ರಸ್ತೆ ಮಧ್ಯೆ ನಿಂತಿರುವ ಮಳೆ ನೀರಿಗೆ ಪರಿಹಾರ ಯಾವಾಗ..?
ಚಳ್ಳಕೆರೆ ಇಓ ಸಮಸ್ಯೆ ತಿಳಿಗೊಳಿಸುವರಾ…!
ಚಳ್ಳಕೆರೆ : ಗ್ರಾಮದಲ್ಲಿ ಹಲವು ದಿನಗಳಿಂದ ಮಕ್ಕಳು ಶಾಲೆಗೆ ಹೊಗಲು ಹರಸಾಹಸ ಪಡುತ್ತಿದ್ದಾರೆ ಇನ್ನೂ ಗ್ರಾಮದ ಪ್ರಮುಖ ರಸ್ತೆಯಲ್ಲಿ ಕಳೆದ ಮೂರು ತಿಂಗಳಿAದ ಮಲೀನವಾದ ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯಲ್ಲಿ ಗ್ರಾಮದ ಜನತೆ ಕಾಲ ಕಳೆಯುತ್ತಿದ್ದಾರೆ.
ಹೌದು ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ವೃದ್ದರು ಈ ರಸ್ತೆಗೆ ಬಂದರೆ ಶಾಪ ಹಾಕುತ್ತಿದ್ದಾರೆ,
ಇನ್ನೂ ನಗರಕ್ಕೆ ದಾವಿಸುವ ಪ್ರಮುಖವಾದ ರಸ್ತೆ ಇದಾಗಿದೆ ಆದರೆ ಇಲ್ಲಿ ಕಳೆದ ಮೂರು ತಿಂಗಳಿAದ ಈ ರಸ್ತೆ ಮೇಲೆ ನೀರು ನಿಂತಿವೆ ಆದರೆ ಇಲ್ಲಿ ಯಾವೋಬ್ಬ ಅಧಿಕಾರಿಗಳು ಗಮನಹರಿಸದೆ ಮೌನ ವಹಿಸಿದ್ದಾರೆ ಇನ್ನೂ ಪಿಡಿಓ ಉಡಾಫೆ ಉತ್ತರ ಕೊಡುತ್ತಾ ಸಾರ್ವಜನಿಕರ ಆಕ್ರೋಶಕ್ಕೆ ಕಾರಣಗಿದ್ದಾರೆ
ಇನ್ನೂ ಇದರ ಬಗ್ಗೆ ಗ್ರಾಮದ ಯುವಕರಾದ ರಾಜು, ಸುಮಂತ್, ಚಂದ್ರಶೇಖರ್, ಅಜಯ್, ಬಾಲಾಜಿ ಸಮಸ್ಯೆಗಳ ಬಗ್ಗೆ ದೂರಿದ್ದಾರೆ,.
ಇನ್ನೂ ಇಂತಹ ಗಂಭೀರವಾದ ಸಮಸ್ಯೆ ಬಗ್ಗೆ ಕುದ್ದಾಂಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಬೇಟಿ ನೀಡಿ ಸಮಸ್ಯೆಗೆ ಪರಿಹಾರ ನೀಡುವರೋ ಕಾದು ನೋಡಬೇಕಿದೆ