ಅಂತರಾಷ್ಟ್ರೀಯ ಸೈನ್ಸ್ ಒಲಂಪಿಯಾಡ್ 2021-22ರ ಪರೀಕ್ಷೆಯಲ್ಲಿ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳಿಂದ ಚಿನ್ನದ ಪದಕಗಳ ಬೇಟೆ.
ಚಳ್ಳಕೆರೆ: ನಗರದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು 2021-22ರ ಅಂತರಾಷ್ಟ್ರೀಯ ಸೈನ್ಸ್ ಒಲಂಪಿಯಾಡ್ ಪರೀಕ್ಷೆಯಲ್ಲಿ 42ಚಿನ್ನದ ಪದಕಗಳನ್ನು ಪಡೆಯುವುದರೊಂದಿಗೆ ಶಾಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿರುತ್ತಾರೆ.
ಸಾಮಾನ್ಯ ಜ್ಞಾನ ವಿಷಯದಲ್ಲಿ 5ಚಿನ್ನ, ಇಂಗ್ಲೀಷ್- 2ಚಿನ್ನ, ವಿಜ್ಞಾನ ವಿಷಯದಲ್ಲಿ -8ಚಿನ್ನ, ಗಣಿತ – 24 ಚಿನ್ನ, 1 ಬೆಳ್ಳಿ, 3 ಕಂಚು, ಸಮಾಜ ವಿಜ್ಞಾನ – 3ಚಿನ್ನ, 1ಬೆಳ್ಳಿ ಪದಕಗಳನ್ನು ಗಳಿಸಿರುತ್ತಾರೆ.
ಈ ಪರೀಕ್ಷೆಯ ಜೋನಲ್ ಹಂತದಲ್ಲಿ ವಿದ್ಯಾರ್ಥಿ ಗಳಾದ ಧ್ರುವಸಾಯಿ.ವಿ. ಎಸ್, ನೇಹಾ ಸಿ.ಎಸ್ ಮತ್ತು ನಯನ.ಜಿ.ಕೆ ಅತ್ಯುನ್ನತ ಶ್ರೇಣಿಯನ್ನು ಪಡೆದಿರುತ್ತಾರೆ.
ಪದಕಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಪ್ರಾಂಶುಪಾಲರಾದ ವಿಜಯ್ ಬಿ.ಎಸ್ ಅಭಿನಂದಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇಂತಹ ಪರೀಕ್ಷೆಗಳಲ್ಲಿ ಭಾಗವಹಿಸುವುದರೊಂದಿಗೆ ಹೆಚ್ಚಿನ ಜ್ಞಾನಾರ್ಜನೆಯನ್ನು ಪಡೆಯುವುದರೊಂದಿಗೆ, ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಈ ಸಾಧನೆಗೆ ಎಸ್. ಆರ್.ಎಸ್. ಸಂಸ್ಥೆಯ ಅಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ , ಕಾರ್ಯದರ್ಶಿಗಳಾದ ಸುಜಾತ ಲಿಂಗಾರೆಡ್ಡಿ, ಪರೀಕ್ಷೆಯ ಸಂಯೋಜಕರಾದ ಪ್ರಸನ್ನ ಕುಮಾರ್. ಜೆ. ಇ, ಹಾಗೂ ಶಿಕ್ಷಕ ವೃಂದದವರು ಶುಭ ಕೋರಿದ್ದಾರೆ.