ದುರ್ಗಾವಾರ ಗ್ರಾಮದಲ್ಲಿ ಅದ್ದೂರಿ ವಾಲ್ಮೀಕಿ ಜಯಂತೋತ್ಸವ :
ಆದಿಕವಿ ವಾಲ್ಮೀಕಿ ಹಾದಿಯಲ್ಲಿ ಸಾಗೋಣ : ತಹಶಿಲ್ದಾರ್ ಎನ್. ರಘುಮೂರ್ತಿ ಕರೆ
ಚಳ್ಳಕೆರೆ : ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಅನನ್ಯವಾಗಿವೆ ಇವುಗಳನ್ನು ನಾವು ನೀವೆಲ್ಲರೂ ಕೂಡ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಮರಸ್ಯದ ಬದುಕಿಗೆ ಸಹಕಾರಿಯಾಗುತ್ತದೆ ಹೀಗಾಗಿ ಪ್ರತಿಯೊಬ್ಬರೂ ಕೂಡ ಆದಿಕವಿ ವಾಲ್ಮೀಕಿಗೆ ಪೂರ್ಣ ಪ್ರಮಾಣದ ನಮನಗಳನ್ನು ಇಂದು ಸಲ್ಲಿಸಬೇಕಾಗಿದೆ ಎಂದು ತಹಶಿಲ್ದಾರ್ ಎನ್.ರಘುಮೂರ್ತಿ ಹೇಳಿದರು
ಅವರು ತಾಲೂಕಿನ ದುಗ್ಗಾವರ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದಿಂದ ಆಯೋಜಿಸಿರುವಂತಹ ವಾಲ್ಮೀಕಿ ಜಯಂತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಮನುಷ್ಯನ ಬದುಕು ಅತ್ಯಲ್ಪವಾದರೂ ಕೂಡ ಬದುಕಿನ ಮೌಲ್ಯಗಳು ಶ್ರೀಮಂತವಾಗಿರಬೇಕು ಆಗ ಮಾತ್ರ ಅಮರರಾಗಿರಲು ಸಾಧ್ಯ,
ವಾಲ್ಮೀಕಿ ಮಹರ್ಷಿಗಳನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ ಈಡೀ ವಿಶ್ವಕ್ಕೆ ಭಗವದ್ಗೀತೆಯ ಪ್ರತಿರೂಪವಾದಂತ ರಾಮಾಯಣ ಮಹಾಕಾವ್ಯವನ್ನು ಪರಿಚಯಿಸುವುದರ ಮುಖಾಂತರ
ಸಮಾಜದಲ್ಲಿರುವ ದ್ವೇಷ ಅಸೂಯೆ ಮತ್ತು ಮತ್ಸರದಂತಹ ದುರ್ಗುಣಗಳನ್ನು ಹೋಗಲಾಡಿಸಿ ಭಾತೃತ್ವ ಸಮಾನತೆ ಹೌದಾರ್ಯತೆ ಮತ್ತು ಪ್ರೀತಿ ವಾತ್ಸಲ್ಯ ಗಳ ಬೆಸುಗೆಯನ್ನು ಸಮಾಜದಲ್ಲಿರುವಂತ ಜನರಿಗೆ ಈ ರಾಮಾಯಣ ಮಹಾಕಾವ್ಯವು ಬೆಸದಿದೆ ಹೀಗಾಗಿ ಜಗತ್ತಿನಾದ್ಯಂತ ರಾಮಾಯಣ ಮಹಾಕಾವ್ಯವನ್ನು ಪಶ್ಚಿಮಾತ್ಯರು ಸೇರಿದಂತೆ ಪ್ರೀತಿಸುತ್ತಾರೆ ಮತ್ತು ತಮ್ಮ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಣೆಗೊಳಿಸಿದೆ,
ಇದಕ್ಕೆ ಉದಾಹರಣೆ ಸಮಾಜದ ದರ್ಶನಿಕರಾದಂತ ಬಸವಣ್ಣ, ಬುದ್ಧ ಹಾಗೂ ಅಂಬೇಡ್ಕರ್ ಒಳಗೊಂಡಂತೆ ಪ್ರಸ್ತುತ ಪುನೀತ್ ರಾಜಕುಮಾರ್ ಕೂಡ ಬಡತನ ಬದುಕು ಹೋರಾಟ ಇವುಗಳ ಹೊರತಾಗಿಯೂ ಕೂಡ ಮಾನವೀಯ ಮೌಲ್ಯಗಳನ್ನು ಸಮಾಜದ ಪ್ರತಿಯೊಬ್ಬರು ಕೂಡ ಉಳಿಸಿಕೊಂಡು ಬದುಕಬೇಕೆಂದು ಸಲಹೆ ನೀಡಿದರು
ಚಳ್ಳಕೆರೆ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರಪ್ಪ, ಗ್ರಾಮ ಪಂಚಾಯತಿ ಸದಸ್ಯರು ಮತ್ತು ಯುವಕರು ಉಪಸ್ಥಿತರಿದ್ದರು