ಜನಸಂಕಲ್ಪ ಯಾತ್ರೆಗೆ ಪ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಬಿಜೆಪಿ ನಾಯಕರಲ್ಲಿ ಭುಗೆಲೆದ್ದ ಒಳಜಗಳ
ಚಳ್ಳಕೆರೆ : ಜನಸಂಕಲ್ಪ ಯಾತ್ರೆಗೆ ಆಗಮಿಸುವ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಯಿಗೆ ನಗರದಲ್ಲಿ ಅದ್ದೂರಿ ಸ್ವಾಗತ ಕೋರಲು ಬ್ಯಾನರ್ ಕಟ್ಟುವ ವಿಚಾರದಲ್ಲಿ ಬಿಜೆಪಿ ನಾಯಕರಲ್ಲಿ ಒಳಜಗಳ ಭುಗೆಲೆದ್ದಿದೆ.
ತಮ್ಮ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ತಾ ಮುಂದು ನೀ ಮುಂದು ಎಂದು ನಗರದಲ್ಲಿ ಪ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಕ್ಸ್ಗಳನ್ನು ಕಟ್ಟಲು ಕಳೆದ ಮೂರು ದಿನಗಳಿಂದ ಕಾರ್ಯಕರ್ತರು ಹಾಗೂ ಬಿಜೆಪಿ ಸ್ಪರ್ಧಾ ಆಕಾಂಕ್ಷಿಗಳು, ರಸ್ತೆ ಬದಿಯಲ್ಲಿ ಹಾಗೂ ಡಿವೈಂಡರ್‌ಗಳಲ್ಲಿ ಅನಾದಿಕೃತ ಪ್ಲೆಕ್ಸ್ ಕಟ್ಟುವುದಕ್ಕೆ ಮುಂದಾಗಿದ್ದರು ಆದರೆ ಪಕ್ಷದ ಮುಖಂಡರು ನೀವು ವೈಯಕ್ತಿವಾಗಿ ನಿಮ್ಮ ಪ್ರತಿಷ್ಠೆ ತೋರುವುದು ಬೇಡ ಎಂಬ ಮಾಹಿತಿ ಹೊರ ಹಾಕಿದ ಹಿನ್ನಲೆಯಲ್ಲಿ ತಮ್ಮ ಪಕ್ಷದಲ್ಲಿ ಹಿರಿಸು ಮುನಿಸು ಹೊರ ಭುಗಿಲ್ಲೆದ್ದಿದೆ.
ಇನ್ನೂ ಕೇಸರಿ ನಗರ ಮಾಡಲು ಬಿಜೆಪಿ ಮುಖಂಡರು ಈಗಾಗಲೇ ನಗರದ ನೆಹರು ವೃತ್ತ, ಅಂಬೇಡ್ಕರ್ ವೃತ್ತ, ವಾಲ್ಮಿಕಿ ವೃತ್ತದಿಂದ ಬೆಂಗಳೂರು ರಸ್ತೆ, ಪಾವಗಡ ರಸ್ತೆ, ಚಿತ್ರದುರ್ಗ ರಸ್ತೆ ಉದ್ದಗಲಕ್ಕೂ ಬ್ಯಾನರ್ ಕಟ್ಟಿದ್ದಾರೆ. ಆದರೆ
ಕ್ಷೇತ್ರದ ಹೊರಗಿನವರು 2023ರ ಚುನಾವಣೆಗೆ ಬಿಜೆಪಿ ಪಕ್ಷದಿಂದ ಕಣಕ್ಕೆ ಹಿಳಿಯಲು ಈ ಸಿಎಂ ಬೇಟಿ, ಹಾಗೂ ಜನ ಸಂಕಲ್ಪ ಯಾತ್ರೆಯನ್ನು ವರದಾನವನ್ನಾಗಿಸಿಕೊಳ್ಳಲು ಹಾಗೂ ಪ್ರಚಾರ ಪಡೆಯಲು ಈ ವೇದಿಕೆ ಮುಗಿಬಿದ್ದಿದ್ದಾರೆ.
ಇನ್ನೂ ಬಿಜೆಪಿ ಮುಖಂಡರು ತಮ್ಮ ವರ್ಚಸ್ಸು ಎಲ್ಲಿ ಕಡಿಮೆಯಾಗುವುದೋ ಎಂಬ ಆತಂಕದಲ್ಲಿ ಆಕಾಂಕ್ಷಿಗಳು ವೈಯಕ್ತಿಕವಾಗಿ ಯಾವುದೇ ಬ್ಯಾನರ್ ಹಾಕದೇ, ಜಾಹಿರಾತು ನೀಡದೆ ಪಕ್ಷ ಹೇಳಿದಂತೆ ಕೆಲಸ ಮಾಡಿ ಎಂಬ ನಿದೇರ್ಶನ ನೀಡಿದ್ದರಿಂದ ನಾಳೆ ನಡೆಯುವ ಜನ ಸಂಕಲ್ಪ ಯಾತ್ರೆ ಗೊಂದಲದ ಗೂಡಾಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಹೊರಬಿದ್ದಿದೆ.