ಕುದಾಪುರ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಗೌರಿಹಬ್ಬ

ಚಳ್ಳಕೆರೆ : ನಮ್ಮ ಪೂರ್ವಜರ ಕಾಲದಿಂದಲೂ ಪ್ರತಿ ವರ್ಷ ಗೌರಿ ಹಬ್ಬವನ್ನ ಆಚರಣೆ ಮಾಡುತ್ತಾ ಬಂದಿದ್ದೇವೆ, ಆದರಂತೆ ಈ ಬಾರಿಯೂ ವಿಶೇಷವಾಗಿ ಗೌರಿಹಬ್ಬವನ್ನು ಆಚರಿಸುವುದು ಸಂತಸ ತಂದಿದೆ ಎಂದು ಜಿ.ಪಾಪನಾಯಕ ಹೇಳಿದ್ದಾರೆ.

ತಾಲೂಕಿನ ಕುದಾಪುರ ಗ್ರಾಮದ ಬಯಲು ರಂಗ ಮಂದಿರದ ಆವರಣದಲ್ಲಿ ಶ್ರೀಗೌರಿದೇವಿಗೆ ವಿಶೇಷ ಪೂಜಾ ಕಾರ್ಯದಲ್ಲಿ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮ್ಮ ಪೂರ್ವಜರ ಕಾಲದಿಂದಲೂ ಕುದಾಪುರ ಗ್ರಾಮದ ಪ್ರತಿ ವರ್ಷವೂ ಸಾಂಪ್ರದಾಯದAತೆ ಗೌರಿ ಹಬ್ಬವನ್ನು ಗ್ರಾಮಸ್ಥರೆಲ್ಲರೂ ಸೇರಿ ಆಚರಿಸುತ್ತ ಬಂದಿದ್ದೇವೆ.
ನಮ್ಮ ಗ್ರಾಮದಿಂದ ವಿವಾಹವಾಗಿ ಬೇರೆ ಊರಿಗೆ ಹೋದಂತಹ ಹೆಣ್ಣು ಮಕ್ಕಳು ವರ್ಷಕ್ಕೊಮ್ಮೆ ನಮ್ಮ ಗ್ರಾಮಕ್ಕೆ ಬಂದು ಗೌರಿ ಹಬ್ಬದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಕುಟುಂಬಸ್ಥರ ಜೊತೆ ಕಷ್ಟ ಸುಖ ನೋವು ನಲಿವುಗಳನ್ನ ಹಂಚಿಕೊAಡು ಹೋಗುವ ಉದ್ದೇಶದಿಂದ ಈ ಗೌರಿ ಹಬ್ಬವನ್ನು ಆಚರಿಸುತ್ತೇವೆ ತಿಳಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಗ್ರಾಮದಲ್ಲಿ ಮುತ್ತುರಾಜ್ ಮೆಲೋಡಿಸ್ ವತಿಯಿಂದ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಇನ್ನೂ ಕೋಲಾಟ, ಭಜನೆ, ವಿವಿಧ ಕಲಾ ತಂಡಗಳಿAದ ಗೌರಿ ದೇವಿಯ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಮಾಡಲಾಗುವುದು.

ಗ್ರಾಮ ಪಂಚಾಯತಿ ಸದಸ್ಯ ಎಂ ಪಾಲಯ್ಯ, ಗೌಂಚಿಗಾರ್ ಜಿ ಬಿಬೋರಣ್ಣ, ಕೆಜಿ.ಪ್ರಕಾಶ್, ಶ್ರೀ ಭೈರವಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಈಶ್ವರ್, ಶಿಕ್ಷಕ ಎಂಬಿ.ಚAದ್ರಣ್ಣ ನಲಗೇತನಹಟ್ಟಿ ಗಾಯಕ ಕೆಟಿ.ಮುತ್ತುರಾಜ್, ನಾಯಕನಹಟ್ಟಿ ಪಾರಿಜಾತ ಸೇರಿದಂತೆ ಕುದಾಪುರ ಗ್ರಾಮದ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!