ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಮಕ್ಕಳ ಜನ್ಮದಿನಾಚರಣೆಗೆ ಮಕ್ಕಳೆ ಗೆಸ್ಟ್
ಚಳ್ಳಕೆರೆ ನಗರದ ಮಹಾತ್ಮ ಗಾಂಧಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ನೆಹರುಜನ್ಮ ದಿನದ ಅಂಗವಾಗಿ ಮಕ್ಕಳು ಸಿಹಿ ತಿಂದು ಸಂಭ್ರಮಿಸಿದರು.
ನೆಹರು ಈಡೀ ಜೀವನದ ಉದ್ದಕ್ಕೂ ಅವರು ಹೋರಡಿದ ಅಪ್ರತಿಮ ದೇಶಪ್ರೇಮಿ, ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ ಎಂದು ಶಿಕ್ಷಕರಾದ ಮಂಜುನಾಥ್ ಹೇಳಿದ್ದಾರೆ.
ಅವರು ನಗರದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರದಮಲ್ಲಿ ಭಾಗವಹಿಸಿ ಮಾತನಾಡಿದರು.
ನಾವು ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಿ ಕೊಟ್ಟರೆ ಮುಂದೆ ಮಕ್ಕಳು ನಮ್ಮ ರಾಷ್ಟ್ರಕ್ಕೆ ಭವಿಷ್ಯದ ಭದ್ರ ಬುನಾದಿ ಅಗಲಿದ್ದಾರೆ ಹಾಗಾಗಿ ಇಂದಿನ ಮಕ್ಕಳನ್ನು ನಾವು ಹೇಗೆ ಬೆಳೆಸುತ್ತವೆ ಎಂಬುದರ ಮೇಲೆ ನಮ್ಮ ಇಡೀ ರಾಷ್ಟ್ರದ ಭವಿಷ್ಯ ನಿಂತಿದೆ ಎಂದು ತಿಳಿಸಿದ್ದಾರೆ.