ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ನೂರೆಂಟು ಸಮಸ್ಯೆಗಳು : ವಕೀಲರಾದ ಟಿ.ಶಶಿಕುಮಾರ್ ಗಂಭೀರ ಆರೋಪ
ಚಳ್ಳಕೆರೆ : ಗಡಿ ಗ್ರಾಮೀಣ ಭಾಗದ ಗೋಳು ಕೇಳುವರಾರು ಎಂಬ ಸರ‍್ವನಿಕರ ಪ್ರಶ್ನೇಗೆ ಉತ್ತರ ಸಿಗದಾಗಿದೆ
ಹೌದು ನಿಜಕ್ಕೂ ಶೋಚನೀಯ ಇಂತಹ ನೋವನ್ನು ಅನುಭವಿಸುವ ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು,
ಕ್ಷೇತ್ರದ ಕಡೆ ಮುಖ ಮಾಡದೆ ಇರುವುದು ಇದಕ್ಕೆಲ್ಲ ಕಾರಣವಾಗಿದೆ.
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಅತೀ ಹಿಂದೂಳಿದ ಕ್ಷೇತ್ರವಾಗಿದೆ, ಆಂದ್ರದಗಡಿ ರೇಖೆಯನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಸಮಸ್ಯೆಗಳು ನೂರೆಂಟು
ಮೊಳಕಾಲ್ಮೂರು ಕ್ಷೇತ್ರದ ಗೌರಸಮುದ್ರ ಗ್ರಾಮದಲ್ಲಿ ನೆಲಸಿರುವಂತಹ ಮಾರಮ್ಮ ದೇವಿಯ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಭಕ್ತಾದಿಗಳು ದೇವಿಯ ರ‍್ಶನಕ್ಕೆ ಗೌರಸಮುದ್ರ ಗ್ರಾಮಕ್ಕೆ ಆಗಮಿಸುತ್ತಾರೆ
ಆದರೆ ಬರುವಂತ ಭಕ್ತಾದಿಗಳಿಗೆ ಸೂಕ್ತವಾದ ರಸ್ತೆ ವ್ಯವಸ್ಥೆ ಇಲ್ಲ ತಗ್ಗುಗುಂಡಿಗಳಿಂದ ಕೂಡಿದ ವಾಹನ ಸಾವಾರರು ಹರಸಾಹಸ ಪಡುತ್ತಿದ್ದಾರೆ.
ಇನ್ನೂ ರಸ್ತೆ ಉದ್ದಕ್ಕೂ ಸರಿಯಾದ ಸೂಚನೆ ಫಲಕಗಳು ಇಲ್ಲದೆ ಅಪಘಾತವಾಗಿ ಸಂಭಿಸಿಸುತ್ತಾವೆ ಈಗೇ ಒಂದುಕಡೆ ಜನಪ್ರತಿನಿಧಿಗಳ ವೈಪಲ್ಯವಾದರೆ, ಇನ್ನೋಂದೆಡೆ ಅಧಿಕಾರಿಗಳ ವೈಪಲ್ಯ ಎದ್ದು ಕಾಣುತ್ತದೆ
ಶಾಲೆಯ ಮಕ್ಕಳು ಸಹ ಮನೆಗೆ ಹೋಗುವ ಸಂರ‍್ಭದಲ್ಲಿ ಅತೀ ವೇಗದ ವಾಹನಗಳಿಗೆ ಡಿಕ್ಕಿ ಹೊಡೆದು ಘಾಯಗಳಾಗಿ ಆಸ್ಪತ್ರೆಗೆ ಸೇರಿರುವ ಘಟನೆಗಳು ಇವೆ.
ಇನ್ನೂ ಸಂಬಂಧ ಪಟ್ಟ ಇಲಾಖೆ ಸರ‍್ವಜನಿಕರ ಸೇವೆಗೆ ಸುರಕ್ಷಿತ ರಸ್ತೆ ಸೇವೆಗಳನ್ನು ಹೊದಗಿಸುವರೋ ಕಾದು ನೋಡಬೇಕಿದೆ ಎಂದು ಗೌರಸಮುದ್ರ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ವಕೀಲರಾದ ಟಿ.ಶಶಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.