ಸಾಯಿಚೇತನ ವಿದ್ಯಾಸಂಸ್ಥೆಯಿAದ : ಸಾಹಿತಿ ಕರ‍್ಲಕುಂಟೆ ತಿಪ್ಪೇಸ್ವಾಮಿಗೆ ಅಭಿನಂದನೆ

ಚಳ್ಳಕೆರೆ : ಗಡಿ ಭಾಗದ ಸಾಹಿತಿ ಹಾಗೂ ಕನ್ನಡಪರ ಚಿಂತಕ ಕರ‍್ಲಕುಂಟೆ ತಿಪ್ಪೆಸ್ವಾಮಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೊರಕಿರುವುದು ಸಂತಸ ತಂದಿದೆ ಎಂದು ಸಾಯಿಚೇತನ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ಶ್ರೀನಿವಾಸಚಾರ್ ಅಭಿಪ್ರಾಯಪಟ್ಟರು.
ಅವರು ನಗರದ ಮಹದೇವ ವಿಶ್ವಕರ್ಮ ವಿದ್ಯಾಸಂಸ್ಥೆಯಲ್ಲಿ ಗುರುವಾರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕವಿ ಕರ‍್ಲಕುಂಟೆ ತಿಪ್ಪೇಸ್ವಾಮಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಡಿಭಾಗದಲ್ಲಿ ಕನ್ನಡ ಭಾಷಾ ಜಾಗೃತಿ ಬೆಳೆಯಬೇಕಿದೆ. ಕರ‍್ಲಕುಂಟೆ ಕುಗ್ರಾಮದಲ್ಲಿ ಕನ್ನಡ ಮನೆ ನಿರ್ಮಾಣ ಮಾಡಿಕೊಂಡಿರುವ ತಿಪ್ಪೇಸ್ವಾಮಿ ಅವರು, ನಾಡಿನ ನೆಲ, ಜಲ, ಭಾಷಾ ವಿಷಯಗಳಿಗೆ ಸಮಾಜಮುಖಿಯಾಗಿ ಸೇವೆ ಮಾಡುವ ಪ್ರತಿಭಾವಂತರು. ಸಾಹಿತ್ಯ ವಲಯಕ್ಕೂ 4 ಕವನ ಸಂಕಲನಗಳನ್ನು ಕೊಡುಗೆ ನೀಡುವ ಮೂಲಕ ಇತರೆ ಸಾಹಿತ್ಯ ಪ್ರತಿಭಾವಂತರನ್ನು ಸಮಾಜಕ್ಕೆ ಪರಿಚಯಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಇನ್ನೂ ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ, ಕುಗ್ರಾಮದಲ್ಲಿ ಕನ್ನಡದ ಮನೆ ಮಾಡುವ ಮೂಲಕ ಗಡಿ ನಾಡಿನಲ್ಲಿ ಕನ್ನಡ ಉಳಿವಿಗೆ ಪಣತೊಟ್ಟವರು ಇಂದು ಸ್ಥಳೀಯ ಪ್ರತಿಭಾವಂತರನ್ನು ಗುರುತಿಸುವ ಕೆಲಸ ಸಾಮಾಜಿಕವಾಗಿ ನಡೆಯಬೇಕಿದೆ ಅದರಂತೆ ಪ್ರಶಸ್ತಿ ಸಿಕ್ಕಿರುವುದು ಸಂಸತಸ ತಂದಿದೆ ಎಂದರು.
ವಿದ್ಯಾಸAಸ್ಥೆ ಅಧ್ಯಕ್ಷ ಆರ್. ಶ್ರೀನಿವಾಸಚಾರ್, ಕಾರ್ಯದರ್ಶಿ ಎಂ. ಸರಸ್ವತಮ್ಮ, ಪ್ರಾಚಾರ್ಯ ತಿಪ್ಪೇಸ್ವಾಮಿ, ಸಹಶಿಕ್ಷಕರಾದ ಎಸ್. ರಂಜಿತ್‌ಕುಮಾರ್, ಜಿ.ಟಿ. ನೇತ್ರಾವತಿ, ಎನ್. ನಿರ್ಮಲಾ, ಜಿ.ಎಸ್. ಅನೂಷ, ನಾಸಿರುದ್ದಿನ್, ಬಷೀರ್ ಅಹಮ್ಮದ್, ನಾಗೇಶ್, ಮುಜೀಬುಲ್ಲಾ ಮತ್ತಿತರರು ಇದ್ದರು.
ಪೋಟೋ: ಚಳ್ಳಕೆರೆ ನಗರದ ಮಹದೇವ ವಿಶ್ವಕರ್ಮ ವಿದ್ಯಾಸಂಸ್ಥೆಯಲ್ಲಿ ಗುರುವಾರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ‍್ಲಕುಂಟೆ ತಿಪ್ಪೇಸ್ವಾಮಿ ಅವರನ್ನು ಅಭಿನಂದಿಸಲಾಯಿತು.

About The Author

Namma Challakere Local News
error: Content is protected !!