ಪತ್ರಕರ್ತರ ಮೇಲೆ ಶಾಸಕರ ಗೂಂಡಾವರ್ತನೆ : ಕಾರ್ಯನಿರತ ಪತ್ರಕರ್ತರ ಧ್ವನಿಯಿಂದ ಸರಕಾರಕ್ಕೆ ಒತ್ತಾಯ
ಚಳ್ಳಕೆರೆ : ಪತ್ರಕರ್ತರ ಮೇಲೆ ಮುದ್ದೇಬಿಹಾಳದ ಶಾಸಕರ ಗೂಂಡಾವರ್ತನೆ ಖಂಡಿಸಿ ಚಳ್ಳಕೆರೆ ಕಾರ್ಯನಿರತ ಪತ್ರಕರ್ತರ ಧ್ವನಿಯಿಂದ ತಾಲೂಕು ಕಛೇರಿ ಮುಂದೆ ಪ್ರತಿಭಟಿಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದರು.
ಪತ್ರಕರ್ತ ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಶಾಸಕರ ಗೂಂಡ ವರ್ತನೆ ವಿರುದ್ಧ ಕಾನೂನು ಕ್ರಮ ಜರುಗಿಸಿ ಹಾಗೂ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅ.17ರಂದು ನಾಡಿನ ಪ್ರಮುಖ ದಿನಪತ್ರಿಕೆ ಕನ್ನಡಪ್ರಭದಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಸ್ಥರ ಗ್ರಾಮಗಳಿಗೆ ಮಂಜೂರಾದAತಹ 19 ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ತಾಲ್ಲೂಕಿನ ಬೇರೆ ಬೇರೆ ರಸ್ತೆ ಕಾಮಗಾರಿಗಳಿಗೆ ಬಳಕೆಯಾದ ಹಿನ್ನೆಲೆಯಲ್ಲಿ ಈ ಕುರಿತಂತೆ ಪತ್ರಿಕೆಯಲ್ಲಿ ರಸ್ತೆ ಅನುದಾನ ವರ್ಗಾವಣೆಗೆ ಖಂಡನೆ ಎಂಬ ಶೀರ್ಷಿಕೆಯೊಂದಿಗೆ ಬಂದAತಹ ವರದಿಗೆ ತೀವ್ರ ಆಕ್ರೋಶ ಗೊಂಡAತಹ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ್ ತಾಲ್ಲೂಕಿನ ಶಾಸಕರಾದ ಎ.ಎಸ್. ಪಾಟೀಲ್ ನಡಹಳ್ಳಿರವರ ಸರ್ವಾದಿಕಾರಿ ಧೋರಣೆ ಹಾಗೂ ವರದಿಗಾರರಿಗೆ ಮೊಬೈಲ್ ಮೂಲಕ ಜೀವ ಬೆದರಿಕೆ ಒಡ್ಡಿದಲ್ಲದೇ ಅವಾಚ್ಯ ಶಬ್ದ ಉಪಯೋಗಿಸಿದ್ದು ನಿಜಕ್ಕೂ ಮಾಧ್ಯಮದ ಕಗ್ಗೂಲೆಯೇ ಸರಿ. ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ಬುಡವನ್ನೆ ಅಲುಗಾಡಿಸುತ್ತಿರುವುದು ದುರಂತವೇ ಸರಿ.
ತಾಲೂಕು ಅಧ್ಯಕ್ಷ ಡಿ.ವೀರಣ್ಣ ಮಾತನಾಡಿ, ಈ ಕೂಡಲೇ ಶಾಸಕರ ಮೇಲೆ ಅವಾಚ್ಯಶಬ್ದಗಳ ನಿಂದನೆಯ ಹಿನ್ನೆಲೆಯಲ್ಲಿ ಐಪಿಸಿ 504 ಹಾಗೂ ಪತ್ರಕರ್ತರಿಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಕೇಸ್ ದಾಖಲಾಗುವಂತೆ ಕ್ರಮ ವಹಿಸಬೇಕು ಹಾಗೂ ಶಾಸಕರ ರಾಜೀನಾಮೆ ಪಡೆದು ಮಾಧ್ಯಮ ರಂಗದ ಪ್ರತಿನಿಧಿಗಳಿಗೆ ಆಗಿರುವ ಅನ್ಯಾಯವನ್ನು ಈ ಕೂಡಲೇ ಸರಿಪಡಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಚಳ್ಳಕೆರೆ ಶಾಖೆಯ ವತಿಯಿಂದ ಸರ್ಕಾರಕ್ಕೆ ಗ್ರೇಡ್2 ತಹಶೀಲ್ದಾರ್ ಸಂಧ್ಯಾರವರ ಮೂಲಕ ಮನವಿ ಸಲ್ಲಿಸಿದರು.
ಈದೇ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷರು ಡಿ. ವೀರಣ್ಣ, ಕಾರ್ಯಾಧ್ಯಕ್ಷ ಆರ್. ದ್ಯಾಮರಾಜ್, ಉಪಾಧ್ಯಕ್ಷ ಎಂ. ಮಂಜುನಾಥ, ಬಿ.ಟಿ. ಹರೀಶ್, ಪ್ರಧಾನ ಕಾರ್ಯದರ್ಶಿ ಡಿ.ಎಚ್. ರಾಮು, ಕಾರ್ಯದರ್ಶಿ ಎನ್. ವಿನೇಶ್,ಜೆ.ಸಿ. ಶಶಿಕುಮಾರ್, ಕೆ.ಬಿ. ಧನಂಜಯಮೂರ್ತಿ ಸಿ.ಎಂ. ವಿಜಯಕುಮಾರ್, ಸಿ.ಜಿ. ಶ್ರೀನಿವಾಸುಲು, ವಿ. ಲೋಕೇಶ್, ವೆಂಕಟಾಚಲ, ಬಿ.ಎಂ. ಚಂದ್ರಶೇಖರ್, ಸಿ.ಆರ್. ತಿಪ್ಪೇಸ್ವಾಮಿ, ಶರಣಪ್ಪ, ಡಿ, ಧನಂಜಯ, ಆರ್. ರಂಗಸ್ವಾಮಿ, ಬಿ. ಪ್ರಭಾಕರ, ರಾಜೇಶ್ ಐತಾಳ್