ಗೌಡಗೆರೆ ಗ್ರಾಪಂ.67ನೇ ಕನ್ನಡ ರಾಜ್ಯೋತ್ಸವ ಸಂಭ್ರಮ
ಗ್ರಾಪಂ. ಅಧ್ಯಕ್ಷ ಜಿಓ.ಓಬಳೇಶ್ ಹೇಳಿಕೆ
ಚಳ್ಳಕೆರೆ : 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ತಡಗರದಿಂದ ಆಚರಿಸಲಾಗುತ್ತದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಜಿಓ ಓಬಳೇಶ್ ಹೇಳಿದ್ದಾರೆ.
ತಾಲೂಕಿನ ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ 67ನೇ ಕನ್ನಡ ರಾಜ್ಯೋತ್ಸವ ತಾಯಿ ಭುವನೇಶ್ವರಿಗೆ ಭಕ್ತಿಪೂರ್ವಕವಾದ ಪೂಜೆ ಸಲ್ಲಿಸಿ ಮಾತನಾಡಿದ್ದಾರೆ.
ಕಳೆದೆರಡು ವರ್ಷದಿಂದ ಕೋವಿಡ್ ಕಾರಣದಿಂದಾಗಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಆಗಲಿಲ್ಲ ಈ ಬಾರಿ ಅವಕಾಶ ಸಿಕ್ಕಿರುವುದರಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ವೇಳೆ ಮಾಜಿ ಅಧ್ಯಕ್ಷ ಟಿ.ರಂಗಪ್ಪ 67ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಹೇಳಿ ನಂತರ ಮಾತನಾಡಿದರೆ ರಾಜ್ಯದಾದ್ಯಂತ 67ನೇ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿAದ ಆಚರಣೆ ಮಾಡಲಾಗುತ್ತದೆ ಪ್ರತಿ ಕನ್ನಡಿಗನ ಕರುನಾಡಿನ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ ಪ್ರತಿಯೊಬ್ಬರೂ ಕನ್ನಡವನ್ನ ಬೆಳೆಸಲು ಉಳಿಸಲು ಒಂದಾಗಬೇಕು ಎಂದು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಟಿ ರಂಗಪ್ಪ ತಿಳಿಸಿದ್ದಾರೆ.
ಇನ್ನೂ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಿ ಸ್ವಚ್ಛತೆಯನ್ನ ಕಾಪಾಡುವಲ್ಲಿ ಗ್ರಾಮಸ್ಥರು ಮುಂದಾಗಬೇಕು ಎಂದು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರೇವಕ್ಕ, ಸದಸ್ಯರಾದ ಎಸ್ ವೆಂಕಟೇಶ್( ದಳಪತಿ) ಶಾಂತಮ್ಮ, ಅನ್ನಪೂರ್ಣೇಶ್ವರಿ, ತಿಪ್ಪೇಶ್ ಆರ್ ಗಿಣಿಯರ್, ಮಂಜಕ್ಕ, ಬಿ ಮಂಜಮ್ಮ( ಡಿಜಿ), ನಾಗಣ್ಣ, ಬಿ ಸರೋಜಮ್ಮ, ಸಣ್ಣಪ್ಪ, ಎಂ ಹೆಚ್ ಲಕ್ಷ್ಮಣ್, ಕೆಂಗರುದ್ರಪ್ಪ, ರಾಧಮ್ಮ, ಕೆ ಎಚ್ ಮಂಜುಳಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇನಾಯತ್ ಭಾಷಾ, ಪಂಚಾತಿ ಸಿಬ್ಬಂದಿಗಳಾದ ಗುರುಸ್ವಾಮಿ ,ವೀರೇಶ್, ಸೇರಿದಂತೆ ಗೌಡಗೆರೆ ಗ್ರಾಮದ ಊರಿನ ಹಿರಿಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು