ಪಿಎನ್ಸಿ ಕಂಪನಿಯಿAದ ಅಕ್ರಮ ಮಣ್ಣು ಸಾಗಟ : ರೈತರಿಂದ ಪ್ರತಿಭಟನೆ
ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಗಾರದೇವರಹಟ್ಟಿ ಸಮೀಪ ಸೋಮಲಕೆರೆ ವ್ಯಾಪ್ತಿಯ ಸವೇ ನಂಬರ್ 76 ರ ಜಮೀನಿನಲ್ಲಿ ಪಿಎನ್ಸಿ ಕಂಪನಿಯವರು ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ರಾಜ್ಯ ರೈತ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಾಕ್ಷ ರೆಡ್ಡಿಹಳ್ಳಿ ವೀರಣ್ಣ ಹಾಗೂ ರೈತ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಣ್ಣು ಸಾಗಿಸುವ ವಾಹನಗಳನ್ನು ತಡೆದು ಲಾರಿಗಳಿಗೆ ಅಡ್ಡವಾಗಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರೆಡ್ಡಿಹಳ್ಳಿ ವೀರಣ್ಣ ಈಗಾಗಲೇ ಡಿಆರ್ಡಿ ಓಗೆ ಸುಮಾರು 2700 ಹೆಕ್ಟರ್ ಅಮೃತ ಮಹಲ್ ಕಾವಲ್ ಜಮೀನು ನೀಡಲಾಗಿದೆ. ಇದರ ಸಮೀಪ ಸುಮಾರು 2000 ಹೆಕ್ಟೇರ್ ಭೂಮಿಯನ್ನು ಸೊಲಾರ್ ಕಂಪನಿಗೆ ನೀಡಲಾಗಿದೆ.
ಉಳಿದ ಭೂಮಿಯಲ್ಲಿ ಜಾನುವಾರುಗಳ ಮೇವಿಗಾಗಿ ಇರುವಂತಹ ಗೋಮಾಳಗಳಲ್ಲಿ 10ಕ್ಕೂ ಹೆಚ್ಚು ಅಡಿ ಮಣ್ಣ ಸಾಗಾಟ ಮಾಡಿದರೆ ಜಾನುವಾರುಗಳಿಗೆ ಸಮಸ್ಯೆಯಾಗಿತ್ತದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರ 3000 ಜಾನುವಾರುಗಳಿದ್ದು ಮೇವಿನ ಆಸರೆಯಾಗಿ ಈ ಗೋಮಾಳ ಇದೆ ಆದರೆ ಈ ಗೋಮಾದಲ್ಲೂ 10ಕ್ಕೆ ಹೆಚ್ಚು ಅಡಿ ಮಣ್ಣು ತೆಗೆದು ಮಣ್ಣು ರಸ್ತೆಗೆ ಸಾಗಾಟ ಮಾಡುತ್ತಿದ್ದಾರೆ ಇದರಿಂದ ಇಲ್ಲಿನ ಭೂಮಿ ಫಲವತ್ತತೆ ಕಳೆದುಕೊಳ್ಳುವುದರ ಜೊತೆಗೆ ಪರಸರ ನಾಶವಾಗುತ್ತದೆ
ಇಲ್ಲಿ ಓಡಾಡು ಲಾರಿಗಳಿಂದ ಬರುವ ದೂಳು ಫಸಲಿನ ಮೇಲೆ ಕುಳಿತು ಬೆಳೆ ನಾಶವಾಗಿ ಹೋಗುತ್ತದೆ ಆದುದರಿಂದ ಮಣ್ಣು ಸಾಗಾಟ ಮಾಡಕೂಡದು ಎಂದು ಪ್ರತಿಭಟಿಸಿದರು.
ಗ್ರಾಮಪಂಚಾಯಿತಿ ಸದಸ್ಯ ದೊರಬೈಯಣ್ಣ ಮಾತನಾಡಿ ಈ ಭೂಮಿಯು ಸರ್ಕಾರಿ ಭೂಮಿಯಾಗಿದ್ದು ಇದು ಸರ್ಕಾರದಿಂದ ಮಂಜೂರಾಗಿದೆ ಎಂದು ಹೇಳುತ್ತಾರೆ ಆದರೆ ಇಲ್ಲಿ ಯಾವುದೇ ದಾಖಲಾತಿಗಳು ಇಲ್ಲ ಇಂತಹ ಫಲವತ್ತಾದ ಜಮೀನಿನಲ್ಲಿ 10 ಅಡಿಗೂ ಹೆಚ್ಚು ಮಣ್ಣು ತೆಗೆದು ಲಾರಿಯ ಮೂಲಕ ರಸ್ತೆ ನಿರ್ಮಾಣಕ್ಕೆ ಸಾಗಿಸುತ್ತಾರೆ ಇದರಿಂದ ಸುತ್ತಮುತ್ತಲಿನ ವಾತಾವರಣ ಧೂಳಿನ ಕೂಡಿದ್ದು, ಜೊತೆಗೆ ಈ ಸೋಮಲಾನ ಕೆರೆಗೆ ಹೋಗೋಕೆ ಸಮಸ್ಯೆಯಾಗುತ್ತಿದೆ ಇಲ್ಲಿಗೆ ಮಣ್ಣು ಹೊಡೆಯುವುದು ನಿಲ್ಲಿಸಲದಿದ್ದರೆ ನಾವು ಗ್ರಾಮಸ್ಥರು ಹಾಗೂ ರೈತರು ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠ ಮೂರ್ತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿಕುಮಾರ್, ರೈತ ಮುಖಂಡರಾದ ವೀರೇಶ್, ಶಿವಣ್ಣ ದೇವರಹಳ್ಳಿ, ರಾಜಣ್ಣ, ಚಂದ್ರಣ್ಣ ಸೇರಿದಂತೆ ಇತರ ರೈತರಿದ್ದರು .