ನೀಡಿದರು.