ನ.22ರಂದು ಚಳ್ಳಕೆರೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಬೇಟಿಗೆ, ಅಧಿಕಾರಿಗಳಿಂದ ಸ್ಥಳ ಪರೀಶಿಲನೆ

ಚಳ್ಳಕೆರೆ : ನ.22ರಂದು ಚಳ್ಳಕೆರೆಗೆ ಆಗಮಿಸುವ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಗೆ ಸೂಕ್ತ ಬಂದ್ ಬಸ್ತ್ ಕಲ್ಪಿಸಲು ಅಧಿಕಾರಿಗಳ ತಂಡ ಸ್ಥಳ ಪರೀಶಿಲನೆ ನಡೆಸುತ್ತಿದೆ.
ಇನ್ನೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸ್ಥಳ ವೀಕ್ಷಣೆ ಮಾಡುತ್ತಿರುವ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಸೂಕ್ತ ವ್ಯವಸ್ಥೆ ಕಲ್ಪಿಸಲು ಈಗಾಗಲೇ ನ.22ರಂದು ಆಗಮಿಸುವ ಹೆಲಿಕಾಪ್ಟರ್ ನಿಲ್ದಾಣ, ಕಾರ್ಯಕ್ರಮ ನಿಗಧಿತ ಸ್ಥಳ, ಈಗೇ ಹಲವು ರಸ್ತೆ ಮಾರ್ಗಗಳನ್ನು ಸೂಕ್ಷö್ಮವಾಗಿ ಗಮನಿಸುವ ಮೂಲಕ ಸಿದ್ದತೆಗಳು ಭರದಿಂದ ಸಾಗುತ್ತಿವೆ,
ಇನ್ನೂ ತಹಶೀಲ್ದಾರ್ ಎನ್.ರಘುಮೂರ್ತಿ, ಸಣ್ಣ ನಿರಾವರಿ ಇಲಾಖೆ ಅಧಿಕಾರಿ ಅಣ್ಣಪ್ಪ, ಲೋಕಪಯೋಗಿ ಇಲಾಖೆ ಇಂಜಿನಿಯಾರ್ ಎಇಇ ವಿಜಯ್ ಬಾಸ್ಕರ್, ಒಳಗೊಂಡ ತಂಡ ಮುಖ್ಯ ಮಂತ್ರಿಗಳ ಆಗಮಿಸುವ ಸ್ಥಳವನ್ನು ಪರೀಶಿಲನೆ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಗೆ ನ.22ರಂದು ವಿವಿಧ ಕಾರ್ಯಕ್ರಮಗಳತ್ತ ಆಗಮಿಸುವ ಮುಖ್ಯಮಂತ್ರಿಗಳಿಗೆ ಸ್ವಾಗತ ಹಾಗೂ ಇಡೀ ಜಿಲ್ಲೆಯ ಉಸ್ತೂವಾರಿಯನ್ನು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ನೇತೃತ್ವದಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ, ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಯವರು ಬೇಟಿ ನೀಡುವ ಸ್ಥಳಗಳನ್ನು ಸೂಕ್ಷö್ಮವಾಗಿ ಪರೀಶೀಲನೆ ನಡೆಸಿದ್ದಾರೆ.
ಮೀರಸಾಬಿಹಳ್ಳಿ ಗ್ರಾಮದ ರಾಣಿಕೆರೆಗೆ ಬಾಗೀನ ಅರ್ಪಿಸಲು ಆಗಮಿಸುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ರವರು ನ.22ಮಧ್ಯಾಹ್ನ 2.30ಕ್ಕೆ ಚಳ್ಳಕೆರೆ ನಗರದ ಶ್ರೀ ಸಾಯಿ ಬಾಬ ಮಂದಿರದ ಹೆಲಿಪ್ಯಾಡ್ ಮೂಲಕ ರಾಣಿಕೆರೆಗೆ ಬಾಗಿನ ಅರ್ಪಣೆ ಮಾಡಿ ನಂತರ ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಆಯೋಜಿಸಿದ್ದ ಜನ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸುವರು, ನಂತರ 4ಗಂಟೆಗೆ ಹೆಲಿಪ್ಯಾಡ್ ಮೂಲಕ ನಿರ್ಗಮಿಸುವರು ಎನ್ನಲಾಗಿದೆ.
ಇನ್ನೂ ಮಾಧ್ಯಮದೊಟ್ಟಿಗೆ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ ನ.22ರಂದು ಚಳ್ಳಕೆರೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಮಧ್ಯಾಹ್ನ 2.15ಕ್ಕೆ ಶ್ರೀ ಸಾಯಿ ಬಾಬ ಮಂದಿರದ ಹೆಲಿಪ್ಯಾಡ್‌ನಿಂದ ಮೀರಾಸಬಿಹಳ್ಳಿ ರಾಣಿಕೆರೆಗೆ ಬಾಗಿನ ಅರ್ಪಣೆ ಮಾಡಿ ನಂತರ ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ನಡೆಯುವ ಜನ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸುವರು, ನಂತರ 4ಗಂಟೆಗೆ ಹೆಲಿಪ್ಯಾಡ್ ಮೂಲಕ ನಿರ್ಗಮಿಸುವರು ಎಂದು ತಿಳಿಸಿದ್ದಾರೆ.

About The Author

Namma Challakere Local News
error: Content is protected !!