ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ನನ್ನನಾಡು, ನನ್ನಹಾಡು ಕೋಟಿ ಕಂಠ ಗೀತಗಾಯನ
ನಮ್ಮ ನಾಡು ನುಡಿ ನೆಲ ಜಲದ ಕುರಿತು ಶಾಲಾ ಕಾಲೇಜು ವಿದ್ಯಾಥಿ9ಗಳಲ್ಲಿ ಅಭಿಮಾನ ಮೂಡಿಸಲು ಕೋಟಿ ಕಂಠ ಗೀತಗಾಯನ ಕಾರ್ಯಕ್ರಮ ಸಹಕಾರಿ ಎಂದು ಪಿಆರ್ಪುರ ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್ ಚನ್ನಕೇಶವ ಹೇಳಿದರು
ಗ್ರಾಮದ ಪಾವಗಡ ರಸ್ತೆಯ ಸರ್ವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಾಗೂ ಸರ್ವೋದಯ ಶಿಕ್ಷಣ ಸಂಸ್ಥೆಯ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕೋಟಿ ಕಂಠ ಗೀತಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಸರ್ಕಾರ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ರಾಜ್ಯದ ಎಲ್ಲಾ ಶಾಲಾ ಕಾಲೆಜುಗಳಲ್ಲಿ ಈ ಕಾರ್ಯಕ್ರಮ ಜಾರಿಗೆ ತಂದು ನಮ್ಮ ಸಮುದಾಯದ ಜನರೂ ಸೇರಿದಂತೆ ವಿದ್ಯಾರ್ಥಿಗಳಿಗೆ ನಾಡು ನುಡಿ ಕನ್ನಡದ ಪರಂಪರೆಯನ್ನು ತಿಳಿಸಲು ಈ ಕಾರ್ಯಕ್ರಮ ಉಪಯುಕ್ತ ಎಂದರು
ಸರ್ಕಾರದ ನಿರ್ದೇಶನದಂತೆ ಶಾಲಾ ವಿದ್ಯಾರ್ಥಿಗಳು, ಶಾಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರಿಗೆ ನಮ್ಮ ಕವಿಗಳು ಬರೆದು ನಮಗೆ ನೀಡಿರುವ ಕನ್ನಡದ ಗೀತೆಗಳನ್ನು ಸಾಮೂಹಿಕವಾಗಿ ಹಾಡುವ ಮೂಲಕ ನಮ್ಮ ದೇಶೀ ಪರಂಪರೆಯನ್ನು ಉಳಿಸಿ ಬೆಳೆಸುವುದಾಗಿದೆ ಎಂದರು
ಹೋಬಳಿ ವ್ಯಾಪ್ತಿಯ ಪಿ ಮಹದೇವಪುರ, ಜಾಜೂರು, ಸಿಎನ್ಹಳ್ಳಿ, ಪಿಆರ್ಪುರ, ಪಗಡಲಬಂಡೆ, ಚೌಳೂರು, ದೊಡ್ಡಚೆಲ್ಲೂರು, ಟಿಎನ್ಕೋಟೆ, ಬೆಳಗೆರೆ, ದೇವರಮರಿಕುಂಟೆ ಎಸ್ದುರ್ಗ ಮತ್ತಿತರೆ ಗ್ರಾಪಂ ಕೇಂದ್ರಗಳು ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವಿವಿಧ ನಾಡು ನುಡಿಯ ಗೀತೆಗಳನ್ನು ಸಾಮೂಹಿಕವಾಗಿ ಹಾಡಿದರು
ಸಂದರ್ಭದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಪಂಚಾಕ್ಷರಪ್ಪ, ಶಾಂತಕುಮಾರ, ಮುಖ್ಯಶಿಕ್ಷಕ ಶ್ರೀ ಶೈಲಮೂರ್ತಿ, ಎಸ್ ರಾಜು, ತಿಮ್ಮಯ್ಯ, ನಾಗರಾಜು, ಮಂಜುನಾಥ, ಶಿವಮೂರ್ತಿ ಕಾಲೇಜು ಅಭಿವೃಧ್ದಿ ಮಂಡಳಿಯ ಪದಾಧಿಕಾರಿಗಳು ಶಾಲಾ ಕಾಲೇಜು ಬೋಧಕ ಬೋಧಕೇತರ ಸಿಬ್ಬಂದಿ ಗ್ರಾಮಸ್ಥರು ಇದ್ದರು