ಮಾಜಿ ಸಂಸದ ಶಶಿಕುಮಾರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಸಾಧ್ಯತೆ : ಚಳ್ಳಕೆರೆ, ಮೊಳಕಾಲ್ಮೂರು ಕ್ಷೇತ್ರದ ಮೇಲೆ ಕಣ್ಣು

ಚಳ್ಳಕೆರೆ : ಕರ್ನಾಟಕದ ವಿಧಾನಸಭಾ ಚುನಾವಣೆ ಸಮೀಪಿಸುತಿದ್ದಂತೆ ಬದಲಾದ ರಾಜಕೀಯ ರಾಜಾಕರಣದಲ್ಲಿ ಪ್ರತಿನಿತ್ಯವೂ ಒಂದಿಲ್ಲೊAದು ಬದಲಾವಣೆ ಕಾಣಬಹುದು
ಅದರಂತೆ ಚುನಾವಣೆಗೆ ಇನ್ನೂ ಆರು ತಿಂಗಳ ಬಾಕಿ ಇರುವಾಗಲೇ ಚಿತ್ರನಟ ಮಾಜಿ ಸಂಸದರಾದ ಶಶಿಕುಮಾರ್ ಪಕ್ಷ ಬದಲಾವಣೆ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಬಾರೀ ಚರ್ಚೆಯಾಗುತ್ತಿದೆ.
ರಾಜಕೀಯ ಚದುರಂಗದಾಟದಲ್ಲಿ ಪಕ್ಷ ಬದಲಾವಣೆ ಎಂಬುದು ಮಾಮೂಲಿಯಾಗಿದೆ, ಆಡಳಿತ ಪಕ್ಷದ ಬಿಜೆಪಿ ಪಕ್ಷಕ್ಕೆ ಸೆರ್ಪಡೆಯಾಗುವುದು ರಾಜಾಕೀಯ ವಲಯದಲ್ಲಿ ದಟ್ಟವಾಗಿ ಹಬ್ಬಿದೆ.
ನ.3 ರಂದು ಬೆಂಗಳೂರು ಕೇಂದ್ರ ಕಛೇರಿಯಲ್ಲಿ ರಾಜ್ಯಾದ್ಯಾಕ್ಷ ಹಾಗೂ ಪ್ರಮುಖ ನಾಯಕರುಗಳ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರುವುದು ಬಲ್ಲಮೂಲಗಳಿಂದ ಮಾಹಿತಿ ಹೊರಬಿದ್ದಿದೆ.

ಇನ್ನೂ ರಾಜ್ಯ ರಾಜಕಾರಣದಲ್ಲಿ ಎಸ್‌ಟಿ ಮೀಸಲು ಕ್ಷೇತ್ರವಾದ ಮೊಳಕಾಲ್ಮೂರು ಕ್ಷೇತ್ರ ಹಾಗೂ ಚಳ್ಳಕೆರೆ ಕ್ಷೇತ್ರ ಈ ಎರಡು ಕ್ಷೇತ್ರಗಳು ಎಸ್‌ಟಿ ಮೀಸಲು ಕ್ಷೇತ್ರವಾಗಿರುವುದರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದದಿಂದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸುವ ಸುದ್ದಿ ಹೊರ ಬಿದ್ದಿದೆ,
ಆದ್ದರಿಂದ ಈಗಾಗಲೇ ನಿರಂತರ ಸಂಪರ್ಕದಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಬಿಡು ಬಿಟ್ಟಿರುವ ಶಶಿಕುಮಾರ್ ಮತದಾರರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ.
ಇನ್ನೂ ಕಳೆದ ಬಾರಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದ ಸಂಧರ್ಭದಲ್ಲಿ ಚಳ್ಳಕೆರೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡುವ ಮೂಲಕ ಜನ ಮಾನಸದಲ್ಲಿ ಉಳಿದಿದ್ದಾರೆ, ನಂತರ ಮಾಜಿ ಸಚಿವ ತಿಪ್ಪೇಸ್ವಾಮಿ ವಿರುದ್ಧ ಸ್ಪರ್ಧಿಸಿ ಸೋಲನ್ನುಂಡ ಶಶಿಕುಮಾರ್ 242 ಮತಗಳ ಅಂತರದಲ್ಲಿ ಪರಭಾವಗೊಂಡಿದ್ದರು.
ಈಗ 2023ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವ ಮತದಾರರ ಹಿಂಗಿತದಿAದ ಬಿಜೆಪಿ ಪಕ್ಷದಲ್ಲಿ ಎಸ್‌ಟಿ ಮೀಸಲು ಕ್ಷೇತ್ರದ ಚಳ್ಳಕೆರೆ ಹಾಗು ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಹಿಂಗಿತದಿAದ ಈ ಎರಡು ಕ್ಷೇತ್ರಗಳನ್ನು ಗುರಿಯಾನ್ನಾಗಿಸಿಕೊಂಡು ಬಿಜೆಪಿಗೆ ಸೆರ್ಪಡೆಯಾಗುತ್ತಿದ್ದಾರೆ ಎನ್ನುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನೂ ಇದುವರೆಗೆ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕಾದು ನೋಡುವ ತಂತ್ರಗಾರಿಕೆಯ ಬಿಜೆಪಿ ಪಕ್ಷದ ವರಿಷ್ಠರ ನಿಲುವಿಗೆ ಚಳ್ಳಕೆರೆ ಕ್ಷೇತ್ರದಲ್ಲಿ ಸುಮಾರು ಅರ್ಧ ಡಜನ್ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ.
ಇರುವುದರಿಂದ ಶಶಿಕುಮಾರ್ ಹೆಸರು ರಾಜಕೀಯ ವಲಯದಲ್ಲಿ ದಟ್ಟವಾಗಿ ಹರಡಿದೆ ಎನ್ನಬಹುದು.

Namma Challakere Local News
error: Content is protected !!