ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ : ಟಿ ಲೀಲಾವತಿ ಹೇಳಿಕೆ
ಚಳ್ಳಕೆರೆ : ಸರಕಾರದ ಆಶಯದಂತೆ ಕಸದಿಂದ ರಸ ಮಾಡುವ ಉದ್ದೇಶದಿಂದ ಯೋಜನಾಧಿಕಾರಿಗಳ ನಿರ್ದೇಶನದಂತೆ ಕಾಯಕ ತಾನ ಎಂಬ ವಿನೂತ ಕಾರ್ಯಕ್ರಮದಡಿಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಕಾರ್ಮಿಕರ ಜೊತೆಗೂಡಿ ಕಸದಿಂದ ರಸ ಎಂಬ ಪರಿಕಲ್ಪನೆ ಯೊಂದಿಗೆ ಬಳಸಿ ಬೀಸಾಡಿದ ನೀರಿನ ಬಾಟಲ್‌ಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಮತ್ತೆ ಮರು ಬಳಕೆ ಮಾಡಿಕೊಳ್ಳುವ ಮೂಲಕ ಪರಿಸರ ಸ್ನೇಹಿ ಪರಿಸರ ನಿರ್ಮಿಸುವ ಮೂಲಕ ಪಣತೊಟ್ಟಿದ್ದೆವೆ ಎಂದು ಪಟ್ಟಣ ಪಂಚಾಯಿತಿ ಪೌರಾಯುಕ್ತೆ ಪಿ.ಲೀಲಾವತಿ ಹೇಳಿದ್ದಾರೆ
ಅವರು ನಾಯಕನಹಟ್ಟಿ ಪಟ್ಟಣ ಪಂಣಚಾತಿಯಲ್ಲಿ ಆಯೋಜಿಸಿದ್ದ ವಿನೂತನ ಕಾರ್ಯಕ್ರಮದಡಿಯಲ್ಲಿ ಕಸದಿಂದ ರಸ ಮಾಡುವ ಪರಿಕಲ್ಪನೆಗೆ ಪರಿಸರದಲ್ಲಿ ಬಳಸಿ ಬಿಸಾಡಿದ ತ್ಯಾಜ್ಯ ವಸ್ತುಗಳ ಮೂಲಕ ಅವುಗಳನ್ನು ಮರು ಬಳಕೆ ಮಾಡಿಕೊಳ್ಳುವ ಮೂಲಕ ಪರಿಸರ ಸ್ನೇಹಿ ಪರಿಸರ ಮಾಡಲು ಮುಂದಾಗಿದ್ದೆವೆ ಎಂದರು.
ಇನ್ನೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಕಾಂತ್ ಮಾತನಾಡಿ, ಇಂದಿನ ದಿನದಲ್ಲಿ ನಾವು ವಾಸಿಸುತ್ತಿರುವುದು ದುರಂತ, ಕೆಟ್ಟ ಗಾಳಿಯಲ್ಲಿ ನಿತ್ಯವೂ ಪರಿತಪ್ಪಿಸುವ ಅನಿವಾರ್ಯವಿದೆ, ಆದ್ದರಿಂದ ಉತ್ತಮ ಗಾಳಿ ಬೆಳಕು ಪಡೆಯಲು ಪರಿಸರವನ್ನು ನಾವು ಸ್ವಚ್ಚವಾಗಿಟ್ಟುಕೊಳ್ಳಬೇಕು, ತ್ಯಾಜ್ಯ ವಸ್ತುಗಳನ್ನು ಮರು ಬಳಕೆ ಮಾಡಿಕೊಳ್ಳುವುದರ ಮೂಲಕ ನಮ್ಮ ಪಟ್ಟಣ ಪಂಚಾಯಿತಿ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಟಿ ರುದ್ರಮುನಿ, ಸಮುದಾಯ ಸಂಘಟನಾ ಅಧಿಕಾರಿ ಪಿ.ಬಸಣ್ಣ, ಕಂದಾಯ ನಿರೀಕ್ಷಕರು ಶಿವಕುಮಾರ್ ಎಂ, ದ್ವಿತೀಯ ದರ್ಜೆ ಸಹಾಯಕರು ಟಿ ತಿಪ್ಪೇಸ್ವಾಮಿ ,ಎಂ ಎಸ್ ಸುರೇಶ್, ನಾಗರತ್ನಮ್ಮ, ಸಂದೀಪ್, ಎಚ್ ಎಮ್ ದಯಾನಂದ ಸ್ವಾಮಿ, ಅಭಿಷೇಕ್,ಜೆ ಗುಡದಯ್ಯ, ಮಧು, ಮಂಗಳ ಗೌರಮ್ಮ, ರತ್ನಮ್ಮ, ಲತಾ ಸೇರಿದಂತೆ ಪಟ್ಟಣ ಪಂಚಾಯತಿಯ ಸಮಸ್ತ ಪೌರಕಾರ್ಮಿಕರು ಉಪಸ್ಥಿತರಿದ್ದರು