ದುರ್ಬಲರ ಏಳಿಗೆಗೆ ಇಂದಿರಾಗಾAಧಿ ಕೊಡುಗೆ ಅಪಾರ : ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

ಹೊಳಲ್ಕೆರೆ : ಬ್ಯಾಂಕುಗಳ ರಾಷ್ಟಿçÃಕರಣ ಮಾಡಿ ಬಡವರಿಗೆ ಆರ್ಥಿಕ ಸ್ವಾತಂತ್ರö್ಯ ಕೊಡಿಸಿದ ಕೀರ್ತಿ ದೇಶದ ಮಾಜಿ ಪ್ರಧಾನಿ ಇಂದಿರಾಗಾAಧಿ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದ ಮಿನಿ ಸಭಾಂಗಣದಲ್ಲಿ ಬ್ಲಾಕ್
ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾಗಾAಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಉಕ್ಕಿನ ಮಹಿಳೆ ಇಂದಿರಾಗಾAಧಿ ರಾಷ್ಟç ನಿರ್ಮಾಣಕ್ಕೆ ನೀಡಿದ ಕೊಡುಗೆ ಮತ್ತು ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ಅವರು ಮಾಡಿದ ತ್ಯಾಗವನ್ನು ಇಡೀ ಭಾರತ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಬಡವರ ಪರ ಹೆಚ್ಚು ಕಾಳಜಿ ಹೊಂದಿದ್ದ ಅವರು, ಬ್ಯಾಂಕುಗಳ ರಾಷ್ಟಿçÃಕರಣ ಮೂಲಕ ಬಡವರೂ ಸಹ ಆರ್ಥಿಕ ಸ್ವಾತಂತ್ರ÷್ಯ ಪಡೆದುಕೊಳ್ಳಲು ಕಾರಣಕರ್ತರಾದದರು ಎಂದು ಸ್ಮರಿಸಿದರು.

ಸಾವಿರಾರು ಎಕರೆ ಭೂ ಪ್ರದೇಶವನ್ನು ಹೊಂದಿದ್ದ ಭೂ ಮಾಲೀಕರಿಂದ ಅವರಿಗೆ ಎಷ್ಟು ಅಗತ್ಯ ಭೂಮಿ ಬೇಕಿತ್ತೋ ಅದನ್ನು ಅವರಿಗೆ ಬಿಟ್ಟುಕೊಟ್ಟು ಉಳಿದ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಂಡು ಉಳುವವನೇ ಭೂಮಿ ಒಡೆಯ ಎಂಬ ವಿನೂತನ ಕಾಯ್ದೆ ಜಾರಿಗೊಳಿಸಿ ನಿರ್ಗತಿಕ
ಬಡವರಿಗೆ ಭೂಮಿ ಸಿಗುವಂತೆ ಮಾಡಿ, ಗರೀಬಿ ಹಠಾವೋ ಹಾಗೂ 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸುವುದರ ಮೂಲಕ ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸಿ ದೇಶದ ಜನತೆಯ ಆಕಾಂಕ್ಷೆಗಳನ್ನು ಈಡೇರಿಸುವ ಧೈರ್ಯ ಮತ್ತು ಬದ್ಧತೆಯನ್ನು ತೋರಿದ್ದಾರೆ ಎಂದು ಹೇಳಿದರು.

ಇಂದಿರಾಗಾAಧಿ ಅವರು ಪ್ರಧಾನಿ ಆಗಿದ್ದ ಸಮಯದಲ್ಲಿ ಸಮಾನತೆ, ಸಾಮಾಜಿಕ ನ್ಯಾಯದ ಪ್ರತಿಷ್ಠಾಪನೆಗೆ ಶ್ರಮಿಸಿ ದೇಶದ ಏಕತೆ ಮತ್ತು ಅಖಂಡತೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದರು. ಅವರ
ಬದುಕು, ಸಾಧನೆ ಮತ್ತು ತ್ಯಾಗ, ಸಶಕ್ತ ಸಮೃದ್ಧ, ಸ್ವಾವಲಂಬಿ, ಸ್ವಾಭಿಮಾನಿ ಭಾರತದ ರೂವಾರಿಯಾಗಿದ್ದಾರೆ. ಅವರ ಸಾಧನೆ ಮತ್ತು ತ್ಯಾಗ ನಮಗೆಲ್ಲ ಸ್ಪೂರ್ತಿಯಾಗಿದೆ. ಇಂದಿನ ಯುವ ರಾಜಕಾರಣಿಗಳು ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಭಾರತವು ಜಾತ್ಯಾತೀತ, ಸರ್ವಧರ್ಮಿಯರ ರಾಷ್ಟçವಾಗಿದೆ. ಇಲ್ಲಿ ಎಲ್ಲರೂ ಸಹೋದರರಂತೆ ನಡೆದುಕೊಳ್ಳಬೇಕು. ಆದರೆ, ಇಂದಿನ ಬಿಜೆಪಿ ಪಕ್ಷವು ಚುನಾವಣೆಯ ಲಾಭಕ್ಕಾಗಿ ಸಮಾಜವನ್ನು ಧರ್ಮದ ಹೆಸರಿನಲ್ಲಿ ಒಡೆಯುವ ಕೆಲಸ ಮಾಡುತ್ತಿದ್ದಾರೆ. ದೇಶವು ನೆಹರೂ ಕುಟುಂಬದಿAದ ಸಂಪದ್ಭರಿತವಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸಂಪದ್ಭರಿತ ದೇಶವನ್ನೆಲ್ಲ ಬರಿದಾಗುವಂತೆ ಮಾಡುತ್ತಿದ್ದಾರೆ. ಎಲ್ಲ ಜಾತಿ, ಧರ್ಮದ ಬಡವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಉಸ್ತುವಾರಿ ದೊಡ್ಡರಂಗಪ್ಪ, ಕೆಪಿಸಿಸಿ ಸಂಯೋಜಕ ಜಯಣ್ಣ, ಟಿ.ಲೋಕೇಶ್‌ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಎಚ್.ಟಿ.ಹನುಮಂತಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್, ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ, ನಗರ ಘಟಕದ ಅಧ್ಯಕ್ಷ ಮಜರುಲ್ಲಾಖಾನ್, ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾ, ಯೂತ್ ಕಾಂಗ್ರೆಸ್
ಅಧ್ಯಕ್ಷ ರಂಗಸ್ವಾಮಿ, ಷರೀಫ್, ಅಲ್ಲಿಮುಲ್ಲಾ, ಸೈಯದ್ ಸಜೀಲ್, ಮನ್ಸೂರ್ ಉಪಸ್ಥಿತರಿದ್ದರು.

ಪೋಟೊ ಕ್ಯಾಪ್ಷನ್- ಹೊಳಲ್ಕೆರೆ ಪಟ್ಟಣದ ವಾಲ್ಮೀಕಿ ಸಮುದಾಯ ಭವನದ ಮಿನಿ ಸಭಾಂಗಣದಲ್ಲಿ ಇಂದಿರಾಗಾAಧಿ ಪುಣ್ಯಸ್ಮರಣೆಯಲ್ಲಿ ಮಾಜಿ ಸಚಿವ ಎಚ್. ಆಂಜನೇಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

Namma Challakere Local News
error: Content is protected !!