ಅಲೆಮಾರಿ ಜನಾಂಗದ ಸಮಸ್ಯೆ ಆಲಿಸಿದ : ಜಿಲ್ಲಾ ನ್ಯಾಯಾಧೀಶರಾದ ಗಿರೀಶ್
ಚಳ್ಳಕೆರೆ : ಸಮಾಜದಲ್ಲಿ ಇರುವಂತಹ ಪ್ರತಿಯೊಬ್ಬ ಶೋಷಿತ ವರ್ಗದವರು ಸರ್ಕಾರದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕೆಂದು ಜಿಲ್ಲಾ ನ್ಯಾಯಾಧೀಶರಾದ ಗಿರೀಶ್ ಹೇಳಿದರು
ಅವರು ನಾಯಕನಹಟ್ಟಿ ಪಟ್ಟಣದ ದೊಂಬಿದಾಸ ಮತ್ತು ಮುಂಡಾಳ ವರ್ಗದ ಅಲೆಮಾರಿ ಜನಾಂಗದವರ ಗುಡಿಸಲುಗಳಲ್ಲಿ ವಾಸವಿರುವಂತಹ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು,
ಮನುಷ್ಯನಿಗೆ ಅಗತ್ಯವಾಗಿರುವಂತಹ ಶೌಚಾಲಯ ವಿದ್ಯುತ್ ಆಹಾರ ಪಡಿತರ ಶುದ್ಧವಾದ ಕುಡಿಯುವ ನೀರು ಒದಗಿಸುವ ಜವಾಬ್ದಾರಿ ಸರ್ಕಾರದ್ದಾಗಿದ್ದು ಸರ್ಕಾರ ನೀಡುವಂತಹ ಈ ಸೌಲಭ್ಯವು ಪ್ರತಿಯೊಬ್ಬರ ಹಕ್ಕಾಗಿರುತ್ತದೆ ಕಾಲೋನಿಗಳಲ್ಲಿ ಜನರಿಗೆ ವಿದ್ಯುತ್ತು ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಇದೆ ಎರಡು ದಿನಗಳೊಳಗಾಗಿ ಪರಿಹಾರ ನೀಡಬೇಕು ಎಂದು ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಲೀಲಾವತಿಗೆ ಸೂಚಿಸಿದರು
ಇನ್ನೂ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ಪಟ್ಟಣ ಪಂಚಾಯಿತಿಯ ಹಲವು ಜನರಿಗೆ ಸರ್ಕಾರಿ ಸರ್ವೆ ನಂಬರ್ಗಳಲ್ಲಿ ಆಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡಿದ್ದು ಇವರುಗಳು 94ಸಿ ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ, ಈ ಸರ್ವೇ ನಂಬರ್ಗಳಲ್ಲಿ ಕ್ರೀಡಾಂಗಣಕ್ಕೆ ಜಮೀನು ಮೀಸಲಾಗಿದೆ ಕ್ರೀಡಾಂಗಣಕ್ಕೆ ಮೀಸಲಾದ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ ಈ ಮಂಜೂರಾತಿಯನ್ನು ಮೊದಲು ವಜಾಮಾಡಿ ತದನಂತರ ಇಲ್ಲಿಯ ಜನರಿಗೆ ಹಕ್ಕು ಪತ್ರ ವಿತರಿಸಬೇಕಾಗಿದೆ
ಉಳಿದಂತೆ ಸಾಮಾಜಿಕ ಭದ್ರತೆಯ ಎಲ್ಲಾ ಸೌಲಭ್ಯ ಒದಗಿಸಲಾಗಿದೆ ಆಹಾರ ಪಡಿತರ ಚೀಟಿಗೆ ಸಂಬAಧಪಟ್ಟAತೆ ಶೇಕಡ 80ರಷ್ಟನ್ನು ನೀಡಿದ್ದು ಉಳಿದಂತ 20ಪರ್ಸೆಂಟ್ ಜನರಿಗೆ ದಾಖಲಾತಿಯನ್ನು ಪಡೆದು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಂತೆ ರಾಜಸ್ವ ನಿರೀಕ್ಷಕರದ ಚೇತನ್ಕುಮಾರ್ ಗ್ರಾಮ ಲೆಕ್ಕಾಧಿಕಾರಿ ಉಮಾ ಇವರಿಗೆ ಸೂಚಿಸಿದರು
ಕುಡಿಯುವ ನೀರು ಶೌಚಾಲಯ ವಿದ್ಯುತ್ ಸಮಸ್ಯೆಗಳ ಬಗ್ಗೆ ಮರಿಪಾಲಯ್ಯನವರು ವಿವರಿಸಿದರು
ಪಟ್ಟಣ ಪಂಚಾಯತಿ ಸದಸ್ಯರಾದ ಮಹಾಂತೇಶ್, ಮುದಿಯಪ್ಪ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಲೀಲಾವತಿ, ಗ್ರಾಮ ಲೆಕ್ಕಾಧಿಕಾರಿ ಉಮಾ ಮುಂತಾದವರು ಉಪಸ್ಥಿತರಿದ್ದರು