ಅಕ್ರಮ ಮಣ್ಣು ಸಾಗಟಕ್ಕೆ ತಡೆಗೆ : ಎಡಿಸಿ,ಗೆ ರೈತ ಸಂಘದಿAದ ಮನವಿ
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬಂಗಾರದೇವರಹಟ್ಟಿ ಗೆ ಸೇರಿದ ರಿ ಸ ನಂ 75 ಮತ್ತು 76 ರ ಜಮೀನಿನಲ್ಲಿ ಪಿಎನ್‌ಸಿ ಕಂಪೆನಿಯವರು ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಬಗ್ಗೆ ವಿರೋಧಿಸಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ರೆಡ್ಡಿಹಳ್ಳಿ ವೀರಣ್ಣ ಹಾಗೂ ಚಳ್ಳಕೆರೆ ತಾಲ್ಲೂಕು ರೈತ ಮುಖಂಡರು ಹಾಗೂ ಬಂಗಾರ ದೇವರಹಟ್ಟಿ ಗ್ರಾಮ ರೈತರು
ಚಿತ್ರದುರ್ಗ ಜಿಲ್ಲಾ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳಿಗೆ ಅಕ್ರಮದ ಮನವಿ ಪತ್ರವನ್ನು ನೀಡಲಾಯಿತು
ಈ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಶ್ರೀಕಂಠಮೂರ್ತಿ ಜಿಲ್ಲಾ ಉಪಾಧ್ಯಕ್ಷರಾದ ಹಿರೇಹಳ್ಳಿ ಎರ್ರಿಸ್ವಾಮಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶಶಿಕುಮಾರ್ ಬುಡ್ನಹಟ್ಟಿ ತಿಪ್ಪೇಸ್ವಾಮಿ ದೇವರಹಳ್ಳಿ ರಾಜಣ್ಣ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು