ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ರೇಖಲಗೆರೆ ಕೆರೆಗೆ ಬಾಗಿನ ಅರ್ಪಣೆ

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ವ್ಯಾಪ್ತಿಯ ರೇಖಲಗೆರೆ ಕೆರೆ ಸತತ 12 ವರ್ಷಗಳ ನಂತರ ಕೋಡಿ ಬಿದ್ದಿರುವುದು ರೈತರ ಮುಖದಲ್ಲಿ ಸಂತಸ ಮೂಡಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಕಾಟಯ್ಯ ಹೇಳಿದ್ದಾರೆ.

ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ರೇಖಲಗೆರೆ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜಾ ವಿಧಿ ವಿಧಾನಗಳ ಪೂರೈಸಿ ಗಂಗಾಮಾತಿಗೆ ಪೂಜೆ ಸಲ್ಲಿಸಿ ಮಾತನಾಡಿದ್ದಾರೆ

ಸದಾಕಾಲ ಬರಗಾಲಕ್ಕೆ ತುತ್ತಾದ ನಮ್ಮ ಹೋಬಳಿಯು ಈ ಬಾರಿ ಉತ್ತಮ ಮಳೆಯಾಗಿ ರೈತರ ಮುಖದಲ್ಲಿ ಸಂತಸ ತಂದಿರುವುದು ಸಂತೋಷದ ವಿಷಯ ನಮ್ಮ ಭಾಗದಲ್ಲಿ ರೇಖಲಗೆರೆ ಕೆರೆ ಸುಮಾರು ಒಂದು ಸಾವಿರ ಹೆಕ್ಟರ್ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದೆ ಈ ಭಾಗದ ರೈತರು ಉತ್ತಮ ಬೆಳೆಯನ್ನು ಬೆಳೆಯಬಹುದು ಎಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಿ ಕಾಟಯ್ಯ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಡಿ.ಲಕ್ಷ್ಮಮ್ಮ, ಉಪಾಧ್ಯಕ್ಷ ಬಿ.ಕಾಟಯ್ಯ, ಪಿಡಿಓ ಎಸ್ ಇನಾಯಿತ್ ಭಾಷಾ, ಸದಸ್ಯ ಬಿ.ವೀರೇಶ್, ಪಿ ಮ್ಯಾಕ್ಲಯ್ಯ, ರಾಜನಾಯ್ಕ, ರಾಮಚಂದ್ರನಾಯ್ಕ ಪಾಲಯ್ಯ, ಬೊಮ್ಮಯ್ಯ, ಕೆ ಟಿ ಮಂಜುಳಾ, ಚಂದ್ರಣ್ಣ ,ಬಸಮ್ಮ, ಓಬಣ್ಣ ಬಿ ಓ ಆರ್ ಎ ಟಿ ಅಶೋಕ್ ,ಆರ್ ಜಯಣ್ಣ, ಮುಖಂಡರಾದ ಸಣ್ಣ ಪಾಲಯ್ಯ, ಚಿನ್ನಯ್ಯ ,ಪೂಜಾರಿ ತಿಪ್ಪೇಸ್ವಾಮಿ ,ಟಿ ತಿಪ್ಪೇಸ್ವಾಮಿ, ಶಿಕ್ಷಕರಾದ ಅರುಣ ಕುಮಾರ್, ಅಂಗನವಾಡಿ ಕಾರ್ಯಕರ್ತೆ ಭಾಗವಹಿಸಿದ್ದರು

Namma Challakere Local News
error: Content is protected !!