ಪುನೀತ್ ಹೆಸರಲ್ಲಿ ರಸ್ತೆ ಹಾಗೂ ವೃತ್ತ ನಿರ್ಮಿಸಲು ವಿವಿಧ ಸಂಘಟನೆಗಳ ಮಧ್ಯೆ ಜಿದ್ದಾ ಜಿದ್ದಿ, ಪೈ ಪೋಟಿ
ಚಳ್ಳಕೆರೆ : ನಗರದಲ್ಲಿ ಪುನೀತ್ ರಾಜ್ ಕುಮಾರ್ ರಸ್ತೆ ಹಾಗೂ ಪುತ್ಥಳಿ ನಿರ್ಮಿಸುವ ಸಲುವಾಗಿ ವಿವಿಧ ಸಂಘಟನೆಗಳ ಮಧ್ಯೆ ಜಿದ್ದಾ ಜಿದ್ದಿ ಪೈ ಪೋಟಿ ನಡೆಯುತ್ತಿದೆ.
ಈಗಾಗಲೇ ನಗರದ ಹೊರವಲಯದ ನ್ಯಾಷನಲ್ ಹೈವೆಯಿಂದ ನಗರದ ಪ್ರವೇಶದ್ವಾರದ ರಸ್ತೆಗೆ ನಗರಸಭೆ ಸಾಮಾನ್ಯ ಸಭೆಯಿಂದ ಅತಿಂಮ ಅನುಮೋಧನೆ ಪಡೆದು ಅದೀಕೃತ ವೃತ್ತಕ್ಕೆ ಹಾಗೂ ರಸ್ತೆಗೆ ಅವಕಾಶ ಸಿಕ್ಕೆದೆಯೆಂದು ನಗರಸಭೆ ಸದಸ್ಯ ಹೊಯ್ಸಳ ಗೊಂವಿದರಾಜ್ ರಸ್ತೆಗೆ ನಾಮಕರಣ ಮಾಡಲು ಅ.28ರಂದು ಪುನೀತ್‌ರಾಜ್ ಕುಮಾರ್ ನಟಿಸಿದ ಗಂಧದ ಗುಡಿ2 ಚಿತ್ರದ ಮೊದಲ ದಿನವೇ ಸಾಂಕೇತಿಕವಾಗಿ ರಸ್ತೆಗೆ ಪುನೀತ್ ರಾಜ್ ಕುಮಾರ್ ರಸ್ತೆ ಹಾಗೂ ವೃತ್ತಕ್ಕೆ ಪೂಜೆ ಮಾಡಲು ನಗರದ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಇನ್ನೂ ಕೆಲವು ಸಂಘಟನೆಗಳು ಕಳೆದ ದಿನಗಳಲ್ಲಿ ನಗರದ ಚಿತ್ರದುರ್ಗ ರಸ್ತೆಯ ಗಾಂಧಿನಗರದ ಹೆಬ್ಬಾಗಿಲಿನ ಕೆ.ಇ.ಬಿ ಸಮೀಪದ ಮುಂಭಾಗದ ರಸ್ತೆಗೆ ಪುನೀತ್ ರಾಜ್‌ಕುಮಾರ್ ವೃತ್ತ ಎಂದು ನಾಮಕರಣ ಮಾಡಿಕೊಡುವಂತೆ ನಗರಸಭೆ ಪೌರಾಯುಕ್ತರಿಗೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳಿAದ ಮನವಿ ಸಲ್ಲಿಸಿದ್ದಾರೆ
ಇದರ ಮಧ್ಯೆ ಈಗಾಗಲೇ 2012ರಲ್ಲಿ ಪುರಸಭೆ ಸದಸ್ಯರಾದ ಎಂ.ಶಿವಮೂರ್ತಿರವರ ಮನವಿಯಂತೆ ಗಾಂಧಿನಗರಕ್ಕೆ ಹೋಗುವ ದ್ವಾರ ಬಾಗಿಲಿಗೆ ಮಹಾತ್ಮ ಗಾಂಧಿ ವೃತ್ತ ಎಂದು ನಾಮಕರಣ ಮಾಡಲು ಅರ್ಜಿ ಸಲ್ಲಿಸಿದ್ದಾರೆ.
ಇದರ ಅನ್ವಯದಂತೆ ಅ.27ರಂದು ವಿವಿಧ ಸಂಘಟನೆಗಳಿAದ ಮಹಾತ್ಮಗಾಂಧಿ ವೃತ್ತ ಸದರಿ ಸ್ಥಳದಲ್ಲಿ ಅನುಮೊಧನೆ ನೀಡುವಂತೆ ಮನವಿ ನೀಡಿದ್ದಾರೆ.
ಬಾಕ್ಸ್ ಮಾಡಿ :
ನಗರದಲ್ಲಿ ಒಂದು ಬಾರಿ ನಗರದ ಯಾವುದೇ ಸ್ಥಳದಲ್ಲಿ ಯಾವುದೇ ವ್ಯಕ್ತಿಯ ಅಥವಾ ಮಹಾತ್ಮರ ನಾಮಕರಣಕ್ಕೆ ಮರು ಅವಕಾಶ ಇಲ್ಲ ಆದರೆ ಇವರ ಕೊಟ್ಟ ಮನವಿಯನ್ನು ಸಭೆಯ ಗಮನಕ್ಕೆ ತಂದು ನಿರ್ಧಾರ ತೆಗೆದುಕೊಳ್ಳಲಾಗುವುದು –
ಪೌರಾಯುಕ್ತ ಸಿ.ಚಂದ್ರಪ್ಪ
ನಗರದಲ್ಲಿ ಹೃದಯ ಭಾಗದಲ್ಲಿ ಇರುವ ಸ್ಥಳ ಕೆಇಬಿ ಮುಂಬಾದ ರಸ್ತೆ ಇಲ್ಲಿ ಹೃದಯವಂತ ಪುನೀತ್ ವೃತ್ತ ನಾಮಕರಣ ಮಾಡಿದರೆ ನಮ್ಮ ಹೃದಯಲ್ಲಿ ಹಚ್ಚಅಳಿಯದೆ ಉಳಿಯುತ್ತಾನೆ ಆದ್ದರಿಂದ ನಗರಸಭೆ ಅನುಮೋಧನೆಗೆ ಮನವಿ ಸಲ್ಲಿಸಿದ್ದೆವೆ ಬಂದ ನಂತರ ಅದಿಕೃತವಾಗಿ ವೃತ್ತ ನಿರ್ಮಿಸಲಾಗುವುದು – ಟಿಜೆ ವೆಂಕಟೇಶ್ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ
ನಾವು ಪುನೀತ್ ಅಭಿಮಾನಿ ಅವರ ಹೆಸರು ಎಂದು ಮರೆಯಲು ಸಾಧ್ಯವಿಲ್ಲ ಆದ್ದರಿಂದ ಅವರ ಹೆಸರು ನಾಮಕರಣಕ್ಕೆ ನಗರದ ಸರ್ವ ಜನಾಂಗದ ಅಭಿಮಾನಿಗಳು ಸೇರಿ ನಗರದ ಕೆಇಬಿ ಮುಂಬಾಗದ ರಸ್ತೆಗೆ ಪುನೀತ್ ರಸ್ತೆ ನಾಮಕರಣ ಮಾಡಲು ತಿರ್ಮಾನಿಸಿ ನಗರಸಭೆಗೆ ಮನವಿ ನೀಡಿದ್ದೆವೆ—
ಪಾಲನೇತ್ರ ನಗರಸಭೆ ನಾಮ ನಿದೇರ್ಶನ ಸದಸ್ಯ
ನಗರದಲ್ಲಿ ಯಾವುದೇ ಪುನೀತ್ ಹೆಸರನೊಂದಿಗೆ ವೃತ್ತ ಹಾಗೂ ರಸ್ತೆಗೆ ಹಾಗಲಿ ನಾಮಕರಣ ಮಾಡಲು ಯಾವುದೇ ಮನವಿ ನಗರಸಭೆ ಮುಂದೆ ಬಂದಿರಲಿಲ್ಲ, ನಾನು ಕೂಡ ಎಲ್ಲಾರನ್ನು ವಿಶ್ವಾಸದಲ್ಲಿ ಇಟ್ಟುಕೊಂಡು ಚಿತ್ರದುರ್ಗ ರಸ್ತೆಯ ಬೈಪಾಸ್ ಮುಖ್ಯ ರಸ್ತೆಗೆ ಪುನೀತ್‌ರಾಜ್ ಕುಮಾರ್ ರಸ್ತೆ ಹಾಗೂ ವೃತ್ತಕ್ಕೆ ನಿರ್ಮಿಸಲು ಅಭಿಮಾನಿಗಳ ಒತ್ತಾಯದ ಬೇರೆಗೆ ನಗರಸಭೆ ಸರ್ವ ಸದಸ್ಯರು ಅನುಮೋಧನೆ ಪಡೆದಿದ್ದೆವೆ, ನಾನು ಕೂಡ ಪಟ್ಟ ಪುನೀತ್ ಅಭಿಮಾನಿ ಆದ್ದರಿಂದ ಸೂಕ್ತವಾದ ಸ್ಥಳ ನಿಗಧಿ ಮಾಡಿದೆ ಹೊರತು ಬೇರೆ ಉದ್ದೇಶವಿಲ್ಲ ಈಗಲೂ ಎಲ್ಲಾ ಅಭಿಮಾನಿಗಳು ಒಗ್ಗೂಡಿ ಪುನೀತ್ ಪುತ್ಥಳಿ ನಿರ್ಮಿಸೋಣ –ನಗರಸಭಾ ಸದಸ್ಯ ಹೊಯ್ಸಳ ಗೊಂವಿದರಾಜ್